Advertisement

ಕಾರ್ಕಳ ಕೋರ್ಟ್‌ ಸ್ಥಳಾಂತರ

11:50 PM Apr 01, 2019 | sudhir |

ಕಾರ್ಕಳ: ಪೊಲೀಸ್‌ ಠಾಣೆ ಸಮೀಪದಲ್ಲಿರುವ ನ್ಯಾಯಾಧೀಶರ ವಸತಿಗೃಹಕ್ಕೆ ಕಾರ್ಕಳ ಕೋರ್ಟ್‌ ಸ್ಥಳಾಂತರಗೊಂಡು ಎ. 1ರಿಂದ ಕಾರ್ಯಾಚರಿಸುತ್ತಿದೆ.

Advertisement

ಐತಿಹಾಸಿಕ ಹಿನ್ನೆಲೆಯ ಕಾರ್ಕಳ ಕೋರ್ಟ್‌ ಶತಮಾನಗಳಿಂದ ಪೆರ್ವಾಜೆ ಎಂಬಲ್ಲಿ ಕಾರ್ಯಾಚರಿಸುತ್ತಿತ್ತು. ಹೊಸ ಕಟ್ಟಡ ನಿರ್ಮಾಣಕ್ಕಾಗಿ ಸರಕಾರದಿಂದ ಅನುದಾನ ಮಂಜೂರುಗೊಂಡ ಹಿನ್ನೆಲೆಯಲ್ಲಿ ಹಳೆ ಕಟ್ಟಡವನ್ನು ಕೆಡವಿ ಅದೇ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣವಾಗಲಿದೆ. ಹೀಗಾಗಿ ತಾತ್ಕಾಲಿಕವಾಗಿ ಅಂದರೆ, ಕಟ್ಟಡ ಕಾಮಗಾರಿ ಪೂರ್ಣವಾಗುವ ತನಕ ಕೋರ್ಟ್‌ ನ್ಯಾಯಾಧೀಶರ ವಸತಿ ಗೃಹಕ್ಕೆ ಸ್ಥಳಾಂತರಗೊಂಡಿದೆ. ನೂತನ ಕೋರ್ಟ್‌ ಕಟ್ಟಡಕ್ಕಾಗಿ 15 ಕೋಟಿ ರೂ. ಮಂಜೂರಾಗಿದ್ದು, ಸದ್ಯದಲ್ಲೇ ಕಾಮಗಾರಿಗೆ ಚಾಲನೆ ದೊರೆಯಲಿದೆ.

ಹಿರಿಯ ಸಿವಿಲ್‌ ಮತ್ತು ಎಸಿಜೆಎಂ ನ್ಯಾಯಾಲಯ, ಪ್ರಧಾನ ಸಿವಿಲ್‌ ಮತ್ತು ಜೆಎಂಎಫ್ಸಿ ನ್ಯಾಯಾಲಯ, ಹೆಚ್ಚುವರಿ ಸಿವಿಲ್‌ ಮತ್ತು ಜೆಎಂಎಫ್ಸಿ ನ್ಯಾಯಾಲಯ, ಎರಡನೇ ಹೆಚ್ಚುವರಿ ಸಿವಿಲ್‌ ಮತ್ತು ಜೆಎಂಸಿ ನ್ಯಾಯಾಲಯ ಪೊಲೀಸ್‌ ಠಾಣೆ ಹಾಗೂ ಅಗ್ನಿಶಾಮಕ ಕಚೇರಿ ಬಳಿಯಲ್ಲಿರುವ ಮೂರು ವಸತಿಗೃಹಗಳಿಗೆ ಸ್ಥಳಾಂತರಗೊಂಡಿದೆ.

ಬಾರ್‌ ಅಸೋಸಿಯೇಶನ್‌, ಕಾನೂನು ನೆರವು ಸಮಿತಿ, ಮಧ್ಯಸ್ಥಿಕೆ ಕೇಂದ್ರವೂ ಕೋರ್ಟ್‌ ಸಮೀಪದಲ್ಲಿ ಕಾರ್ಯನಿರ್ವಹಿಸಲಿದೆ. ಕೋರ್ಟ್‌ಗಾಗಿ ತಮ್ಮ ವಸತಿಗೃಹವನ್ನು ನೀಡಿದ ಮೂವರು ನ್ಯಾಯಾಧೀಶರು ಬಾಡಿಗೆ ಮನೆಗಳಲ್ಲಿ ವಾಸ್ತವ್ಯ ಹೂಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next