Advertisement

ಗರ್ಭಿಣಿಯನ್ನು ಮನೆಗೆ ಸೇರಿಸಿ ಮಾನವೀಯತೆ ಮೆರೆದ ಕಾಪು ಶಾಸಕ

08:07 PM Mar 28, 2020 | Sriram |

ಕಾಪು: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಊರಿಗೆ ಹಿಂದಿರುಗಲಾರದೆ ಬೆಂಗಳೂರಿನಲ್ಲಿ ಸಂಕಷ್ಟ ಸ್ಥಿತಿಗೆ ಸಿಲುಕಿದ್ದ ಹಿರಿಯಡ್ಕ ಮೂಲದ ತುಂಬು ಗರ್ಭಿಣಿಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ಮೂಲಕ ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಮಾನವೀಯತೆ ಮರೆದಿದ್ದಾರೆ.

Advertisement

ಬೆಂಗಳೂರಿನ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ಹಿರಿಯಡ್ಕ ಮೂಲದ ತುಂಬು ಗರ್ಭಿಣಿಯು ಹೆರಿಗೆಗೆಂದು ತಾಯಿ ಮನೆಗೆ ಬರಲು ಅಸಾಧ್ಯದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇದಕ್ಕೆ ಸ್ಪಂದಿಸಿದ ಶಾಸಕ ಲಾಲಾಜಿ ಆರ್‌. ಮೆಂಡನ್‌ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ಮತ್ತು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರನ್ನು ಸಂಪರ್ಕಿಸಿ ವಿಶೇಷ ವಾಹನದ ಮೂಲಕ ಗರ್ಭಿಣಿಯನ್ನು ಊರಿಗೆ ತಲುಪಿಸಲು ಸಹಾಯ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next