ಶನಿವಾರಸಂತೆ: ನಿವೃತ್ತ ಸೈನಿಕರ ಸಂಘದ ನೇತೃತ್ವದಲ್ಲಿ ಪಟ್ಟಣದ ಭಾರತಿ ಪ್ರಥಮ ದರ್ಜೆ ಕಾಲೇಜು, ವಿಘ್ನೕಶ್ವರ ಬಾಲಕಿಯರ ವಿದ್ಯಾಸಂಸ್ಥೆ, ಕಾವೇರಿ ವಿದ್ಯಾಸಂಸ್ಥೆ, ಸಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ, ಬಾಪೂಜಿ ವಿದ್ಯಾಸಂಸ್ಥೆ, ಆಟೋ ಚಾಲಕರ ಮತ್ತು ವಾಹನ ಮಾಲೀಕರ ಸಂಘ, ರೋಟರಿ ಕ್ಲಬ್, ಶನಿವಾರಸಂತೆ, ದುಂಡಳ್ಳಿ ಮತ್ತು ಹಂಡ್ಲಿ ಗ್ರಾ.ಪಂ.ಗಳ ಸಹಯೋಗದೊಂದಿಗೆ 20ನೇ ವರ್ಷದ ಕಾರ್ಗಿಲ್ ವಿಜಯೋತ್ಸವನ್ನು ಸಂಭ್ರಮದಿಂದ ಆಚರಿಸಲಾಯಿತು.. ಕಾರ್ಗಿಲ್ ವಿಜಯೋತ್ಸವದ ಅಂಗವಾಇ ಸ್ಥಳೀಯ ನಿವೃತ್ತ ಸೈನಿಕರ ಸಂಘದ ಪದಾಧಿಕಾರಿಗಳು, ವಿವಿಧ ವಿದ್ಯಾಸಂಸ್ಥೆ ಗಳ ವಿದ್ಯಾರ್ಥಿ ಸಮೂಹ, ಅದ್ಯಾಕರ ಸಮೂಹ ಪಟ್ಟಣದ ಮುಖ್ಯರಸ್ತೆ ಮೂಲಕ ಕಾರ್ಗಿಲ್ ವಿಜಯೋತ್ಸವದ ಪÃ, ಭಾರತದ ಸೈನಿಕರ ಪರ ಜಯಕಾರ ದೇಶಾಭಿಮಾನದ ಪರ ಘೋಷಣೆಗಳನ್ನು ಮೊಳಗಿಸುತ್ತಾ ಪಟ್ಟಣದ ಕೆಆರ್‌ಸಿ ವೃತ್ತದ ವರೆಗೆ ಮೆರವಣಿಗೆ ನಡೆಸಿದರು. ಪುಷ್ಪ ನಮನದೊಂದಿಗೆ ಶ್ರದ್ದಾಂಜಲಿ ಅರ್ಪಿಸಿದರು.
ಪಟ್ಟಣದ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಗಿಲ್ ವಿಜಯೋತ್ವವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಜಿ.ಪಂ.ಸದಸ್ಯೆ ಸರೋಜಮ್ಮ-ರಾಷ್ಟ್ರವನ್ನು ರಕ್ಷಣೆ ಮಾಡುತ್ತಿರುವ ನಮ್ಮ ದೇಶದ ಸೈನಿಕರಿಗೆ ಪ್ರತ್ರಿಯೊಬ್ಬ ಭಾರತೀಯನ್ನು ಗೌರವ ಕೊಡಬೇಕೆಂದರು.
ಶನಿವಾರಸಂತೆ ಗ್ರಾ.ಪಂ.ಅಧ್ಯಕ್ಷ ಮಹಮದ್‌ಗೌಸ್ ಮಾತನಾಡಿ-ನಮ್ಮ ಸೈನಿಕರ ಬಲಿದಾನವನ್ನು ನಾವೆಲ್ಲಾರೂ ಪ್ರತಿ ದಿನ ಸ್ಮರಿಸಬೇಕಾಗಿದೆ ಎಂದರು.
ಅಧ್ಯಕ್ಷತೆವಹಿಸಿ ಮಾತನಾಡಿದ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಎಂ.ಎನ್.ಧರ್ಮಪ್ಪ-ಸೈನಿಕರು ಶಿಶ್ತು, ಸಮಯ ಪಾಲನೆ, ರಾಷ್ಟ್ರ ಪ್ರೇಮಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ, ರಾಷ್ಟ್ರಭಿಮಾನ ಇರುವ ಉದ್ದೇಶದಿಂದ ನಮ್ಮ ಸೈನಿಕರು ಎಂತಹ ಸಂಧಿಗ್ಧ ಪರಿಸ್ಥಿತಿಯ್ಲಲೂ ಗಡಿ ಕಾಯುವ ಮೂಲಕ ರಾಷ್ಟ್ರವನ್ನು ಶತ್ರುಗಳಿಂದ ಕಾಪಾಡುತ್ತಾರೆ ಎಂದರು. 1999ರಲ್ಲಿ ಪಾಕಿಸ್ತಾನ ನಮ್ಮ ದೇಶದೊಳಗೆ ಪ್ರವೇಶಿಸಿ ಕಾಲು ಕರೆದು ಜಗಳಕ್ಕೆ ಬಂದಿತ್ತು. 1999ರ ಜುಲೈ26 ರಂದು ನಡೆದ ಕಾರ್ಗಿಲ್ ಕಾರ್ಯಾಚರಣೆಯಲ್ಲಿ ನಮ್ಯ ಸೈನಿಕರು ಪಾಕಿಸ್ತಾನದ ಸಾವಿರಾರು ಸೈನಿಕರನ್ನು ಸದೆ ಬಡಿದ ಮೂಲಕ ಕಾರ್ಗಿಲ್ ಯುದ್ದ ಅಂತ್ಯಗೊಂಡಿತ್ತು ಹಾಗೂ ಕಾರ್ಗಿಲ್ ಕದನದಲ್ಲಿ ನಮ್ಮ ದೇಶದ ನೂರಾರು ಸೈನಿಕರು ವೀರ ಮರಣ ಹೊಂದಿದ್ದರು ಕಾರ್ಗಿಲ್ ವಿಜಯಫತ್ಸವ ಮತ್ತು ಉದ್ದದಲ್ಲಿ ಪಾಲ್ಗೊಂಡ ಸೈನಿಕರು ಮತ್ತು ಮರಣ ಹೊಂದಿದ್ದ ಸೈನಿಕರ ನೆನಪಿಗಾಗಿ ರಾಷ್ಟ್ರದಲ್ಲಿ ವಿಜಯೋತ್ಸವ ಆಚರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕ ಕೆ.ವಿ.ಮಂಜುನಾಥ್, ವಿವಿಧ ಗ್ರಾ.ಪಂ.ಅಧ್ಯಕ್ಷರು ಮಾತನಾಡಿದರು. ದುಂಡಳ್ಳಿ ಗ್ರಾ.ಪಂ.ಅಧ್ಯಕ್ಷ ಗಿರೀಶ್, ವರ್ತಕರ ಸಂಘದ ಅಧ್ಯಕ್ಷ ಪ್ರತಾಪ್, ರೋಟರಿ ಸಂಸ್ಥೆ ಅಧ್ಯಕ್ಷ ಸುಬ್ಬು, ಪ್ರಥಮ ದರ್ಜೆ ಕಾಲೇಜ್ ಪ್ರಾಂಶುಪಾಲ ದಯಾನಂದ್, ವಿವಿಧ ಕಾಲೇಜು ಪ್ರಮುಖರಾದ ದೇವರಾಜ್, ಶಿವಪ್ರಕಾಶ್, ಹಂಡ್ಲಿ ಗ್ರಾ.ಪಂ.ಸದಸ್ಯ ಬಸವರಾಜು, ದೊಡ್ಡಮಳ್ತೆ ಗ್ರಾ.ಪಂ.ಅಧ್ಯಕ್ಷ ಧರ್ಮಪ್ಪ, ವಾಹನ ಚಾಲಕರ ಸಂಘದ ಪದಾಧಿಕಾರಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.