Advertisement
ಕತಾರ್, ಕುವೈಟ್, ಒಮನ್, ಬಹ್ರೈನ್ ಭಾಗದಲ್ಲಿ ಕರಾವಳಿ ಭಾಗದ ಸಾವಿರಾರು ಜನರು ಉದ್ಯೋಗ ನಿಮಿತ್ತ,ವಿಸಿಟಿಂಗ್ ವೀಸಾ ಮೂಲಕ ತೆರಳಿ ಸದ್ಯ ಕೋವಿಡ್ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇರಳ, ತಮಿಳು ನಾಡು, ಮುಂಬಯಿ ಸಹಿತ ವಿವಿಧ ಭಾಗಗಳ ಜನರನ್ನು ಕರೆತರಲು ಅಲ್ಲಿನ ಸರಕಾರ ವಿಮಾನ ಸೇವೆ ಮಾಡಿದ್ದರೂ ಕರ್ನಾಟಕದಿಂದ ವಿಮಾನ ಸೇವೆ ಮಾಡಿಲ್ಲವೇಕೆ? ಎಂದು ಅನಿವಾಸಿ ಭಾರತೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೀಸಾ ಅವಧಿ ಮುಗಿದಿದೆ. ಜತೆಗೆ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಕೂಡ ಕರ್ನಾಟಕಕ್ಕೆ ಬರಲು ಉತ್ಸುಕ ರಾಗಿದ್ದಾರೆ ಎಂದು ಅನಿವಾಸಿ ಭಾರತೀಯರಾದ ಮೋಹನ್‌ದಾಸ್ ಕಾಮತ್ “ಉದಯವಾಣಿ’ಗೆ ತಿಳಿಸಿದ್ದಾರೆ. ವಿಮಾನಯಾನ ಸಚಿವರ ಜತೆಗೆ ಚರ್ಚೆ
ಮೇ 9ರಂದು ಕೇಂದ್ರ ವಿಮಾನಯಾನ ಸಚಿವರ ಜತೆಗೂ ಈ ಬಗ್ಗೆ ಚರ್ಚಿಸಿ ಕರ್ನಾಟಕಕ್ಕೆ ಬರುವವರನ್ನು ಕರೆತರುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ನಡೆಸಲಾಗುವುದು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ.