ನಟ ಶಿವರಾಜಕುಮಾರ್ ಮತ್ತು ಪ್ರಭುದೇವ ಮೊದಲ ಬಾರಿಗೆ ಒಟ್ಟಾಗಿ ನಟಿಸುತ್ತಿರುವ “ಕರಟಕ ದಮನಕ’ ಸಿನಿಮಾ ರಿಲೀಸ್ ಅಖಾಡಕ್ಕೆ ಬಂದಿದೆ. ಚಿತ್ರರಂಗದ ಮೂಲಗಳ ಪ್ರಕಾರ, ಈ ಚಿತ್ರ ಮಾರ್ಚ್ 8 ಶಿವರಾತ್ರಿಯಂದು ತೆರೆ ಕಾಣುತ್ತಿದೆ ಎನ್ನಲಾಗಿದೆ.
ಈ ಮೂಲಕ ವರ್ಷದ ಮೊದಲ ಮಲ್ಟಿಸ್ಟಾರ್ ಸಿನಿಮಾವಾಗಿ ಗಮನ ಸೆಳೆಯಲಿದೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರವನ್ನು ಯೋಗರಾಜ್ ಭಟ್ ನಿರ್ದೇಶಿಸಿದ್ದಾರೆ.
ನಿರ್ದೇಶಕ ಯೋಗರಾಜ್ ಭಟ್ಟರಿಗೆ ಈ ಕಥೆ ಲಾಕ್ ಡೌನ್‌ನಲ್ಲಿ ಹುಟ್ಟಿತಂತೆ. “ಈ ಸಿನಿಮಾ ಶುರುವಾಗಿ ಸುಮಾರು ಒಂದು ವರ್ಷವಾಯಿತು. “ಕರಟಕ ದಮನಕ’ ಎನ್ನುವುದು “ಪಂಚತಂತ್ರ’ ಕಥೆಗಳಲ್ಲಿ ಬರುವ ಎರಡು ಕುತಂತ್ರಿ ನರಿಗಳ ಹೆಸರು. ಸಾಮಾನ್ಯವಾಗಿ ಯಾವಾಗಲೂ ಇಬ್ಬರು ಒಟ್ಟಿಗೆ ಇರುವುದನ್ನು ನೋಡಿದಾಗ ಅವರನ್ನು “ಕರಟಕ ದಮನಕ’ ಎನ್ನುವುದು ಉಂಟು.
ಈ ಸಿನಿಮಾದಲ್ಲಿ ಶಿವಣ್ಣ “ಕರಟಕ’ ಹಾಗೂ ಪ್ರಭುದೇವ “ದಮನಕ’ ಪಾತ್ರಗಳನ್ನು ಮಾಡಿದ್ದಾರೆ. ಲಾಕ್‌ಡೌನ್‌ಗೂ ಮುಂಚೆ ಹೊಳೆದ ಕಥೆ. ಹ್ಯೂಮರ್, ವಿಚಿತ್ರ ಆ್ಯಕ್ಷನ್, ಕೊನೆಗೆ ಎಮೋಶನ್ ಎಲ್ಲವೂ ಇದರಲ್ಲಿದೆ. ಮೊದಲ ಬಾರಿಗೆ ಇವರಿಬ್ಬರನ್ನು ತೆರೆಮೇಲೆ ನೋಡುವುದೇ ಒಂದು ಖುಷಿ. ಇಬ್ಬರೂ ನಟರ ಎನರ್ಜಿ ಸಿನಿಮಾವನ್ನು ಮತ್ತೂಂದು ಹಂತಕ್ಕೆ ತೆಗೆದುಕೊಂಡು ಹೋಗಿದೆ. ಇಲ್ಲಿ ನಾನಾ, ನೀನಾ ಎನ್ನುವುದಕ್ಕಿಂತ ನಾವು ಎನ್ನುವ ಥರ ಪಾತ್ರವಿರುತ್ತದೆ’ ಎನ್ನುವುದು ಭಟ್ಟರ ಮಾತು.