ಅಜೆಕಾರು: ಪರಿಸರಕ್ಕೆ ಮಾನವನ ಕೊಡುಗೆ ಶೂನ್ಯ. ವರ್ಷದಿಂದ ವರ್ಷಕ್ಕೆ ಪರಿಸರ ನಾಶವಾಗುತ್ತಿದೆ. ಪರಸರ ಉಳಿಸುವಲ್ಲಿ ಪ್ರತಿಯೋರ್ವರ ಜವಾಬ್ದಾರಿ ಇದೆ ಎಂದು ಪುರಸಭೆ ಮಾಜಿ ಉಪಾಧ್ಯಕ್ಷ, ಗಿರಿಧರ್ ನಾಯಕ್ ಹೇಳಿದರು.
ವಿನಾಯಕ ಫ್ರೆಂಡ್ಸ್ ತೆಳ್ಳಾರು ರಸ್ತೆ ಕಾರ್ಕಳ ಇದರ ವತಿಯಿಂದ ನಡೆದ ಕೆಸರು ಗದ್ದೆ ಕೂಟ, ಪರಿಸರ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ
ಪರಿಸರ ಉತ್ಸದ ಮೂಲಕ ರೈತರನ್ನು ಬೆಂಬಲಿಸುವ ಕೆಲಸ ನಮ್ಮಿಂದ ಅಗಬೇಕು. ಮರಗಳ ನಾಶದಿಂದಾಗಿ ಪ್ರಕೃತಿಯ ಅಸಮತೋಲನ ಉಂಟಾಗಿದ್ದು ಇದೇ ಕಾರಣದಿಂದಾಗಿ ಹವಾಮಾನ ವೈಪರೀತ್ಯ ಉಂಟಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮೀಣ ಕ್ರೀಡೆಗಳಾದ ಹಗ್ಗ ಜಗ್ಗಟ, ಕೆಸರಿನಲ್ಲಿ ಓಟ, ಹ್ಯಾಂಡ್ ಬಾಲ್, ಕಬ್ಬಡಿ ಪಂದ್ಯಾಟಗಳನ್ನು ಆಯೋಜಿಸಲಾಗಿತ್ತು. ಆಟೋಟ ಸ್ಪರ್ಧೆಯಲ್ಲಿ ವಿಜೇತ ಕ್ರೀಡಾಪಟುಗಳಿಗೆ ಗಿಡವನ್ನು ನೀಡಲಾಯಿತು.
ಈ ಸಂದರ್ಭಶಿವರಾಮ ಕಾರಂತ ಪ್ರಶಸ್ತಿ ವಿಜೇತ, ಉಪನ್ಯಾಸಕ ಸುರೇಶ್ ಮರಿಣಾಪುರ ಅವರನ್ನು ಸಮ್ಮಾನಿಸಲಾಯಿತು. ಪುರಸಭಾ ಸದಸ್ಯ ಲಕ್ಷ್ಮೀ ನಾರಾಯಣ ಮಲ್ಯ, ವಿನಾಯಕ ಬೆಟ್ಟು ದೇವಸ್ಥಾನದ ಆಡಳಿತ ಮೊಕ್ತೇಸರ ಸಾಧು ಶೆಟ್ಟಿ, ಉದ್ಯಮಿ ಜಯಂತ ಭಂಡಾರಿ, ವಿನಾಯಕ್ ಫ್ರೆಂಡ್ಸ್ ಉಪಾಧ್ಯಕ್ಷ ಹರೀಶ್ ದೇವಾಡಿಗ, ರವಿಕಲಾ ಮಲ್ಯ ಉಪಸ್ಥಿತರಿದ್ದರು.
ಶಾಂತರಾಮ್ ಪೈ, ಸದಸ್ಯೆ ಭಾರತಿ ಅಮೀನ್ ಭಾಗವಹಿಸಿದ್ದರು. ಹರೀಶ್ ದೇವಾಡಿಗ ಸ್ವಾಗತಿಸಿ, ವಂದಿಸಿದರು.