Advertisement

Gangavathi:ಕಾರ್ಗಿಲ್‌ ಯುದ್ಧ ವಿಜಯೋತ್ಸವ;ರಜತ ಮಹೋತ್ಸವ ಕಳಸ ರಥ ಯಾತ್ರೆಗೆ ಅದ್ದೂರಿ ಸ್ವಾಗತ

02:21 PM Feb 24, 2024 | Team Udayavani |

ಗಂಗಾವತಿ: ಭಾರತೀಯ ಸೇನೆ ವಿಶ್ವಕ್ಕೆ ಮಾದರಿಯಾಗಿದ್ದು, ಯುದ್ಧ ಮತ್ತು ಪ್ರಕೃತಿ ವಿಕೋಪ ಸೇರಿ ತುರ್ತು ಪರಿಸ್ಥಿತಿಯಲ್ಲಿ ಜನ ಸಾಮಾನ್ಯರ ನೆರವಿಗೆ ಸೈನಿಕರು ಆಗಮಿಸಿ ಮಾನವೀಯತೆ ಮೆರೆದಿದ್ದಾರೆ ಎಂದು ಮಾಜಿ ಸಂಸದ ಎಚ್.ಜಿ. ರಾಮುಲು ಹೇಳಿದರು.

Advertisement

ಅವರು ತಮ್ಮ ನಿವಾಸದಲ್ಲಿ ಸಿಟಿಝನ್ ಆಫ್ ಇಂಡಿಯಾ ಸಂಘಟನೆಯ ಕನ್ಯಾಕುಮಾರಿಯಿಂದ ಕಾಶ್ಮೀರದ ಕಾರ್ಗಿಲ್‌ ವರೆಗೆ ಹಮ್ಮಿಕೊಂಡಿರುವ ಕಾರ್ಗಿಲ್ ವಿಜಯೋತ್ಸವದ ರಜತಮಹೋತ್ಸವ ಕಳಸ ರಥ ಯಾತ್ರೆಗೆ ಅದ್ದೂರಿ ಸ್ವಾಗತ ನೀಡಿ ಮಾತನಾಡಿದರು.

ಕಾರ್ಗೀಲ್ ಯುದ್ಧ ಭಾರತೀಯ ಮಿಲಿಟರಿಗೆ ಸ್ವಾಭಿಮಾನ ಪ್ರಶ್ನಿಸುವ ಯುದ್ಧವಾಗಿತ್ತು. ನೂರಾರು ಸೈನಿಕರು ಹುತಾತ್ಮರಾಗಿ ದೇಶದ ಗಡಿ ಸಂರಕ್ಷಣೆ ಮಾಡಿದ್ದಾರೆ. ದೇಶ ವಾಸಿಗಳು ಯಾವಾಗಲೂ ಸೈನಿಕರಿಗೆ ಗೌರವ ಸಲ್ಲಿಸಬೇಕು. ಯುವಜನರು ಸೈನ್ಯ ಸೇರಬೇಕು. ಪ್ರತಿಯೊಬ್ಬರು ಭಾರತೀಯತೆ ಮೈಗೂಡಿಸಿಕೊಂಡು ದೇಶ ಪ್ರೇಮ ಮೆರೆಯಬೇಕು ಎಂದು ಹೇಳಿದರು.

ದೇಶದ ಸ್ವಾಭಿಮಾನವನ್ನು ಸದಾ ಮೆರೆಸಬೇಕು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಪಾರ್ಸಿ, ಶಿಖ್ ಸೇರಿ ಹಲವು ಸಮುದಾಯದವರು ತ್ಯಾಗ, ಬಲಿದಾನ ಮಾಡಿದ್ದು, ಸ್ವಾತಂತ್ರ್ಯ ನಂತರ ಜನಿಸಿದವರು ಇತಿಹಾಸಕ್ಕೆ ಗೌರವ ಕೊಡಬೇಕು. ಸಿಟಿಝನ್ ಆಫ್ ಇಂಡಿಯಾ ಸಂಘಟನೆಯವರು ಕಳೆದ 25 ವರ್ಷಗಳಿಂದ ಕಾರ್ಗಿಲ್‌ ಯುದ್ಧ ವಿಜಯೋತ್ಸವದ ಮೂಲಕ ಯುವಕರಿಗೆ ದೇಶ ಭಕ್ತಿ ಮೂಡಿಸುತ್ತಿರುವುದು ಗೌರವದ ಕಾರ್ಯವಾಗಿದೆ ಎಂದರು.

Advertisement

ಕಲ್ಮಠದ ಡಾ. ಕೊಟ್ಟೂರು ಸ್ವಾಮೀಜಿ ಮಾತನಾಡಿ, ದೇಶದ ಸ್ವಾಭಿಮಾನದ ಸಂಕೇತವಾಗಿ ಭಾರತೀಯ ಸೈನ್ಯ ಇದುವರೆಗಿನ ಯುದ್ಧ ಮತ್ತು ಸಮುದಾಯದ ಕಾರ್ಯಗಳಲ್ಲಿ ಪಾಲ್ಗೊಂಡಿದೆ. ಮಾರ್ಗದ ಯುದ್ಧ ದುಷ್ಟ ಪಾಕಿಸ್ತಾನ ಕುತಂತ್ರದಿಂದ ಮಾಡಿದ ಯುದ್ಧವಾಗಿದ್ದು, ಸೈನಿಕರು ಪಾಕ್ ಸೈನ್ಯವನ್ನು ಹಿಮ್ಮೆಟ್ಟಿದ ಶೌರ್ಯದ ಪ್ರದರ್ಶನವಾಗಿದೆ ಎಂದು ಹೇಳಿದರು.

ಸಿಟಿಝನ್ ಆಪ್ ಇಂಡಿಯಾ ಸಂಘಟನೆಯ ಕಾರ್ಯಕರ್ತರು ಕಳೆದ 25 ವರ್ಷಗಳಿಂದ ಪ್ರತಿ ವರ್ಷದ ವಿಜಯೋತ್ಸವದ ಕಳಸ ರಥ ಯಾತ್ರೆ ಆಯೋಜಿಸುತ್ತಿರುವುದು ಗೌರವದ ಸಂಕೇತವಾಗಿದೆ ಎಂದರು.

ಮಾಜಿ ಮಂತ್ರಿ ಎಂ.ಮಲ್ಲಿಕಾರ್ಜುನ ನಾಗಪ್ಪ ಮಾಜಿ ಎಂಎಲ್ಸಿ ಎಚ್.ಆರ್. ಶ್ರೀನಾಥ, ಭಾರತೀಯ ಸೇನೆಯ ಮಾಜಿ ಅಧಿಕಾರಿಗಳು ಹಾಗೂ ಸಿಟಿಝನ್ ಆಫ್ ಇಂಡಿಯಾ ಸಂಘಟನೆಯ ಕ್ಯಾಪ್ಟನ್ ಭಂಡಾರಿ, ಶಿವಕುಮಾರ್, ದಿನೇಶ್, ವೀರೇಂದ್ರ, ರಘುರಾಮರೆಡ್ಡಿ, ಮಣಿಕಂಠ, ಮುನಿಸ್ವಾಮಿ, ಶೇಷಾದ್ರಿ, ಗಣೇಶ,ರಾಜಣ್ಣ, ಮುಖಂಡರಾದ ಜೋಗದ ನಾರಾಯಣಪ್ಪ, ಮಹೇಶ ಸಾಗರ,ಪಟ್ಟಣ ಸೌಹಾರ್ದ ಪಟ್ಟಣ ಬ್ಯಾಂಕ್ ರಾಷ್ಟ್ರ ನಿರ್ದೇಶಕ ಕೆ.ಕಾಳಪ್ಪ, ಎಚ್.ಎಂ.ವಿರೂಪಾಕ್ಷ ಸ್ವಾಮಿ, ರಮೇಶ್ ಗೌಳಿ, ಮಂಗಳಮ್ಮ ಗೌಳಿ, ಉದಯಶೇಟ್, ತಿರುಮಲ, ಹನುಮಂತ ರಾಯ, ಸುರೇಶ ಗೌರಪ್ಪ, ವೀರನಗೌಡ, ಆಯೂಭ್, ಮುಸ್ಟೂರು ರಾಜಶೇಖರ ಸೇರಿ ರೋಟರಿ ಕ್ಲಬ್ ಪದಾಧಿಕಾರಿಗಳು ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next