Advertisement

ಕಾರ್ಕಳ : ಅರ್ಭಿ ಫಾಲ್ಸ್ ನಲ್ಲಿ ಮುಳುಗಿ ಕಾಲೇಜು ವಿದ್ಯಾರ್ಥಿನಿ ಸಾವು

06:45 PM Aug 02, 2021 | Team Udayavani |

ಕಾರ್ಕಳ : ಈಜಲು ಹೋದ ವಿದ್ಯಾರ್ಥಿನಿಯೊಬ್ಬಳು ನೀರಿನಲ್ಲಿ ಮುಳುಗಿ ಸಾವನ್ನಪಿದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿರುವ ಅರ್ಭಿ ಫಾಲ್ಸ್ ನಲ್ಲಿ ಸೋಮವಾರ ಸಂಭವಿಸಿದೆ.

Advertisement

ವರ್ಷಿತಾ ನೀರಿನಲ್ಲಿ ಮುಳುಗಿ ಮೃತಪಟ್ಟ ವಿದ್ಯಾರ್ಥಿನಿ, ಮೂಲತಃ ಮಂಗಳೂರಿನವಳಾದ ವರ್ಷಿತಾ ಕಾರ್ಕಳದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಯೊಟೆಕ್ ವಿಭಾಗದಲ್ಲಿ ಕಲಿಯುತಿದ್ದಳು ಎನ್ನಲಾಗಿದೆ.

ಈಕೆ ವಿದ್ಯಾರ್ಥಿಗಳಿಬ್ಬರ ಜೊತೆ ಪಾಲ್ಸ್ ಗೆ ತೆರಳಿದ್ದು ಈಜಲೆಂದು ನೀರಿಗೆ ಇಳಿದಿದ್ದಳು. ಈ ವೇಳೆ ಮುಳುಗಿದ್ದಾಳೆ ಎನ್ನಲಾಗಿದೆ, ಬಳಿಕ ಅಗ್ನಿಶಾಮಕ ದಳದ ಸಹಾಯದಿಂದ ಮೃತದೇಹವನ್ನು ನೀರಿನಿಂದ ಮೇಲಕ್ಕೆ ತರಲಾಯಿತು. ಅರ್ಭಿ ಫಾಲ್ಸ್ ನಿಷೇಧಿತ ಪ್ರದೇಶವಾಗಿದೆ.

ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ಕೇರಳ, ಮಹಾರಾಷ್ಟ್ರದಿಂದ ಬರುವವರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ : ಗೋವಾ ಸರ್ಕಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next