Advertisement
1997ರಲ್ಲಿ ಆರಂಭವಾದ ಈ ಶಾಲೆಯಲ್ಲಿ 1ರಿಂದ 7ನೇ ತರಗತಿಗಳು ನಡೆಯುತ್ತಿದ್ದು, 100 ವಿದ್ಯಾರ್ಥಿಗಳಿದ್ದಾರೆ. ಇವರಿಗೆ ಬೋಧನೆ ಮಾಡಲು ಐವರು ಶಿಕ್ಷಕರಿದ್ದಾರೆ. ಆದರೆ ಮಕ್ಕಳಿಗೆ ವ್ಯವಸ್ಥಿತವಾದ ಕೊಠಡಿಗಳಿಲ್ಲ. ಎರಡು ಶಾಲಾ ಕೊಠಡಿಗಳ ಮೇಲ್ಛಾವಣಿ ಕಿತ್ತು ಹೋಗಿದ್ದು ಅರೆಬರೆಯಾಗಿ ಕಬ್ಬಿಣದ ಸರಳು ಕಾಣುತ್ತವೆ. ಕೆಲವೊಮ್ಮೆ ವಿದ್ಯಾರ್ಥಿಗಳು ಶಾಲೆಯಲ್ಲಿ ಕುಳಿತಾಗ ಮೇಲ್ಛಾವಣಿಯ ಸಿಮೆಂಟ್ ತುಣುಕುಗಳು ಬಿದ್ದ ಘಟನೆಗಳು ಜರುಗಿವೆ. ಅಲ್ಲದೇ ಶಾಲಾ ಕಟ್ಟಡದ ಹೊರಮೇಲ್ಮೈ ಕೂಡ ಅಲ್ಲಲ್ಲಿ ಬಿರುಕು ಬಿಟ್ಟಿದ್ದು ಭಾರಿ ಮಳೆಗಾಳಿ ಬೀಸಿದ ಸಮಯದಲ್ಲಿ ಅವಘಡ ಸಂಭವಿಸುವ ಸಾಧ್ಯತೆಗಳಿವೆ. ಶಾಲೆಯಲ್ಲಿ ಬಿಸಿಯೂಟ, ಬೆಳಗಿನ ಕ್ಷೀರ ಭಾಗ್ಯ ಸಮರ್ಪಕವಾಗಿದೆ. ವಿದ್ಯಾರ್ಥಿಗಳು ನಿತ್ಯ ಫ್ಲೊರೈಡಯುಕ್ತ ನೀರನ್ನೇ ಸೇವಿಸುತ್ತಿದ್ದಾರೆ. ಮುಖ್ಯವಾಗಿ ಈ ಶಾಲೆಗೆ ಕಾಂಪೌಂಡ್ ಇಲ್ಲದ ಕಾರಣ ಸಂಜೆ ಶಾಲೆ ಅವಧಿ ಮುಗಿಯುತ್ತಿದ್ದಂತೆ ಕಿಡಿಗೇಡಿಗಳ ಹಾವಳಿ ಹೆಚ್ಚಾಗುತ್ತದೆ. ಅಲ್ಲದೇ ಶಾಲಾ ಆವರಣ ಹಾಗೂ ಕೊಠಡಿಗಳಲ್ಲಿ ಅನೈತಿಕ ಚಟುವಟಿಕೆಗಳೂ ನಡೆಯುತ್ತಿವೆ. ಇದರಿಂದಾಗಿ ಶಾಲೆಯ ಪರಿಸರ ಸಂಪೂರ್ಣ ಹದಗೆಟ್ಟಿದೆ. ಶಿಕ್ಷಣ ಇಲಾಖೆ ಶಾಲೆ ಸಮಸ್ಯೆಗಳತ್ತ ಗಮನಹರಿಸದೇ ನಿರ್ಲಕ್ಷ್ಯ ತೋರಿದ್ದಾರೆ.
Advertisement
ಶಿಥಿಲಾವಸ್ಥೆ ತಲುಪಿದ ಕಾರಟಗಿ ಪ್ರಾಥಮಿಕ ಶಾಲೆ ಕಟ್ಟಡ
11:17 AM Jul 22, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.