ಪಣಜಿ: ಯುದ್ಧಭೂಮಿ ಉಕ್ರೇನ್‍ನಿಂದ ಗಡಿ ಪ್ರವೇಶಿಸಲು 1600 ಕಿ.ಮಿ ಪ್ರಯಾಣ ಮಾಡಬೇಕಾಯಿತು. ಇದಕ್ಕಾಗಿ ಬಸ್, ಟ್ರೇನ್, ಬಳಸಿಕೊಂಡು ಗಡಿ ಪ್ರವೇಶಿಸಿದೆ. ಯುಕ್ರೇನ್‍ನ ಕ್ರೊಪೆನ್ಸ್ಕಿ ನಗರದಿಂದ ನನ್ನ ಪ್ರಯಾಣ ಆರಂಭಗೊಂಡಿತ್ತು. ಗಡಿ ಪ್ರವೇಶಿಸಿದ ನಂತರ ಭಾರತೀಯ ರಾಯಭಾರಿ ಕಛೇರಿ ನಮ್ಮನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತಂದಿದೆ ಎಂದು ಪೊಂಡಾದ ನಿವಾಸಿ ವಿದ್ಯಾರ್ಥಿನಿ ಕರೆನ್ ಫರ್ನಾಂಡಿಸ್ ಹೇಳಿದರು.
ವಿದ್ಯಾರ್ಥಿನಿ ಕರೇನ್ ಫರ್ನಾಂಡಿಸ್ ಎಂಬಿಬಿಎಸ್ ವ್ಯಾಸಂಗಕ್ಕಾಗಿ ಉಕ್ರೇನ್‍ಗೆ ತೆರಳಿದ್ದರು. ಕರೇನ್ ರವರ ತಂದೆ ವೃತ್ತಿಯಲ್ಲಿ ವೈದ್ಯರು.
ವಿದ್ಯಾರ್ಥಿನಿ ಕರೇನ್ ಸುದ್ಧಿಗಾರರಿಗೆ ಪ್ರತಿಕ್ರಿಯೆ ನೀಡಿ- ಉಕ್ರೇನ್ ಗಡಿಗೆ ಬಂದು ನಂತರ ಭಾರತಕ್ಕೆ ಬಂದು ತಲುಪಿದ ನಮ್ಮ ಪ್ರಯಾಣದ ಭಯಾನಕ ಅನುಭವ ಮತ್ತು ಕಷ್ಟಗಳನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ನಾವು ಉಕ್ರೇನ್‍ನಲ್ಲಿ ಉದ್ವಿಗ್ನ ಪರಿಸ್ಥಿತಿಯಲ್ಲಿ ದಿನಗಳನ್ನು ಕಳೆದಿದ್ದೇವೆ ಎಂದು ಹೇಳಿದರು.
ಉಕ್ರೇನ್‍ನಲ್ಲಿ ಎಂಬಿಬಿಎಸ್ ಓದುತ್ತಿದ್ದ ವಿದ್ಯಾರ್ಥಿನಿ ಕರೇನ್ ರವರ ಇನ್ನು ಆರು ತಿಂಗಳ ಕೋರ್ಸ್ ಮಾತ್ರ ಬಾಕಿ ಉಳಿದಿತ್ತು. ಅವರು ಮುಂದಿನ ವರ್ಷ ಜನವರಿಯಲ್ಲಿ ಡಾಕ್ಟರೇಟ್ ಪದವಿಯೊಂದಿಗೆ ಭಾರತಕ್ಕೆ ಮರಳಬೇಕಿತ್ತು. ಆದರೆ ಇದೀಗ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭಗೊಂಡಿದ್ದರಿಂದ ಕೋರ್ಸ್ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಆದರೆ ಉಕ್ರೇನ್ ಸಹಜ ಸ್ಥಿತಿಗೆ ಮರಳಿದ ನಂತರ ನಾವು ಅಲ್ಲಿಗೆ ತೆರಳಿ ಕೋರ್ಸ್ ಪೂರ್ಣಗೊಳಿಸುತ್ತೇವೆ ಎಂದು ಕರೇನ್ ರವರು ಮಾಹಿತಿ ನೀಡಿದರು.
ಇದನ್ನೂ ಓದಿ : ಪಾಕಿಸ್ಥಾನದ ಮಸೀದಿಯಲ್ಲಿ ಸ್ಫೋಟ: 30 ಸಾವು, 50 ಕ್ಕೂ ಹೆಚ್ಚು ಜನ ಗಂಭೀರ