Advertisement
ಅವರು ತಮ್ಮ ನಿವಾಸದಲ್ಲಿ ಸಿಟಿಝನ್ ಆಫ್ ಇಂಡಿಯಾ ಸಂಘಟನೆಯ ಕನ್ಯಾಕುಮಾರಿಯಿಂದ ಕಾಶ್ಮೀರದ ಕಾರ್ಗಿಲ್ ವರೆಗೆ ಹಮ್ಮಿಕೊಂಡಿರುವ ಕಾರ್ಗಿಲ್ ವಿಜಯೋತ್ಸವದ ರಜತಮಹೋತ್ಸವ ಕಳಸ ರಥ ಯಾತ್ರೆಗೆ ಅದ್ದೂರಿ ಸ್ವಾಗತ ನೀಡಿ ಮಾತನಾಡಿದರು.
Related Articles
Advertisement
ಕಲ್ಮಠದ ಡಾ. ಕೊಟ್ಟೂರು ಸ್ವಾಮೀಜಿ ಮಾತನಾಡಿ, ದೇಶದ ಸ್ವಾಭಿಮಾನದ ಸಂಕೇತವಾಗಿ ಭಾರತೀಯ ಸೈನ್ಯ ಇದುವರೆಗಿನ ಯುದ್ಧ ಮತ್ತು ಸಮುದಾಯದ ಕಾರ್ಯಗಳಲ್ಲಿ ಪಾಲ್ಗೊಂಡಿದೆ. ಮಾರ್ಗದ ಯುದ್ಧ ದುಷ್ಟ ಪಾಕಿಸ್ತಾನ ಕುತಂತ್ರದಿಂದ ಮಾಡಿದ ಯುದ್ಧವಾಗಿದ್ದು, ಸೈನಿಕರು ಪಾಕ್ ಸೈನ್ಯವನ್ನು ಹಿಮ್ಮೆಟ್ಟಿದ ಶೌರ್ಯದ ಪ್ರದರ್ಶನವಾಗಿದೆ ಎಂದು ಹೇಳಿದರು.
ಸಿಟಿಝನ್ ಆಪ್ ಇಂಡಿಯಾ ಸಂಘಟನೆಯ ಕಾರ್ಯಕರ್ತರು ಕಳೆದ 25 ವರ್ಷಗಳಿಂದ ಪ್ರತಿ ವರ್ಷದ ವಿಜಯೋತ್ಸವದ ಕಳಸ ರಥ ಯಾತ್ರೆ ಆಯೋಜಿಸುತ್ತಿರುವುದು ಗೌರವದ ಸಂಕೇತವಾಗಿದೆ ಎಂದರು.
ಮಾಜಿ ಮಂತ್ರಿ ಎಂ.ಮಲ್ಲಿಕಾರ್ಜುನ ನಾಗಪ್ಪ ಮಾಜಿ ಎಂಎಲ್ಸಿ ಎಚ್.ಆರ್. ಶ್ರೀನಾಥ, ಭಾರತೀಯ ಸೇನೆಯ ಮಾಜಿ ಅಧಿಕಾರಿಗಳು ಹಾಗೂ ಸಿಟಿಝನ್ ಆಫ್ ಇಂಡಿಯಾ ಸಂಘಟನೆಯ ಕ್ಯಾಪ್ಟನ್ ಭಂಡಾರಿ, ಶಿವಕುಮಾರ್, ದಿನೇಶ್, ವೀರೇಂದ್ರ, ರಘುರಾಮರೆಡ್ಡಿ, ಮಣಿಕಂಠ, ಮುನಿಸ್ವಾಮಿ, ಶೇಷಾದ್ರಿ, ಗಣೇಶ,ರಾಜಣ್ಣ, ಮುಖಂಡರಾದ ಜೋಗದ ನಾರಾಯಣಪ್ಪ, ಮಹೇಶ ಸಾಗರ,ಪಟ್ಟಣ ಸೌಹಾರ್ದ ಪಟ್ಟಣ ಬ್ಯಾಂಕ್ ರಾಷ್ಟ್ರ ನಿರ್ದೇಶಕ ಕೆ.ಕಾಳಪ್ಪ, ಎಚ್.ಎಂ.ವಿರೂಪಾಕ್ಷ ಸ್ವಾಮಿ, ರಮೇಶ್ ಗೌಳಿ, ಮಂಗಳಮ್ಮ ಗೌಳಿ, ಉದಯಶೇಟ್, ತಿರುಮಲ, ಹನುಮಂತ ರಾಯ, ಸುರೇಶ ಗೌರಪ್ಪ, ವೀರನಗೌಡ, ಆಯೂಭ್, ಮುಸ್ಟೂರು ರಾಜಶೇಖರ ಸೇರಿ ರೋಟರಿ ಕ್ಲಬ್ ಪದಾಧಿಕಾರಿಗಳು ಅನೇಕರಿದ್ದರು.