Advertisement

ಕೇಂದ್ರೀಕೃತ ಕೈಗಾರಿಕೆ ತಪಾಸಣ ವ್ಯವಸ್ಥೆ: ರಾಜ್ಯಕ್ಕೆ “ಚಿನ್ನ’

10:00 PM Oct 27, 2022 | Team Udayavani |

ಬೆಂಗಳೂರು: ಸುಲಲಿತ ವ್ಯವಹಾರಕ್ಕೆ ಆದ್ಯತೆ ನೀಡುವ ರಾಜ್ಯಗಳ ಸಾಲಿನಲ್ಲಿ ಅಗ್ರ ಸ್ಥಾನದಲ್ಲಿರುವ ಕರ್ನಾಟಕ, ಕೇಂದ್ರೀಕೃತ ಕೈಗಾರಿಕೆ ತಪಾಸಣ ವ್ಯವಸ್ಥೆ ಜಾರಿಗಾಗಿ ಸ್ಕಾಚ್‌ ಅವಾರ್ಡ್ಸ್‌ನಲ್ಲಿ ಚಿನ್ನ ಪಡೆದಿದೆ.

Advertisement

“ಸ್ಟೇಟ್‌ ಆಫ್ ಗವರ್ನನ್ಸ್‌’  ಪರಿಕಲ್ಪನೆಯಡಿ ನಡೆದ 83ನೇ ಸ್ಕಾಚ್‌ ಶೃಂಗಸಭೆಯಲ್ಲಿ ಸುಲಲಿತ ವ್ಯವಹಾರಗಳ ವಿಭಾಗದಲ್ಲಿ ಕರ್ನಾಟಕಕ್ಕೆ ಅಗ್ರಮಾನ್ಯ  ಪ್ರಶಸ್ತಿ ಘೋಷಿಸಲಾಗಿದೆ. ಕಾರ್ಯಕ್ಷಮತೆಯ ಆಧಾರದ ಮೇಲೆ ರಾಜ್ಯಗಳು, ಇಲಾಖೆಗಳು, ಜಿಲ್ಲೆಗಳು ಮತ್ತು ಪುರಸಭೆಗಳನ್ನು ಶ್ರೇಣೀಕರಿಸಿ ಪ್ರತಿವರ್ಷ ಶ್ರೇಯಾಂಕವನ್ನು ಬಿಡುಗಡೆ ಮಾಡಲಾಗುತ್ತದೆ.

ಪ್ರಶಸ್ತಿ ಕುರಿತು ಸಂತಸ ವ್ಯಕ್ತಪಡಿಸಿರುವ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ್‌  ಆರ್‌. ನಿರಾಣಿ, ಕೈಗಾರಿಕೆಗಳ ಕಾರ್ಯ ನಿರ್ವಹಣೆ ನಿಯಮಗಳ ಪಾಲನೆಗಳ ತಪಾಸಣೆ, ಮೇಲ್ವಿಚಾರಣೆಗಾಗಿ ನಾನಾ ಇಲಾಖೆಗಳು ಪ್ರತ್ಯೇಕವಾಗಿ  ಭೇಟಿ ನೀಡುವುದರಿಂದ ಉಂಟಾಗುವ ಅನಗತ್ಯ ಕಿರಿಕಿರಿ ತಪ್ಪಿಸಲು ಹಾಗೂ ಪಾರದರ್ಶಕ ಪರಿಶೀಲನೆಗಾಗಿ ವಾಣಿಜ್ಯ  ಕೈಗಾರಿಕಾ ಇಲಾಖೆಯು ಕೇಂದ್ರೀಕೃತ ಪರಿವೀಕ್ಷಣ ವ್ಯವಸ್ಥೆ (ಸೆಂಟ್ರಲ್‌ ಇನ್ಸ್‌ಸ್ಟ್ರಕ್ಷನ್‌ ಸಿಸ್ಟೆಮ್) ಜಾರಿಗೊಳಿಸಿದೆ. ಈ ವ್ಯವಸ್ಥೆಗೆ “ಸ್ಕಾಚ್‌ ಅವಾರ್ಡ್ಸ್‌ʼನಲ್ಲಿ ಚಿನ್ನ ಪಡೆದಿರುವುದು ಸಂತಸದ ವಿಷಯವಾಗಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರಕಾರ “ಈಸ್‌ ಆಫ್ ಡೂಯಿಂಗ್‌’ ವ್ಯವಸ್ಥೆಯಡಿ ಕೈಗಾರಿಕೆಗಳ ಸುಗಮ ಕಾರ್ಯ ನಿರ್ವಹಣೆಗೆ ಸೂಕ್ತ ಕ್ರಮ ವಹಿಸುವಂತೆ ನೀಡಿರುವ ನಿರ್ದೇಶದನ್ವಯ ಹೊಸ ಸಿಐಎಸ್‌ ತಂತ್ರಾಂಶ ರೂಪುಗೊಂಡಿದೆ.  ಇದರ ಬಳಕೆಯಿಂದ ಕೈಗಾರಿಕೆಗಳ ತಪಾಸಣೆ, ನಿಯಮಗಳ ಪಾಲನೆ ಹಾಗೂ ಗುಣಮಟ್ಟದ ನಿರ್ವಹಣೆಗೆ ಸಹಕಾರಿಯಾಗಲಿದೆ ಎಂದು  ಕೈಗಾರಿಕಾಭಿವೃದ್ಧಿ ಆಯುಕ್ತರಾದ ಗುಂಜನ್‌ ಕೃಷ್ಣ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next