Advertisement
ಶಾಸಕ ಕೆ.ಕುಂಞಿರಾಮನ್ ಉದ್ಘಾಟಿಸಿ ದರು. ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿ, ಜೀವನಿ ಯೋಜನೆಗೆ ಚಾಲನೆ ನೀಡಿದರು. ಜಿಲ್ಲಾ ಧಿಕಾರಿ ಡಾ.ಡಿ.ಸಜಿತ್ ಬಾಬು ಪ್ರಧಾನ ಭಾಷಣ ಮಾಡಿದರು. ನಿರ್ವಹಣೆ ಸಿºಂದಿಗೆ ಅಭಿನಂದನೆ ನಡೆಯಿತು. ಯೋಜನೆ ನಿರ್ದೇಶಕ ಪಿ.ಎ.ಯು. ಕೆ.ಪ್ರದೀಪನ್, ಎ.ಡಿ.ಸಿ. ಬೆವಿನ್ ಜಾನ್ ವರ್ಗೀಸ್, ಪ್ರಭಾರ ಡಿ.ಡಿ.ಪಿ. ಟಿ.ಎಂ.ಧನೇಷ್, ವಿವಿಧ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರಾದ ಖಾಲಿದ್ ಬೆಳ್ಳಿಪ್ಪಾಡಿ, ಸಿ.ರಾಮಚಂದ್ರನ್, ಅನಸೂಯಾ ರೈ, ಎ.ಮುಸ್ತಫಾ, ಸಿ.ಕೆ.ಕುಮಾರನ್, ಜಿಲ್ಲಾ ಪಂಚಾಯತ್ ಕಲ್ಯಾಣ ಸ್ಥಾಯೀ ಸಮಿತಿ ಅಧ್ಯಕ್ಷೆ ಎ.ಪಿ.ಉಷಾ, ಬ್ಲಾಕ್ ಪಂಚಾಯತ್ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ಕೆ.ಉಷಾ, ಕಲ್ಯಾಣ ಸ್ಥಾಯೀ ಸಮಿತಿ ಅಧ್ಯಕ್ಷ ಪಿ.ಕೆ.ಗೋಪಾಲನ್, ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಬಿಂದು ಶ್ರೀಧರನ್, ಸದಸ್ಯರಾದ ಕೆ.ವಾರಿಜಾಕ್ಷನ್, ಎಂ.ಸು ಧೀರ್, ಸತ್ಯಾವತಿ, ಜೆ.ವತ್ಸಲಾ, ಲಿಲ್ಲಿ ಥಾಮಸ್, ಕೆ.ಟಿ.ರಾಗಿಣಿ, ವಿವಿಧ ಗ್ರಾಮ ಪಂಚಾಯತ್ ಸದಸ್ಯರು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿ ಧಿಗಳು ಉಪಸ್ಥಿತರಿದ್ದರು. ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಓಮನಾ ರಾಮಚಂದ್ರನ್ ಸ್ವಾಗತಿಸಿದರು. ಕಾರಡ್ಕ ಬ್ಲಾಕ್ ವಿಸ್ತರಣೆ ಅಧಿ ಕಾರಿ (ಹೌಸಿಂಗ್) ಕೆ.ದಿನೇಶನ್ ವಂದಿಸಿದರು.
ಕಾರಡ್ಕ ಬ್ಲಾಕ್ ಪಂಚಾಯತ್ ಲೈಫ್ ಮಿಷನ್ ಯೋಜನೆ ಮೂಲಕ ನವಜೀವನ ಪಡೆದವರು 865 ಕುಟುಂಬಗಳು. ರಾಜ್ಯ ಸರಕಾರದ ಜನಪರ ಯೋಜನೆಗಳಲ್ಲಿ ಒಂದಾಗಿರುವ ಈ ಯೋಜನೆ ಮೂಲಕ ಇವರ ಸ್ವಂತ ಮನೆಯ ಕನಸು ನನಸಾಗಿದೆ. ಕುಟುಂಬ ಸಂಗಮದಲ್ಲಿ 483 ಮಂದಿ ಫಲಾನುಭವಿಗಳು ಭಾಗವಹಿಸಿದರು. ವಿವಿಧ ಇಲಾಖೆಗಳ ಸಿಬ್ಬಂದಿಯ ಸೇವೆ ಲಭ್ಯವಿದ್ದ ಅದಾಲತ್ ಸ್ಟಾಲ್‌ಗಳು ಗಮನ ಸೆಳೆದುವು. ವಿ.ವಿ.ಗೋಪಾಲಕೃಷ್ಣನ್ ಸಹಿತ ವಿವಿಧ ಇಲಾಖೆಗಳ ಪರಿಣತರು ತರಗತಿ ನಡೆಸಿದರು.