Advertisement

ಕರಾಯ ಶಾಲೆ ಪಕ್ಕದ ಮರ ವಾರದೊಳಗೆ ತೆರವು: ಭರವಸೆ

11:59 AM Jul 10, 2018 | |

ಉಪ್ಪಿನಂಗಡಿ: ಹೈಸ್ಕೂಲ್‌ ತರಗತಿಗಳ ಚಟುವಟಿಕೆ ನಡೆಯುವ ಕೊಠಡಿಗಳಿಗೆ ಕಟ್ಟಡಕ್ಕೆ ತಾಗಿಕೊಂಡಿರುವ ಅಪಾಯಕಾರಿ ಮರವನ್ನು ವಾರದ ಗಡುವಿನೊಳಗೆ ತೆರವುಗೊಳಿಸುವುದಾಗಿ ಉಪ ಅರಣ್ಯಾಧಿಕಾರಿ ವೆಂಕಪ್ಪ ನಾಯ್ಕ ತಿಳಿಸಿದ್ದಾರೆ.

Advertisement

ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಕರಾಯ ಸರಕಾರಿ ಶಾಲೆಯ 8ರಿಂದ 10ನೇ ತರಗತಿಯ ಪ್ರೌಢಶಾಲೆ ವಿಭಾಗಕ್ಕೆ ಭಾರೀ ಗಾತ್ರದ ಮರ ತಾಗಿಕೊಂಡಿದ್ದು, ಉದಯವಾಣಿಯ ‘ಸುದಿನ’ ಸಚಿತ್ರ ವರದಿಯನ್ನು ಪ್ರಕಟಿಸಿತ್ತು. ಇದನ್ನು ಗಮನಿಸಿದ ಉಪ್ಪಿನಂಗಡಿ ಅರಣ್ಯಾಧಿಕಾರಿ ಸಂಧ್ಯಾ, ತತ್‌ಕ್ಷಣವೇ ಉಪ ಅರಣ್ಯಾಧಿಕಾರಿ ವೆಂಕಪ್ಪ ನಾಯ್ಕ ಹಾಗೂ ಅರಣ್ಯ ಪಾಲಕ ಸುಧೀರ್‌ ನಟ್ಟಿಬೈಲು ಅವರನ್ನು ಸ್ಥಳಕ್ಕೆ ಕಳುಹಿಸಿ, ವರದಿ ಸಲ್ಲಿಸುವಂತೆ ಸೂಚಿಸಿದರು. ಅದರಂತೆ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಅಪಾಯಕಾರಿ ಮರ ಎಂಬುದು ಮನ ವರಿಕೆಯಾಗಿದ್ದು, ವಾರದ ಗಡುವಿನೊಳಗೆ ತೆರವುಗೊಳಿಸುವುದಾಗಿ ಹೈಸ್ಕೂಲ್‌ ಮುಖ್ಯ ಶಿಕ್ಷಕ ಶಿವಬಾಳು ಅವರಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next