ಕಾಪು: ನಾಲ್ಕು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಾಪು ಪೊಲೀಸರು ದಾವಣಗೆರೆಯಲ್ಲಿ ಬಂಧಿಸಿದ್ದಾರೆ.
ದಾವಣಗೆರೆ ಹರಪ್ಪನಹಳ್ಳಿಯ ದ್ಯಾಪನಾಯಕನ ಹಳ್ಳಿ ನಿವಾಸಿ ಭರಮಪ್ಪ ಕಡಬಗೇರಿ (55) ಬಂಧಿತ ಆರೋಪಿ.
2020ರಲ್ಲಿ ಕಟಪಾಡಿಯ ಗ್ಯಾರೇಜೊಂದರಲ್ಲಿ ಇತರ ಮೂವರೊಂದಿಗೆ ಸೇರಿಕೊಂಡು ಗದಗ ಮೂಲದ ಮಲ್ಲೇಶ್‌ನ ಮೇಲೆ ಹಲ್ಲೆ ನಡೆಸಿದ್ದ. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಭರಮಪ್ಪ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ.
ಆ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತನ ಪತ್ತೆಗಾಗಿ ನ್ಯಾಯಾಲಯವು ಪ್ರಕಟನೆ ಹೊರಡಿಸಿದ್ದು, ಪೊಲೀಸರು ಆತನ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದರು.
ಕಾಪು ಎಸ್ಸೆ ಅಬ್ದುಲ್ ಖಾದರ್ ಅವರ ಮಾರ್ಗದರ್ಶನದಂತೆ ಎಎಸ್‌ಐ ರವೀಶ್ ಹೊಳ್ಳ ಮತ್ತು ಸಿಬಂದಿ ಸುರೇಶ್ ಕುಮಾರ್ ಆರೋಪಿಯನ್ನು ಹರಪ್ಪನಹಳ್ಳಿಯ ದ್ಯಾಪನಾಯಕನ ಹಳ್ಳಿಯಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ಏಳು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.