Advertisement

ಕಾಪು: ಕಚೇರಿಗಳು ಬರಲಿ ಯೋಜನೆಗಳೂ ಬರಲಿ

12:16 AM Aug 25, 2022 | Team Udayavani |

ಕಾಪು ತಾಲೂಕು 2017ರ ಬಜೆಟ್‌ನಲ್ಲಿ ಘೋಷಣೆಯಾಯಿತು. 2018 ಫೆ. 14ರಂದು ಅಧಿಕೃತವಾಗಿ ಉದ್ಘಾಟನೆಗೊಂಡಿತು. ನಾಲ್ಕು ವರ್ಷಗಳಲ್ಲಿ ಬೆಳವಣಿಗೆಯತ್ತ ಮುಖ ಮಾಡಿದೆ. ತಾಲೂಕು ಕಚೇರಿ, ತಾಲೂಕು ಪಂಚಾಯತ್‌, ಕಂದಾಯ ಇಲಾಖೆ, ಆಹಾರ ಇಲಾಖೆ ಮತ್ತು ಚುನಾವಣೆ ನಿರ್ವಹಣೆ ಹಾಗೂ
ಖಜಾನೆ ಇಲಾಖೆಗಳು ತಾಲೂಕು ಕೇಂದ್ರದಲ್ಲೇ ಕಾರ್ಯ ನಿರ್ವಹಿಸುತ್ತಿವೆ.

Advertisement

ಪ್ರಗತಿಯಲ್ಲಿದೆ
-ಮಿನಿ ವಿಧಾನಸೌಧ ನಿರ್ಮಾಣಕ್ಕೆ ಅನು ದಾನ ಮಂಜೂರಾಗಿದ್ದು, ಕಾಪು ಬಂಗ್ಲೆ – ಪುರಸಭೆ ಬಳಿಯ ಸರಕಾರಿ ಜಮೀನಿನಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.
-ಹೆಜಮಾಡಿ ಮೀನುಗಾರಿಕೆ ಬಂದರು ನಿರ್ಮಾಣಕ್ಕೆ ಚಾಲನೆ ದೊರಕಿದೆ.
-ಬೆಳಪುವಿನಲ್ಲಿ ಕಾಪು ಪಾಲಿಟೆಕ್ನಿಕ್‌ ಕಾಲೇಜು ಆರಂಭಗೊಂಡಿದೆ. ಬೆಳಪುವಿನಲ್ಲಿ ಅತ್ಯಾ ಧುನಿಕ ವಿಜ್ಞಾನ ಸಂಶೋಧನ ಕೇಂದ್ರದ ಕಾಮಗಾರಿ ನಡೆಯುತ್ತಿದೆ.
-ಕುರ್ಕಾಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ.

ತಾಲೂಕಿನ ಪ್ರಮುಖ ವಾಣಿಜ್ಯಬೆಳೆಗಳಾದ ಶಂಕರಪುರ ಮಲ್ಲಿಗೆಯನ್ನು ಪೋಷಿಸಲು ಶೀಥಲೀಕೃತ ಸಂಗ್ರಹಣಾ ಘಟಕ ಮತ್ತು ಮಟ್ಟುಗುಳ್ಳ ಬೆಳೆಯನ್ನು ಪ್ರೋತ್ಸಾಹಿ ಸಲು ಮಾರುಕಟ್ಟೆ ವ್ಯವಸ್ಥೆ ಜೋಡಣೆಯಾಗ ಬೇಕಿದೆ. ಕಡಲ ತೀರದ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯ ಮೂಲಕ ವಿಶೇಷ ಉತ್ತೇಜನ ಸಿಗಬೇಕಿದೆ.

ಆಗಬೇಕಾದದ್ದು
-ಸಬ್‌ ರಿಜಿಸ್ಟ್ರಾರ್‌ ಕಚೇರಿ, ತಾಲೂಕು ನ್ಯಾಯಾಲಯ, ತಾಲೂಕು ಆಸ್ಪತ್ರೆ, ಅಗ್ನಿ ಶಾಮಕ ಠಾಣೆ, ಪ್ರಾದೇಶಿಕ ಸಾರಿಗೆ ಕಚೇರಿ, ಮೆಸ್ಕಾಂ ಕಚೇರಿ, ಶಿಕ್ಷಣ ಇಲಾಖೆ ಮತ್ತು ಬಿಒ ಕಚೇರಿ, ಲೋಕೋಪಯೋಗಿ ಇಲಾಖೆ, ಮೀನುಗಾರಿಕೆ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ನೋಂದಣಿ ಮತ್ತು ಮುದ್ರಾಂಶ, ಸಣ್ಣ ನೀರಾವರಿ ಇಲಾಖೆ, ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆ ಸಹಿತ ವಿವಿಧ ಇಲಾಖೆಗಳು ಇನ್ನೂ ಬರಬೇಕಿವೆ.
-ತೋಟಗಾರಿಕೆ ಇಲಾಖೆ, ರೈತ ಸಂಪರ್ಕ ಕೇಂದ್ರ ಮತ್ತು ಪಶು ಇಲಾಖೆಗೆ ತಾಲೂಕು ಮಟ್ಟದ ಅಧಿಕಾರಿಗಳ ನೇಮಕವಾಗಬೇಕಿದೆ. ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣವಾಗಬೇಕಿದೆ.
-ತಾಲೂಕಿನಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಮತ್ತು ನಿಲ್ದಾಣ ವ್ಯವಸ್ಥೆ, ತಾಲೂಕು ಕ್ರೀಡಾಂಗಣ, ತಾಲೂಕು ಕೇಂದ್ರದಿಂದ ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಸಂಚಾರ ವ್ಯವಸ್ಥೆ ಜೋಡಣೆಗೆ ವಿಶೇಷ ಆದ್ಯತೆ ನೀಡಬೇಕಿದೆ.

- ರಾಕೇಶ್‌ ಕುಂಜೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next