Advertisement

‌ಕನ್ನಡಿಗರು ಶೀಘ್ರ ತಾಯ್ನಾಡಿಗೆ

03:20 PM Aug 07, 2020 | Suhan S |

ಬೀದರ: ಕುವೈತ್‌ನಲ್ಲಿ ಸಿಲುಕಿರುವ ಕನ್ನಡಿಗರನ್ನು ಅಲ್ಲಿನ ಭಾರತ ರಾಯಭಾರ ಕಚೇರಿ ಸಂಪರ್ಕಿಸಿದ್ದಾರೆ. ಕೋವಿಡ್‌ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿರುವ ಅಂತಾರಾಷ್ಟ್ರೀಯ ವಿಮಾನಗಳ ಸೇವೆ ಎರಡನೇ ವಾರದಲ್ಲಿ ಪ್ರಾರಂಭವಾಗಲಿದ್ದು, ತಕ್ಷಣವೇ ಅಲ್ಲಿನ ಕನ್ನಡಿಗರನ್ನು ಕರೆತರುವ ಬಗ್ಗೆ ವಿದೇಶಾಂಗ ಸಚಿವರು ಭರವಸೆ ನೀಡಿದ್ದಾರೆ ಎಂದು ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ.

Advertisement

ಈ ಕುರಿತು ಪ್ರಕಟಣೆ ನೀಡಿರುವ ಅವರು, ಉದ್ಯೋಗಕ್ಕಾಗಿ ಕುವೈತ್‌ಗೆ ತೆರಳಿ ಕೋವಿಡ್‌ ನಿಂದ ಬೀದರ ಸೇರಿದಂತೆ ಕನ್ನಡಿಗರು ಸಿಲುಕಿರುವ ಕುರಿತು ಈಗಾಗಲೇ ವಿದೇಶಾಂಗ ಸಚಿವ ಸುಬ್ರಮಣ್ಯಂ ಜೈಶಂಕರ ಅವರ ಗಮನಕ್ಕೆ ತಂದಿದ್ದು, ಮೇಘಾ ಇಂಜಿನಿಯರಿಂಗ್‌ ಕಂಪನಿಗೆ ಕುವೈತ್‌ನ ರಾಯಭಾರ ಕಚೇರಿಯಿಂದ ನೋಟಿಸ್‌ ನೀಡಲಾಗಿತ್ತು. ಹಾಗಾಗಿ ಕಂಪನಿ ಯುವಕರನ್ನು ಭೇಟಿ ಮಾಡಿ, ನಿಮ್ಮನ್ನು ಮರಳಿ ಭಾರತಕ್ಕೆ ಕಳುಹಿಸುತ್ತೇವೆ ಎಂದು ಹೇಳಿ, ಊಟ ಸೇರಿ ಸೌಲತ್ತುಗಳ ವ್ಯವಸ್ಥೆಗಳನ್ನು ಮಾಡಿದೆ ಎಂದು ಹೇಳಿದ್ದಾರೆ.

ಗುರುವಾರ ಮತ್ತೂಮ್ಮೆ ವಿದೇಶಾಂಗ ಸಚಿವರನ್ನು ಸಂಪರ್ಕಿಸಿದಾಗ ಕುವೈತ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯು ಎಲ್ಲಾ ಕನ್ನಡಿಗರ ತಂಡವನ್ನು ಸಂಪರ್ಕಿಸಿದೆ ಮತ್ತು ಮೇಘಾ ಕಂಪನಿಯವರನ್ನು ಸಹ ಸಂಪರ್ಕಿಸಿದೆ. ಅವರನ್ನು ಭಾರತಕ್ಕೆ ವಾಪಸ್‌ ಕರೆತರಲು ವಿಮಾನ ಟಿಕೆಟ್‌ (ಜಾಜಿರಾ ಏರ್‌ಲೈನ್ಸ್‌ ಮೂಲಕ) ವ್ಯವಸ್ಥೆ ಮಾಡಿರುವ ಕುರಿತು ಮಾಹಿತಿ ನೀಡಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next