Advertisement

ಕಾರ್ಕಳ: ಶ್ವಾನಗಳಿಗಾಗಿ ಕ್ಯಾನಲ್‌ ಹೌಸ್‌

11:20 PM Jun 12, 2019 | sudhir |

ಕಾರ್ಕಳ: ನಕ್ಸಲರ ಶೋಧ, ನೆಲ ಬಾಂಬ್‌ ಪತ್ತೆಗಾಗಿ ಎಎನ್‌ಎಫ್ ಸಿಬಂದಿ ಜತೆ ಶ್ವಾನಗಳೂ ಇರಲಿವೆ. ಅದಕ್ಕಾಗಿ ರಾಮ ಸಮುದ್ರದ ಬಳಿಯಲ್ಲಿರುವ ಎಎನ್‌ಎಫ್ ಕ್ಯಾಂಪಸ್‌ನಲ್ಲಿ ಶ್ವಾನಗಳಿಗಾಗಿ 22 ಲಕ್ಷ ರೂ. ವೆಚ್ಚದಲ್ಲಿ ಕ್ಯಾನಲ್‌ಹೌಸ್‌ ನಿರ್ಮಾಣಗೊಳ್ಳುತ್ತಿದೆ. 1200 ಚದರ ಅಡಿ ವಿಸೀ¤ರ್ಣದಲ್ಲಿ ಈ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು, 4 ತಿಂಗಳೊಳಗಡೆ ಕ್ಯಾನಲ್‌ ಹೌಸ್‌ ಕಾಮಗಾರಿ ಪೂರ್ಣಗೊಳ್ಳಲಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ 4 ಶ್ವಾನಗಳು ಕ್ಯಾನಲ್‌ ಹೌಸ್‌ನಲ್ಲಿರಲಿದೆ.

Advertisement

ತರಬೇತಿ
ಬೆಂಗಳೂರಿನ ಸಿ.ಆರ್‌.ಪಿ.ಎಫ್ನಲ್ಲಿ ಬೆಲ್ಜಿಯಂ ಶಫ‌ರ್ಡ್‌ ಎಂಬ ತಳಿಯ ಶ್ವಾನಗಳಿಗೆ ತರಬೇತಿ ನೀಡಲಾಗುತ್ತಿದೆ. ಒಟ್ಟು ನಾಲ್ಕು ಶ್ವಾನಗಳಿಗೆ ತಲಾ ಇಬ್ಬರಂತೆ ಎಂಟು ಸಿಬಂದಿಗಳನ್ನು ನೇಮಕ ಮಾಡಲಾಗಿದೆ. ನಕ್ಸಲ್‌ರ ಜಾಡು ಹಿಡಿಯುವುದು, ನೆಲ ಬಾಂಬ್‌ ಪತ್ತೆ ಸೇರಿದಂತೆ ಹಲವು ಅಪರಾಧಗಳಿಗೆ ಸಂಬಂಧಿಸಿದಂತೆ ಪತ್ತೆ ಹಚ್ಚುವ ವಿಶೇಷ ತರಬೇತಿಯನ್ನು ನೀಡಲಾಗುತ್ತಿದೆ. ಇನ್ನು ಮುಂದೆ ನಕ್ಸಲ್‌ ಕೂಬಿಂಗ್‌ ಕಾರ್ಯಾಚರಣೆ ವೇಳೆ ಈ ಶ್ವಾನಗಳು ಎಎನ್‌ಎಫ್ ಸಿಬಂದಿ ಜತೆ ಅರಣ್ಯಗಳಿಗೆ ತೆರಳಿ ಕಾರ್ಯಾಚರಣೆ ನಡೆಸಲಿವೆ.

ಹೆಚ್ಚಿನ ತರಬೇತಿ
ಶ್ವಾನಗಳಿಗೆ ಈಗಾಗಲೇ ಬೆಂಗಳೂರಿನಲ್ಲಿ ತರಬೇತಿ ನೀಡಲಾಗುತ್ತಿದೆ. ಕಾಮಗಾರಿ ಮುಗಿದ ಬಳಿಕ ಆ ಶ್ವಾನಗಳನ್ನು ಇಲ್ಲಿಗೆ ತಂದು ಹೆಚ್ಚಿನ ತರಬೇತಿ ನೀಡಲಾಗುವುದು.
-ಬೆಳ್ಳಿಯಪ್ಪ ಡಿವೈಎಸ್ಪಿ, ಎಎನ್‌ಎಫ್ ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next