Advertisement
ವಿಜಯ ಬ್ಯಾಂಕ್ ನಿವೃತ್ತ ಸಿಬಂದಿ ಕಾಪು ನಿವಾಸಿ ಗೋಪ ಪೂಜಾರಿ (70) ಗಾಯಾಳು ಸ್ಕೂಟಿ ಸವಾರ. ಉಡುಪಿಯಿಂದ ಮಂಗಳೂರು ರಸ್ತೆಯಲ್ಲಿ ಕಾಪುವಿನತ್ತ ಆಗಮಿಸುತ್ತಿದ್ದ ಸ್ಕೂಟಿಗೆ ಅದೇ ದಿಕ್ಕಿನಲ್ಲಿ ಬರುತ್ತಿದ್ದ ಕಾರು ಢಿಕ್ಕಿ ಹೊಡೆದಿದ್ದು, ಗೋಪ ಪೂಜಾರಿ ಸ್ಕೂಟಿ ಸಹಿತ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾರು ಚಾಲಕ ಕಾರನ್ನು ನಿಲ್ಲಿಸದೆ ಪರಾರಿಯಾಗಿದ್ದು, ಕಾರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಕಾಪು ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ಮುಂದುವರಿಸಿದ್ದಾರೆ.