Advertisement

ಕರದಂಟು ಇಲ್ಲುಂಟು !

03:11 PM Oct 13, 2018 | |

ಉತ್ತರ ಕರ್ನಾಟಕದ ಗರಡಿ ಮನೆಯ ಪೈಲ್ವಾನರಿಗೆ ಪೌಷ್ಟಿಕ ಆಹಾರವಾಗಿದ್ದ ವಿಜಯಾ ಕರದಂಟು 111 ವರ್ಷಗಳ ನಂತರ ಸಿಲಿಕಾನ್‌ ಸಿಟಿಗೆ ಬಂದಿದೆ.

Advertisement

ಕರದಂಟು…ಉತ್ತರ ಕರ್ನಾಟಕದ ಪ್ರತಿ ಮನೆಮನೆಯ ಅಚ್ಚುಮೆಚ್ಚಿನ ಸಿಹಿ ತಿಂಡಿ. ನೈಸರ್ಗಿಕ ಅಂಟು, ಚುಕ್ಕಿ ಬೆಲ್ಲ, ಶುದ್ಧ  ತುಪ್ಪದ ಜೊತೆಗೆ ಹತ್ತಾರು ಬಗೆಯ ಡ್ರೈ ಫ್ರೂಟ್ಸ್‌ಗಳ ಮಿಶ್ರಣದಲ್ಲಿ ತಯಾರಾಗುವ ಕರದಂಟುವಿಗೆ ಶತಮಾನದ ಇತಿಹಾಸವಿದೆ. 1907ರಲ್ಲಿ ಬಾಗಲಕೋಟೆ ಜಿಲ್ಲೆಯ ಅಮೀನಗಡದ ಐಹೊಳ್ಳಿ ಮನೆತನದ ದಿವಂಗತ ಸಾವಳಿಗೆಪ್ಪ ಐಹೊಳ್ಳಿಯವರು ಈ ಕರದಂಟು ಸಿಹಿಯ ಮೂಲ ತಯಾರಕರು. 111 ವರ್ಷಗಳಿಂದ ಕರದಂಟು ಸಿಹಿಯನ್ನು ಉಣಬಡಿಸುತ್ತಿರುವ ವಿಜಯಾ ಸಂಸ್ಥೆಯವರು ಬೆಂಗಳೂರಿನಲ್ಲಿ ಹೊಸ ಶಾಖೆ ತೆರೆದಿದ್ದಾರೆ.

ಲೇಟಾದರೂ ಲೇಟೆಸ್ಟಾಗಿ ಕೆಲ ವರ್ಷಗಳ ಹಿಂದೆ ವಿಜಯಾ ಕರದಂಟು ಸ್ವಂತ ವೆಬ್‌ಸೈಟ್‌ ಶುರು ಮಾಡುವ ಮೂಲಕ ಆನ್‌ಲೈನ್‌ ಮಾರುಕಟ್ಟೆಯನ್ನು ಪ್ರವೇಶಿಸಿತ್ತು. ಆನ್‌ಲೈನ್‌ ಮೂಲಕ ಆರ್ಡರ್‌ ಕೊಟ್ಟು ತರಿಸಿಕೊಳ್ಳುತ್ತಿದ್ದವರಲ್ಲಿ ಹೆಚ್ಚಿನವರು ಬೆಂಗಳೂರಿನವರೇ ಆಗಿದ್ದರು. ಆರ್ಡರ್‌ ಏಬರುತ್ತಿದ್ದವು. ಆದರೆ ಕೊರಿಯರ್‌ ಮೂಲಕ ಕಳಿಸಿ ಕೊಡುವುದೇ ಸಮಸ್ಯೆಯಾಗಿತ್ತು. ಕೆಲವೊಮೆಆರ್ಡರ್‌ ತಡವಾಗುತ್ತಿದ್ದರೆ, ಇನ್ನು ಕೆಲವೊಮ್ಮೆ ಆರ್ಡರ್‌ ತಲುಪುತ್ತಲೇ ಇರಲಿಲ್ಲ. ಈ ತಾಪತ್ರಯವೇ ಬೇಡವೆಂದು ಬೆಂಗಳೂರಲ್ಲಿ ಶಾಖೆ ತೆರೆದಿದ್ದೇವೆ ಎನ್ನುತ್ತಾರೆ ಮಾಲೀಕರು. ಇಲ್ಲೇನೇನು ಸಿಗುತ್ತೆ? ಅಮೀನಗಡ ವಿಜಯಾ ಕ್ಲಾಸಿಕ್‌ ಕರದಂಟು, ಅಮೀನಗಡ ವಿಜಯಾ ಪ್ರೀಮಿಯಮ್‌ ಕರದಂಟು, ಲಡಗಿ ಲಡ್ಡು, ಡಿಂಕ್‌ ಲಡ್ಡುಗಳನ್ನು ಇಲ್ಲಿ ಸವಿಯಬಹುದು. ಬೆಂಗಳೂರಿನ ಮಂದಿ ಫಿಟ್‌ನೆಸ್‌ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವುದನ್ನು ಮನಗಂಡು ಬೆಂಗಳೂರಿಗರಿಗೆಂದೇ ಸ್ಪೆಷಲ್‌ ಕರದಂಟನ್ನು ಪರಿಚಯಿಸಿದ್ದಾರೆ. ಇದರ ಹೆಸರು ಸುಪ್ರೀಂ ಕರದಂಟು. ಇದು ಆಗ್ಯಾìನಿಕ್‌ ಕರದಂಟು. ಸಾವಯವ ಮತ್ತು ನೈಸರ್ಗಿಕ ಸಾಮಗ್ರಿಯನ್ನು ಬಳಸಿ ತಯಾರಿಸುತ್ತಾರೆ.

ಉಡುಪಿ ಗೋಡಂಬಿ
ನೂರು ವರ್ಷಗಳಿಂದ ರುಚಿಯನ್ನು ಕಾಪಾಡಿಕೊಂಡು ಬಂದಿರುವುದು ಹೆಗ್ಗಳಿಕೆ, ನಿಜ. ಆದರೆ ಏನೇನೂ ಬದಲಾವಣೆ ಆಗಿಲ್ಲ ಎಂದೇನಿಲ್ಲ. ಕಾಲಕ್ಕೆ ತಕ್ಕಂತೆ, ಗ್ರಾಹಕರ ಅಭಿರುಚಿಗೆ ತಕ್ಕಂತೆ ಚಿಕ್ಕಪುಟ್ಟ ಬದಲಾವಣೆಗಳಾಗಿವೆ. ದ್ರಾಕ್ಷಿ-ಗೋಡಂಬಿಗಳ ಜೊತೆಗೆ ವಾಲ್‌ನಟ್‌, ಅಕ್ರೂಟ್‌ ಸೇರಿದ್ದಾರೆ. ಅಮೀನಗಡದಲ್ಲೇ ತಯಾರಾಗುವ ಕರದಂಟಿಗೆ ಉಡುಪಿ ಗೋಡಂಬಿ, ಮಹಾರಾಷ್ಟ್ರದ ಕೊಲ್ಹಾಪುರ ಬೆಲ್ಲ ಅಂಧ್ರದ ತಾಂಡೂರಿಂದ ಗೇರು ಬೀಜ ಹೀಗೆ ಅನೇಕ ಕಡೆಗಳಿಂದ ಸಾಮಗ್ರಿಯನ್ನು ತರಿಸಿಕೊಳ್ಳಲಾಗುತ್ತದೆ.

ಈಗಿನ ಮಂದಿಗೆ ಪಿಜ್ಜಾ, ಬರ್ಗರ್‌ ಎಂದರೆ ರುಚಿ. ಅವರ ಮಾರ್ಕೆಟಿಂಗ್‌ ಮುಂದೆ ನಮ್ಮ ಹಳ್ಳಿ ತಿಂಡಿಗಳ ಹೊಳಪು ಮಾಸುತ್ತಿದೆ. ನಮ್ಮತನವನ್ನು ಉಳಿಸಿಕೊಳ್ಳಬೇಕೆಂದರೆ, ಆರೋಗ್ಯಕರವಾಗಿರುವ ಪ್ರಾಂತೀಯ ಆಹಾರ ವೈವಿಧ್ಯವನ್ನು ಕಾಪಾಡಿಕೊಳ್ಳಬೇಕು. ಆ ನಿಟ್ಟಿನಿಂದಲೇ ವಿಜಯಾ ಕರಂದಂಟನ್ನು ಬೆಂಗಳೂರಿನಲ್ಲಿ ಶುರು ಮಾಡಿದ್ದೇವೆ.
● ಸಂತೋಷ್‌ ಐಹೊಳ್ಳಿ, ಮಾಲೀಕರು

Advertisement

ಎಲ್ಲಿ?: ವಿಜಯಾ ಕರದಂಟು, ಮಾರುತಿ ಮಂದಿರ ಬಳಿ, ವಿಜಯನಗರ

Advertisement

Udayavani is now on Telegram. Click here to join our channel and stay updated with the latest news.

Next