Advertisement

ಕಾರಟಗಿ: ಮರಗಳ ಮಾರಣಹೋಮ

04:39 PM May 02, 2019 | Team Udayavani |

ಕಾರಟಗಿ: ಪಟ್ಟಣದ ಸರಕಾರಿ ಪೌಢಶಾಲೆಯ ಆವರಣದಲ್ಲಿ ನೂತನ ಕಟ್ಟಡ ನಿರ್ಮಾಣದ ನೆಪದಲ್ಲಿ ಆವರಣದಲ್ಲಿ ನೆರಳು ನೀಡುತ್ತಿದ್ದ ಮರಗಳನ್ನು ಕಡಿಯಲಾಗಿದೆ. ಮರಗಳ ಕಡಿಯುವ ಅವಶ್ಯಕತೆ ಇರಲಿಲ್ಲ. ಒಂದು ಮರ ಕಡಿದರೆ ಸಾಕಾಗಿತ್ತು ಅನಾವಶ್ಯವಾಗಿ ಮೂರ್‍ನಾಲ್ಕು ಮರಗಳನ್ನು ಕಡಿಯಲಾಗಿದೆ ಎಂದು ಪಟ್ಟಣದ ಜನತೆ ದೂರಿದ್ದಾರೆ.

Advertisement

ಆವರಣದಲ್ಲಿ ವಿದ್ಯಾರ್ಥಿಗಳು ಕಷ್ಟಪಟ್ಟು ನೀರು ಹೊತ್ತು ಹಾಕಿ ಬೆಳೆಸಿದ ಮರಗಳನ್ನು ಏಕಾಏಕಿ ಕಡಿಯುವುದು ತಪ್ಪು. ಶಾಲಾ ಆವರಣದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಮಂಜೂರಾದ ನೂತನ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ಮುಖ್ಯೋಪಾಧ್ಯಾಯೆ ಆದೇಶಿಸಿದ್ದಾರೆ. ಆ ಕಾರಣಕ್ಕೆ ಮರಗಳನ್ನು ಕಡಿಯಲಾಗಿದೆ ಎಂದು ಮರಕಡಿಯುವವರು ತಿಳಿಸಿದರು. ಅಲ್ಲದೇ ಅರಣ್ಯಾಧಿಕಾರಿಗಳ ಪರವಾನಗಿ ಕೂಡ ಪಡೆಯದೇ ಮರಗಳನ್ನು ಕಡಿದಿರುವುದು ಸಂಶಯ ಮೂಡಿಸಿದೆ. ಕಟ್ಟಡ ಕಟ್ಟಲು ಮರಗಳನ್ನು ಕಡಿಯುವ ಪ್ರಮಯವೇ ಇಲ್ಲ. ಅಲ್ಲದೇ ಕಡಿದ ಮರಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿದ್ದಾರೆಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಅರಣ್ಯ ಇಲಾಖೆ ಮರಗಿಡಗಳನ್ನು ಬೆಳೆಸಿ ಎಂದು ಸಸಿಗಳನ್ನು ಉಚಿತವಾಗಿ ನೀಡಿ ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಆದರೆ ಶಾಲಾ ಆವರಣದಲ್ಲಿ ಬೆಳೆದು ನಿಂತ ಮರಗಳನ್ನು ಕಡಿದರೂ ಅರಣ್ಯಾಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸ ಎಂದು ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಇಲಾಖೆ ಈ ಕೂಡಲೇ ಸ್ಥಳೀಯ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿನ ಮರಗಳನ್ನು ಕಡಿದಿರುವ ಬಗ್ಗೆ ತನಿಖೆ ನಡೆಸಿ, ಅರಣ್ಯ ಇಲಾಖೆಯ ಕಾಯ್ದೆಯನ್ವಯ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸರಕಾರಿ ಪ್ರೌಢಶಾಲೆಯ ಆವರಣದಲ್ಲಿನ ಮರ ಕಡಿದಿರುವ ಬಗ್ಗೆ ಹಾಗೂ ಅವುಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅಲ್ಲದೇ ಶಾಲಾ ಮುಖ್ಯೋಪಾಧ್ಯಾಯರು ಕೂಡ ಈ ಬಗ್ಗೆ ನನಗೆ ಏನೂ ಹೇಳಿಲ್ಲ.
•ಬಸವರಾಜ ಶೆಟ್ಟರ, ಎಸ್‌ಡಿಎಂಸಿ ಉಪಾಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next