Advertisement

Kapu ಮಟ್ಟು : ಮೂರ್ಛೆ ರೋಗದಿಂದ ಕುಸಿದು ಬಿದ್ದು ವ್ಯಕ್ತಿ ಸಾವು

09:52 PM Oct 21, 2023 | Team Udayavani |

ಕಾಪು: ಮೂರ್ಛೆ ರೋಗದಿಂದ ಕುಸಿದು ಬಿದ್ದು ಮಟ್ಟು ಗ್ರಾಮದ ರವಿ (52) ಎಂಬವರು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

Advertisement

ಚಿಕ್ಕ ವಯಸ್ಸಿನಿಂದಲೇ ಮೂಛೆì ರೋಗದಿಂದ ಬಳಲುತ್ತಿದ್ದ ಅವರು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರತೀ ದಿನ ಔಷಧ ಸೇವಿಸುತ್ತಿದ್ದರು. ಆದರೂ ರೋಗ ಪೂರ್ಣ ಗುಣಮುಖವಾಗದೇ ಪದೇ ಪದೇ ಮೂರ್ಛೆ ಬಂದು ಬೀಳುತ್ತಿದ್ದು, ಸ್ವಲ್ಪ ಸಮಯದ ಅನಂತರ ಸುಧಾರಿಸುತ್ತಿದ್ದರು.

ಶುಕ್ರವಾರ ರಾತ್ರಿ ಮೂರ್ಛೆ ಬಂದು ಕುಸಿದು ಬಿದ್ದ ಅವರನ್ನು ಮನೆಯವರು ಉಪಚರಿಸಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ಖಚಿತ ಪಡಿಸಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next