Advertisement

ಕಾರ್ಕಳ: 1.99 ಕೋಟಿ. ರೂ. ವೆಚ್ಚದಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯ ನಿರ್ಮಾಣ

02:22 AM Apr 21, 2019 | sudhir |

ಕಾರ್ಕಳ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿನಿಯರಿಗಾಗಿ 1.99 ಕೋಟಿ ರೂ. ವೆಚ್ಚದ ವಸತಿ ನಿಲಯ ನಗರದ ಪೊಲೀಸ್‌ ಠಾಣೆ ಪಕ್ಕದಲ್ಲಿ ನಿರ್ಮಾಣವಾಗುತ್ತಿದೆ.

Advertisement

ಅತ್ಯಾಧುನಿಕ ಸೌಲಭ್ಯ
ಉಡುಪಿ ನಿರ್ಮಿತಿ ಕೇಂದ್ರವು ಕಟ್ಟಡ ಕಾಮಗಾರಿ ನಡೆಸುತ್ತಿದ್ದು, ಡಿಸೆಂಬರ್‌ ವೇಳೆಗೆ ಕಾಮಗಾರಿ ಪೂರ್ಣವಾಗಲಿದೆ. 9,500 ಚದರಡಿ ವಿಸ್ತಾರದಲ್ಲಿ ನಿರ್ಮಾಣಗೊಳ್ಳುತ್ತಿರುವ ಒಂದಸ್ತಿನ ಕಟ್ಟಡವು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಲಿದೆ. ಗ್ರಂಥಾಲಯ, ಕಂಪ್ಯೂಟರ್‌ ಕೊಠಡಿ, ಸೋಲಾರ್‌ ವ್ಯವಸ್ಥೆ, ನೀರಿನ ಸಂಪ್‌, ಕಾಂಪೌಂಡ್‌ ಒಳಗೊಂಡಿದೆ.

ಪದವಿ ಹಾಗೂ ಉನ್ನತ ವ್ಯಾಸಂಗ ಮಾಡುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸುಮಾರು 100 ಮಂದಿ ವಿದ್ಯಾರ್ಥಿನಿಯರಿಗೆ ವಸತಿ ಸೌಲಭ್ಯ ದೊರೆಯಲಿದೆ.

ಶಾಸಕ ವಿ. ಸುನಿಲ್‌ ಕುಮಾರ್‌ ಅವರ ಮನವಿ ಮೇರೆಗೆ ಅಂದಿನ ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಅವರು ಕಾರ್ಕಳಕ್ಕೆ ವಸತಿ ನಿಲಯ ಮಂಜೂರುಗೊಳಿಸಿದ್ದರು. ವಸತಿನಿಲಯಕ್ಕೆ ಸೂಕ್ತ ನಿವೇಶನದ ಹುಡುಕಾಟ ನಡೆದ ಕಾರಣ ಕಾಮಗಾರಿಗೆ ಚಾಲನೆ ದೊರೆಯುವಾಗ ತುಸು ವಿಳಂಬವಾಗಿದ್ದರೆ, ಮರಳಿನ ಅಭಾವದಿಂದ ಮತ್ತೂಮ್ಮೆ ಕಾಮಗಾರಿ ಕೆಲಕಾಲ ಸ್ಥಗಿತಗೊಂಡಿತ್ತು.

ಹಾಸ್ಟೆಲ್‌ ಪ್ರಸ್ತುತ ಬಾಡಿಗೆ ಕಟ್ಟಡದಲ್ಲಿದೆ
ಪ್ರಸ್ತುತ ಜಯಂತಿ ನಗರ ಎಂಬಲ್ಲಿ ಬಾಡಿಗೆ ಆಧಾರದಲ್ಲಿ ಖಾಸಗಿ ಕಟ್ಟಡದಲ್ಲಿ ಹಾಸ್ಟೆಲ್‌ ನಡೆಸಲಾಗುತ್ತಿದೆ. ಹೊಸ ಕಟ್ಟಡ ಕಾಮಗಾರಿ ಪೂರ್ಣಗೊಂಡ ತತ್‌ಕ್ಷಣ ಇಲ್ಲಿರುವ 50 ವಿದ್ಯಾರ್ಥಿನಿಯರನ್ನು ವರ್ಗಾಯಿಸಲಾಗುವುದು. ಬಂಡಿಮಠ ಕೆಎಸ್‌ಆರ್‌ಟಿಸಿ ಪಕ್ಕದಲ್ಲಿ ಬಾಲಕರ ವಸತಿ ನಿಲಯವೂ ಇದ್ದು, ಸುಮಾರು 80 ವಿದ್ಯಾರ್ಥಿಗಳು ಅಲ್ಲಿ ನೆಲೆಸಿರುತ್ತಾರೆ.
-ವಿಜಯ ಕುಮಾರ್‌, ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ

Advertisement
Advertisement

Udayavani is now on Telegram. Click here to join our channel and stay updated with the latest news.

Next