Advertisement

ರೈತರ ಬೆಳೆಗೆ ಬೆಂಬಲ ಬೆಲೆ ನೀಡಲು ಕರವೇ ಆಗ್ರಹ

10:16 AM Sep 24, 2019 | Team Udayavani |

ಚಿತ್ತಾಪುರ: ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು ಹಾಗೂ ಪ್ರತಿ ಗ್ರಾಪಂ ಒಂದರಂತೆ ಖರೀದಿ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಕರವೇ (ನಾರಾಯಣಗೌಡ) ಬಣದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಅಲ್ಲೂರಕರ್‌ ನೇತೃತ್ವದಲ್ಲಿ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಕೇಂದ್ರ ಮತ್ತು ರಾಜ್ಯ ಸರ್ಕಾರ ತಾಲೂಕಿನ ರೈತರು ಬೆಳೆದ ತೊಗರಿ, ಹೆಸರು, ಉದ್ದು ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು. ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲವನ್ನು ಮನ್ನಾ ಮಾಡಬೇಕು. ಗ್ರಾಪಂ ಮಟ್ಟದಲ್ಲಿ ಪಹಾಣಿ ವಿತರಿಸಬೇಕು. ಗ್ರಾಪಂ ಕೇಂದ್ರ ಸ್ಥಾನಗಳಿಗೆ ಒಂದರಂತೆ ಖರೀದಿ ಕೇಂದ್ರ ಸ್ಥಾಪನೆ ಮಾಡಬೇಕು. ದಿಗ್ಗಾಂವ ಜಿಪಂ ಮಟ್ಟದಲ್ಲಿ ನಾಡ ಕಚೇರಿ ಆರಂಭಿಸಬೇಕು. ರೈತರಿಗೆ ಸಂಬಂಧಪಟ್ಟ ಸಮಸ್ಯೆ 10 ದಿನಗಳಲ್ಲಿ ಪರಿಹರಿಸಬೇಕು. ಒಂದು ವೇಳೆ ನಿರ್ಲಕ್ಷ್ಯ  ತೋರಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಹಶೀಲ್ದಾರ್‌ ಉಮಾಕಾಂತ ಹಳ್ಳೆ ಮೂಲಕ ರಾಜ್ಯಪಾಲರಿಗೆ ಸಲ್ಲಿಸಿದ ಮನವಿಯಲ್ಲಿ ಎಚ್ಚರಿಸಲಾಗಿದೆ.

ಕರವೇ ಕಾರ್ಯಕರ್ತರಾದ ಮಹಾದೇವ ತೆಲಗರ್‌, ಪರಮೇಶ್ವರ ಝಳಕಿ, ಸಂತೋಷ ಕೊಂಕನಳ್ಳಿ, ಶಿವಕುಮಾರ ಸುಣಗಾರ್‌, ಈರಣ್ಣ ಕೊಳ್ಳಿ, ವೀರೇಂದ್ರ ವಿಶ್ವಕರ್ಮ, ಮೌನೇಶ ನಾಲವಾರ, ಶಂಕರ ನಾಲವಾರ, ಲಿಂಗಬಸವ ತೆಂಗಳಿ, ರಾಯಪ್ಪ ಪೂಜಾರಿ, ದೇವದಾಸ ಔರಸಂಗ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next