Advertisement
2020ರ ಬಜೆಟ್ ಮಂಡನೆಯ ವೇಳೆ ಹಾವೇರಿ ಜಿಲ್ಲೆಯ ಶಿಗ್ಗಾವಿ ಮತ್ತು ಕಾರ್ಕಳ ಕ್ಷೇತ್ರದಲ್ಲಿ ನೂತನ ಜವುಳಿ ಪಾರ್ಕ್ ಸ್ಥಾಪಿಸುವ ಸಂಬಂಧ ಘೊಷಣೆ ಯಾಗಿತ್ತು. ಇದು 3 ಸಾವಿರ ಮಂದಿಗೆ ಉದ್ಯೋಗ ಒದಗಿಸುವ ಯೋಜನೆಯಾಗಿದೆ. ಅನಂತರ ಈ ಬಗ್ಗೆ ಹೇಳಿಕೊಳ್ಳುವಂತಹ ಪ್ರಗತಿ ಕಂಡಿರಲಿಲ್ಲ.
Related Articles
Advertisement
ಎಸ್‌ಪಿವಿ ರಚಿಸಿ ಜಾಗ ಹಸ್ತಾಂತರ :
ಗಾರ್ಮೆಂಟ್ ಫ್ಯಾಕ್ಟರಿಯನ್ನು ಸ್ಥಾಪಿಸುವ ಉದ್ಯಮಿಗೆ 25 ಕೋ.ರೂ. ಅಥವಾ ಯೋಜನಾ ವೆಚ್ಚದ ಶೇ.25ರಷ್ಟು ಸಬ್ಸಿಡಿ ದೊರೆಯಲಿದೆ. ವಿಶೇಷ ವಾಹಕ ರಚನೆಯಾದಲ್ಲಿ ಸಬ್ಸಿಡಿ 40 ಕೋ.ರೂ. ಅಥವಾ ಯೋಜನಾ ವೆಚ್ಚದಲ್ಲಿ ಶೇ.40ರಷ್ಟು ಸಿಗುತ್ತದೆ. ಜವುಳಿ ಪಾರ್ಕ್ ಸ್ಥಾಪಿಸಲು ಆಸಕ್ತ ಉದ್ಯಮಿಗಳು ಎಸ್‌ಪಿವಿ ರಚಿಸಿಕೊಂಡು ಅಗತ್ಯ ಜಮೀನನ್ನು ವಶಕ್ಕೆ ಪಡೆದ ಅನಂತರವೇ ಜವುಳಿ ಪಾರ್ಕ್ ಸ್ಥಾಪನೆ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ.
ಮತ್ತಷ್ಟೂ ಕೈಗಾರಿಕೆ ಘಟಕದ ಭರವಸೆ :
ಕಾರ್ಕಳ ಕ್ಷೇತ್ರಕ್ಕೆ ಮತ್ತಷ್ಟು ದೂರದೃಷ್ಟಿಯ ಯೋಜನೆಗಳು ದೊರಕುವ ಭರವಸೆ ಚಿಗುರೊಡೆದಿದೆ. ಜವುಳಿ ಘಟಕದ ಜತೆ ಕಾರ್ಕಳ ಪರಿಸರದಲ್ಲಿ ಕೈಗಾರಿಕೆಗೆ 100 ಎಕರೆ ಪ್ರತ್ಯೇಕ ಭೂಮಿ ಗುರುತಿಸಲು, ಕನ್ನಡ ಭವನ ನಿರ್ಮಾಣಕ್ಕೆ ಜಾಗ ಗುರುತಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದು ಕ್ಷೇತ್ರಕ್ಕೆ ಮತ್ತಷ್ಟೂ ಕೈಗಾರಿಕ ಘಟಕ ತರುವ ಪ್ರಯತ್ನದಲ್ಲಿ ಸಚಿವರು ಇದ್ದಾರೆ ಎನ್ನುವುದನ್ನು ಸೂಚಿಸುತ್ತಿದೆ.
ಜವುಳಿ ಪಾರ್ಕ್ ನಿರ್ಮಿಸುವುದಕ್ಕೆ ಸಂಬಂಧಿಸಿ ಜಾಗ ಕಾದಿರಿಸುವ ಕೆಲಸ ಅಂತಿಮಗೊಂಡಿದೆ. ಮುಂದಿನ ದಿನಗಳಲ್ಲಿ ಅದಕ್ಕೆ ವೇಗ ನೀಡುವ ಪ್ರಯತ್ನ ಖಂಡಿತವಾಗಿಯೂ ನಡೆಯಲಿದೆ. – ವಿ. ಸುನಿಲ್‌ಕುಮಾರ್,ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು
ಜವುಳಿ ಪಾರ್ಕ್ ತೆರೆಯಲು ಹೆಬ್ರಿಯ ಚಾರ ಗ್ರಾಮದಲ್ಲಿ 20 ಎಕರೆ ಜಾಗ ಗುರುತು ಮಾಡಿ, ಜಿಲ್ಲಾಧಿಕಾರಿಗಳಿಂದ ಸರಕಾರಕ್ಕೆ ಅನುಮೋದನೆಗಾಗಿ ಹೋಗಿದೆ. ಈ ಹಿಂದೆ ಮಿಯ್ನಾರು ಭಾಗದಲ್ಲಿ ಜಾಗದ ಹುಡುಕಾಟ ನಡೆಸಲಾಗಿತ್ತು. – ಶಿವಶಂಕರ್, ಅಸಿಸ್ಟೆಂಟ್ ಡೈರೆಕ್ಟರ್ ಕೈಮಗ್ಗ ಮತ್ತು ಜವಳಿ ಇಲಾಖೆ ಉಡುಪಿ
-ಬಾಲಕೃಷ್ಣ ಭೀಮಗುಳಿ