Advertisement

Kapu ಗೂಡ್ಸ್‌ ಟೆಂಪೋ ಢಿಕ್ಕಿ; ಬೈಕ್‌ ಸವಾರನಿಗೆ ಗಾಯ

09:59 PM Sep 29, 2023 | Team Udayavani |

ಕಾಪು: ಗೂಡ್ಸ್‌ ಟೆಂಪೋ ಢಿಕ್ಕಿ ಹೊಡೆದು ಬೈಕ್‌ ಸವಾರ ಗಂಭೀರ ಗಾಯಗೊಂಡ ಘಟನೆ ರಾ.ಹೆ. 66ರ ಮೂಳೂರು ಫಿಶರೀಶ್‌ ರಸ್ತೆ ಬಳಿ ಸೆ. 28ರಂದು ನಡೆದಿದೆ.

Advertisement

ಮಣಿಪಾಲದಲ್ಲಿ ಅಮೆಜಾನ್‌ ಕಂಪೆನಿಯಲ್ಲಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡಿಕೊಂಡಿರುವ ಸುರತ್ಕಲ್‌ ಮುಕ್ಕ ನಿವಾಸಿ ಮಣಿಕಂಠ (37) ಗಾಯಾಳು ಬೈಕ್‌ ಸವಾರ.

ಮುಕ್ಕದಿಂದ ಮಣಿಪಾಲಕ್ಕೆ ಬರುತ್ತಿದ್ದ ಅವರ ದ್ವಿಚಕ್ರ ವಾಹನಕ್ಕೆ ರಾ.ಹೆ. 66ರ ಮಂಗಳೂರು ಉಡುಪಿ ನಡುವಿನ ಮೂಳೂರು ಫಿಶರೀಶ್‌ ರಸ್ತೆಯ ಬಳಿ ಟಾಟಾ ಗೂಡ್ಸ್‌ ವಾಹನ ಢಿಕ್ಕಿ ಹೊಡೆದಿತ್ತು.

ಪರಿಣಾಮ ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದ ಅವರ ತಲೆಗೆ ತೀವ್ರ ಗಾಯಗಳಾಗಿದ್ದು, ಎರಡೂ ಕೈ ಹಾಗೂ ಕಾಲುಗಳಿಗೆ ಮತ್ತು ಮೈಗೆ ಗಾಯವಾಗಿರುತ್ತದೆ. ಗಾಯಾಳುವನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next