ಮುಂಬಯಿ: ಕರೀಷ್ಮಾ ತನ್ನಾ ಬಾಲಿವುಡ್ ನ ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ಕಿರುತೆರೆ ಹಾಗೂ ಸಿನಿಮಾರಂಗದಲ್ಲಿ ಸಮಾನವಾಗಿ ಮಿಂಚಿರುವ ಅವರು ಸದ್ಯ ತನ್ನ ಮುಂಬರುವ ವೆಬ್ ಸಿರೀಸ್ ʼ ಸ್ಕೂಪ್ʼ ನ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
ಪ್ರಚಾರದ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ತನ್ನ ತಂದೆ ಹಾಗೂ ಬಾಲ್ಯದ ದಿನಗಳ ಬಗ್ಗೆ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
“ನಾನು ಹುಟ್ಟುವಾಗ ನನ್ನ ತಂದೆ ಖುಷಿಯಾಗಿರಲಿಲ್ಲ. ಅವರಿಗೆ ಗಂಡು ಮಗು ಬೇಕಿತ್ತು. ಅಪ್ಟಟ ಗುಜರಾತಿ ಕುಟುಂಬದ ಹಾಗೆ ಅವರ ಮೇಲೆ ಒತ್ತಡಗಳಿದ್ದವು ಎಂದು ನನ್ನ ತಾಯಿ ನನ್ನ ಬಳಿ ಹೇಳಿದ್ದರು. ನಾನು ಹುಟ್ಟಿದ ಒಂದು ತಿಂಗಳವರೆಗೆ ನನ್ನ ತಂದೆ ನನ್ನ ಮುಖವನ್ನೇ ನೋಡಿಲ್ಲ. ಮಗ ಹುಟ್ಟಿದರೆ ಜವಬ್ದಾರಿ ತೆಗೆದುಕೊಳ್ಳುತ್ತಿದ್ದ, ಹೆಚ್ಚು ದುಡಿಯುತ್ತಿದ್ದ ಎನ್ನುವುದು ಅವರ ನಂಬಿಕೆ ಆಗಿತ್ತು. ನನ್ನ ತಾಯಿಗೆ ಎರಡು ಹೆಣ್ಣು ಮಕ್ಕಳಿದ್ದರು. ಒಬ್ಬ ಹುಡುಗ ಏನು ಮಾಡುತ್ತಾನೆಯೋ ಅದನ್ನು ಒಬ್ಬ ಹುಡುಗಿಯಾಗಿ ನಾನು ಸಹ ಮಾಡುತ್ತೇನೆ ಎನ್ನುವುದನ್ನು ನಾನು ಅವರಿಗೆ ತೋರಿಸುತ್ತೇನೆ” ಎಂದು ನಟಿ ಹೇಳಿದರು.
ಹನ್ಸಲ್ ಮೆಹ್ತಾ ಅವರ ʼಸ್ಕೂಪ್ʼ ನಲ್ಲಿ ನಟಿ ಕರೀಷ್ಮಾ ಜಾಗೃತಿ ಪಾಠಕ್ ಎನ್ನುವ ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವೆಬ್ ಸಿರೀಸ್ ಜೂ.2 ರಿಂದ ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮ್ ಆಗಲಿದೆ.