Advertisement

ಇಂಡಿಯಾ-ಪಾಕ್‌ನ ಈ‌ ಸ್ಟಾರ್ ಆಟಗಾರರು ಬಾಲ್ಯದಲ್ಲಿ ಒಂದೇ ರೀತಿ ಕಾಣುತ್ತಿದ್ದರು: ಫೋಟೋ ವೈರಲ್

06:53 PM Sep 28, 2022 | Team Udayavani |

ಮುಂಬಯಿ: ಇಂಡೋ – ಪಾಕ್‌ ಕ್ರಿಕೆಟ್‌ ಕದನ ಮುಂದಿನ ತಿಂಗಳು ಟಿ-20 ವಿಶ್ವಕಪ್‌ ನಲ್ಲಿ ನಡೆಯಲಿದೆ. ಏಷ್ಯಾಕಪ್‌ ನಲ್ಲಿ ಎರಡೂ ತಂಡಗಳು ಪ್ರಬಲ ಹೋರಾಟ ನೀಡಿತ್ತು. ಒಂದೊಂದು ಪಂದ್ಯವನ್ನು ಭಾರತ – ಪಾಕ್‌ ಗೆದ್ದಿತ್ತು.

Advertisement

ಭಾರತದ ವಿರಾಟ್‌ ಕೊಹ್ಲಿ ಹಾಗೂ ಪಾಕ್‌ ಕಪ್ತಾನ ಬಾಬರ್‌ ಅಜಂ ಇಬ್ಬರು ಬ್ಯಾಟಿಂಗ್‌ ವಿಭಾಗದಲ್ಲಿ ಹಲವಾರು ದಾಖಲೆಗಳನ್ನು ಬರೆದಿದ್ದಾರೆ. ಸದಾ ಪೈಪೋಟಿ ನೀಡುವ ಈ ಇಬ್ಬರು ಆಟಗಾರರು ಆಫ್ ದಿ ಫೀಲ್ಡ್‌ ನಲ್ಲಿ ಒಳ್ಳೆಯ ಸ್ನೇಹಿತರು. ಇತ್ತೀಚಿಗೆ ನಡೆದ ಏಷ್ಯಾಕಪ್‌ ನ ವೇಳೆ‌ ಬಾಬರ್‌ ಅಜಂ ಹಾಗೂ ವಿರಾಟ್‌ ಕೊಹ್ಲಿ ಮೈದಾನದಲ್ಲಿ ಭೇಟಿಯಾಗಿ ಪರಸ್ಪರ ಹಾಗೆಯೇ ಕೆಲ ನಿಮಿಷ ಮಾತುಕತೆ ನಡೆಸಿದ್ದರು.

ಟ್ವಿಟರ್‌ ಬಳಕೆದಾರರೊಬ್ಬರು, ಕೊಹ್ಲಿ ಹಾಗೂ ಬಾಬರ್‌  ಅವರ ಬಾಲ್ಯದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಕೆಲವೇ ಸೆಕೆಂಡ್‌ ಗಳಲ್ಲಿ ವೈರಲ್‌ ಆಗಿದೆ. ಅದಕ್ಕೆ ಕಾರಣ ಬಾಬರ್‌ ಹಾಗೂ ಕೊಹ್ಲಿ ಇಬ್ಬರೂ ಒಂದೇ ರೀತಿಯ ಶರ್ಟ್‌ ಧರಿಸಿದ್ದಾರೆ. ಇದಲ್ಲದೇ ಇಬ್ಬರೂ ಒಂದೇ ರೀತಿ ಕಾಣುತ್ತಾರೆ.

ಇದು ಇಬ್ಬರ ಪ್ರತ್ಯೇಕ ಫೋಟೋವಾಗಿದ್ದರೂ, ಇದರಲ್ಲಿ ಶರ್ಟ್‌,ಮುಖ ಹಾಗೂ ಇಬ್ಬರ ಕೂದಲು ಕಟ್‌ ಮಾಡಿರುವ ರೀತಿಯೂ ತುಂಬಾ ಹೋಲುತ್ತದೆ.

ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಒಬ್ಬರು ಇಬ್ಬರ ಫೋಟೋ ಕುರಿತು ʼಕರಣ್‌ ಅರ್ಜುನ್‌ʼ ಎಂದು ಬರೆದುಕೊಂಡಿದ್ದಾರೆ.

Advertisement

ವಿರಾಟ್‌ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇಂದಿನಿಂದ (ಸೆ. 28  ರಿಂದ) ಟಿ-20 ಸರಣಿ ಆಡಲಿದ್ದು, ಇಂದೇ ಬಾಬರ್‌ ಇಂಗ್ಲೆಂಡ್‌ ವಿರುದ್ಧ 5 ನೇ ಟಿ-20 ಯನ್ನು ಆಡಲಿದ್ದಾರೆ.

 

 

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next