31.95 ಮೀಟರ್ ತನಕ ಜಲಾಶಯದ ಮಟ್ಟ ತಲುಪಿದೆ.
Advertisement
ನಿರಂತರ ವಿದ್ಯುತ್ ಉತ್ಪಾದನೆ ಜೊತೆಗೆ, ನೀರನ್ನು ನದಿಗೆ ಬಿಡಲಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 160.2 ಮಿಮೀ ಮಳೆಯಾಗಿದ್ದು, ಸರಾಸರಿ 14.6 ಮಿಮೀ ಮಳೆ ದಾಖಲಾಗಿದೆ. ಅಕ್ಟೋಬರ್ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 152 ಮಿಮೀ ಇದ್ದು, ಇದುವರೆಗೆ ಸರಾಸರಿ ಪ್ರಮಾಣ 277.8 ಮಿಮೀ ಮಳೆ ದಾಖಲಾಗಿದೆ. ಈ ಅವಧಿಯಲ್ಲಿ ಅಂಕೋಲಾದಲ್ಲಿ 13.4 ಮಿಮೀ, ಭಟ್ಕಳ 12.2 ಮಿಮೀ, ಹಳಿಯಾಳ 4.2, ಹೊನ್ನಾವರ 27.1 ಮಿಮೀ, ಕಾರವಾರ 27.2 ಮಿಮೀ, ಕುಮಟಾ 6.6 ಮಿಮೀ, ಮುಂಡಗೋಡ 40.6 ಮಿಮೀ, ಸಿದ್ದಾಪುರ 5.4 ಮಿಮೀ, ಶಿರಸಿ 9.5 ಮಿಮೀ, ಜೊಯಿಡಾ 3 ಮಿಮೀ, ಯಲ್ಲಾಪುರ 11 ಮಿ ಮೀ ಮಳೆ ದಾಖಲಾಗಿದೆ.