Advertisement

ಉಪಚುನಾವಣೆ ಫಲಿತಾಂಶ : ಕಾಂಗ್ರೆಸ್‌ನಿಂದ ವಿಸ್ತೃತ ತನಿಖೆ: ಡಿಕೆಶಿ

01:12 AM Nov 13, 2020 | mahesh |

ಮಂಗಳೂರು: ಆರ್‌.ಆರ್‌. ನಗರ ಹಾಗೂ ಶಿರಾ ಉಪಚುನಾವಣೆಗಳ ಫಲಿತಾಂಶದ ಬಗ್ಗೆ ಅನುಮಾನಗಳಿದ್ದು, ಮತಯಂತ್ರ ಸೇರಿದಂತೆ ವಿವಿಧ ಅಂಶಗಳ ಬಗ್ಗೆ ಕಾಂಗ್ರೆಸ್‌ ವಿಸ್ತೃತ ತನಿಖೆ ನಡೆಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

Advertisement

ಗುರುವಾರ ಕಣ್ಣೂರಿನಿಂದ ಬೆಂಗಳೂರಿಗೆ ತೆರಳುವ ದಾರಿಯಲ್ಲಿ ಮಂಗಳೂರಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ವಿದ್ಯಾವಂತರು, ಯುವಜನತೆ, ಮಹಿಳೆಯರು ಸೇರಿದಂತೆ ಯಾರಲ್ಲಿ ಕೇಳಿದರೂ ಕಾಂಗ್ರೆಸ್‌ಗೆ ಮತ ಹಾಕಿ ದ್ದೇವೆ ಎನ್ನುತ್ತಿದ್ದಾರೆ. ಆರ್‌.ಆರ್‌. ನಗರ ದಲ್ಲಿ 50,000ಕ್ಕೂ ಅಧಿಕ ಮತಗಳ ಅಂತರವಿದೆ. ಅಷ್ಟು ಅಂತರವನ್ನು ನಾನು ನಿರೀಕ್ಷಿಸಿರಲಿಲ್ಲ. ಆದುದರಿಂದ ಮತ
ದಾರರು ಹೇಳುತ್ತಿರುವುದರಲ್ಲಿ ತಪ್ಪಿದೆಯೇ ಅಥವಾ ಮತ ಬಿದ್ದಿದ್ದು ತಪ್ಪಾಗಿದೆಯೇ ಎಂಬ ಬಗ್ಗೆ ನಮ್ಮದೇ ರೀತಿಯಲ್ಲಿ ವ್ಯಾಪಕ ತನಿಖೆ ಮಾಡುತ್ತೇವೆ. ಇವಿಎಂ ಅಂಶದ ಬಗ್ಗೆ ತಜ್ಞರ ಜತೆ ಸಮಾಲೋಚನೆ ನಡೆಸುತ್ತೇವೆ ಎಂದರು.

ಪಕ್ಷ ಕಟ್ಟುವ ಕಾರ್ಯತಂತ್ರ
ದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗುವುದು ಎಂದರು.

ನಳಿನ್‌ ಗೃಹ ಸಚಿವರೇ?
ಸಂಪತ್‌ರಾಜ್‌ ಅವರನ್ನು ಡಿಕೆಶಿ ಅಡಗಿಸಿಟ್ಟಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ನಳಿನ್‌ ಏನು ಗೃಹ ಸಚಿವರೇ? ಅವರಿಗೆ ಅಷ್ಟು ಖಚಿತವಿದ್ದರೆ ನನ್ನನ್ನು ಬಂಧಿಸಬಹುದಲ್ಲ. ಈ ಮೊದಲು ಬಂಧಿಸಿದ್ದಾರಲ್ಲ. ಇನ್ನೊಮ್ಮೆ ಬಂಧಿಸಲಿ. ನನಗೆ ತೊಂದರೆ ಕೊಡಲು ಏನೆಲ್ಲಾ ಮಸಲತ್ತುಗಳನ್ನು ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ. ಅನೇಕ ನೋಟಿಸ್‌ಗಳು ನನಗೆ ಬರುತ್ತಿವೆ. ಬೇಕಿದ್ದರೆ ಇನ್ನೂ ಒಂದು ನೊಟೀಸ್‌ ನೀಡಲಿ’ ಎಂದು ತಿರುಗೇಟು ನೀಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್‌, ಮಾಜಿ ಶಾಸಕ ಜೆ.ಆರ್‌. ಲೋಬೋ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ, ಮುಖಂಡರಾದ ಶಶಿಧರ್‌ ಹೆಗ್ಡೆ, ಭಾಸ್ಕರ್‌ ಕೆ., ಟಿ.ಕೆ. ಸುಧೀರ್‌, ವಿಶ್ವಾಸ್‌ದಾಸ್‌, ನವೀನ್‌ ಡಿ’ಸೋಜಾ, ವಿನಯರಾಜ್‌, ಪ್ರಕಾಶ್‌ ಸಾಲ್ಯಾನ್‌, ಮಮತಾ ಗಟ್ಟಿ, ಅನಿಲ್‌ ಕುಮಾರ್‌ ಉಪಸ್ಥಿತರಿದ್ದರು.

Advertisement

ಅಸಮರ್ಥ ಡಿಸಿಸಿ ಅಧ್ಯಕ್ಷರ ಬದಲಾವಣೆ
ರಾಜ್ಯದಲ್ಲಿ ಜಿಲ್ಲಾ ಕಾಂಗ್ರೆಸ್‌ ಸಮಿತಿಗಳ ಕೆಲವು ಪದಾಧಿಕಾರಿ ಗಳನ್ನು ಬದಲಾಯಿಸಿ ಹೊಸಬರನ್ನು ನೇಮಿಸಲಾಗುತ್ತದೆ. ಅಸಮರ್ಥ, ಉತ್ತರದಾಯಿತ್ವ ಇಲ್ಲದವರು ಹಾಗೂ ಹಲವು ವರ್ಷಗಳಿಂದ ಇರುವವರನ್ನು ಬದಲಾಯಿಸಿ ಕ್ರಿಯಾಶೀಲರನ್ನು ನೇಮಿಸಲಾಗುತ್ತಿದೆ. ದ.ಕ. ಜಿಲ್ಲಾ ಧ್ಯಕ್ಷರು ಕ್ರಿಯಾಶೀಲರಾಗಿದ್ದಾರೆ ಎಂದು ಶಿವಕುಮಾರ್‌ ಹೇಳಿದರು.

“ರಾಷ್ಟ್ರೀಕರಣ ಕಾಂಗ್ರೆಸ್‌ ನೀತಿ; ಖಾಸಗೀಕರಣ ಬಿಜೆಪಿ ರೀತಿ’

ಮಂಗಳೂರು, ನ. 12: ಮಂಗಳೂರು ವಿಮಾನ ನಿಲ್ದಾಣ ಖಾಸಗೀಕರಣ ವಿರೋಧಿಸಿ ಮತ್ತು ಹೆಸರು ಬದಲಾವಣೆ ಮಾಡಲು ಒತ್ತಾಯಿಸಿ ಮೂಲ್ಕಿ ಮೂಡುಬಿದಿರೆ ಕಾಂಗ್ರೆಸ್‌ ಸಮಿತಿ ಹಾಗೂ ಯುವ ಕಾಂಗ್ರೆಸ್‌ ನೇತೃತ್ವದಲ್ಲಿ ಬಜ್ಪೆ ಕೆಂಜಾರು ಬಳಿಯಲ್ಲಿ ಗುರುವಾರ ಉಪವಾಸ ಸತ್ಯಾಗ್ರಹ ಹಾಗೂ ಪ್ರತಿಭಟನೆ ನಡೆಯಿತು.
ಸ್ಥಳಕ್ಕೆ ಆಗಮಿಸಿದ್ದ ಡಿ.ಕೆ. ಶಿವ
ಕುಮಾರ್‌ ಮಾತನಾಡಿ, ರಾಷ್ಟ್ರೀಕರಣ
ಮಾಡುವುದು ಕಾಂಗ್ರೆಸ್‌ ನೀತಿಯಾ
ದರೆ, ಅದನ್ನು ಖಾಸಗೀಕರಣ ಮಾಡು ವುದು ಬಿಜೆಪಿ ಕ್ರಮವಾಗಿದೆ. ಹಲವು ವ್ಯವಸ್ಥೆಗಳನ್ನು ಇದೇ ರೀತಿ ಬಿಜೆಪಿ ಸರಕಾರ ಖಾಸಗೀಕರಣ ಮಾಡುವ ಮೂಲಕ ಜನರ ಭಾವನೆಗಳ ವಿರುದ್ಧ ಚೆಲ್ಲಾಟವಾಡುತ್ತಿದೆ ಎಂದರು.
ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ ಮಾತನಾಡಿ, ವಿಮಾನ ನಿಲ್ದಾಣಕ್ಕೆ ಅದಾನಿ ಹೆಸರಿನ ಬದಲಾಗಿ ತುಳುನಾಡಿನ ಸಾಧಕರ ಹೆಸರನ್ನು ಇಡಬೇಕು ಹಾಗೂ ಸ್ಥಳೀಯರಿಗೆ ಉದ್ಯೋಗವಕಾಶ ನೀಡಬೇಕು ಎಂದರು.
ಮಾಜಿ ಸಚಿವ ಅಭಯಚಂದ್ರ ಜೈನ್‌ ಮಾತನಾಡಿ, ಶ್ರೀನಿವಾಸ ಮಲ್ಯರ ಸತತ ಪ್ರಯತ್ನದಿಂದ ವಿಮಾನ ನಿಲ್ದಾಣ ಮಂಜೂರಾಗಿದ್ದು, ಮೋದಿ ಸರಕಾರ ಅದಾನಿಗೆ ಗುತ್ತಿಗೆ ನೀಡಿರುವುದು ಜಿಲ್ಲೆಯ ಜನರಿಗೆ ನೋವುಂಟು ಮಾಡಿದೆ ಎಂದರು.
ಸಲೀಂ ಅಹಮ್ಮದ್‌, ವಿನಯ್‌ ಕುಮಾರ್‌ ಸೊರಕೆ, ಧನಂಜಯ ಮಟ್ಟು, ವಲೇರಿಯನ್‌ ಸಿಕ್ವೇರ, ವಸಂತ್‌ ಬಿ., ಶಾಲೆಟ್‌ ಪಿಂಟೋ ಉಪಸ್ಥಿತರಿದ್ದರು.

ಪ್ರತಿಭಟನೆಯಲ್ಲಿ ಡಿ.ಕೆ. ಶಿವಕುಮಾರ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next