ಬಾಗಲಕೋಟೆ : ಜಿಲ್ಲೆಯ 15ನೇ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯ ಇಬ್ಬರು ಸಚಿವರು ಸಹಿತ ಐದು ಜನ ಸೋಲನುಭವಿಸಿದ್ದು, ಕಾಂಗ್ರೆಸ್ ಐದು ಹಾಗೂ ಬಿಜೆಪಿ ಎರಡು ಸ್ಥಾನಗಳಲ್ಲಿ ಜಯ ಸಾಧಿಸಿದೆ.
ಮೀಸಲು ಕ್ಷೇತ್ರ ಮುಧೋಳದಲ್ಲಿ ಹಾಲಿ ಸಚಿವ ಗೋವಿಂದ ಕಾರಜೋಳ, ಕಾಂಗ್ರೆಸ್ ನ ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಎದುರು ಸೋಲುಂಡಿದ್ದಾರೆ. ಇನ್ನು ಬೀಳಗಿಯಲ್ಲಿ ಬಿಜೆಪಿಯ ಹಾಲಿ ಸಚಿವ ಮುರುಗೇಶ ನಿರಾಣಿ, ಕಾಂಗ್ರೆಸನ ಮಾಜಿ ಸಚಿವ ಜೆ.ಟಿ. ಪಾಟೀಲ ಎದುರು ಪರಾಭವಗೊಂಡಿದ್ದಾರೆ.
ಹುನಗುಂದದಲ್ಲಿ ಕಾಂಗ್ರೆಸ್ ನ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಬಾದಾಮಿಯಲ್ಲಿ ಭೀಮಸೇನ ಚಿಮ್ಮನಕಟ್ಟಿ (ಕಾಂಗ್ರೆಸ್), ಬಾಗಲಕೋಟೆ ಎಚ್.ವೈ. ಮೇಟಿ (ಕಾಂಗ್ರೆಸ್), ಜಮಖಂಡಿ ಜಗದೀಶ ಗುಡಗುಂಟಿ (ಬಿಜೆಪಿ), ತೇರದಾಳ ಸಿದ್ದು ಸವದಿ (ಬಿಜೆಪಿ) ಗೆಲುವು ಸಾಧಿಸಿದ್ದಾರೆ.
ಕಳೆದ ಬಾರಿ ಬಿಜೆಪಿ ಐದು ಹಾಗೂ ಕಾಂಗ್ರೆಸ್ ಎರಡು ಸ್ಥಾನ ಗರದ್ದಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಕ್ಷೇತ್ರ ಉಸಿಳಿಕೊಂಡಿದೆ.