Advertisement
ಕಾಪು ಪುರಸಭೆ ವತಿಯಿಂದ ಮೂರು ಮಾರಿಗುಡಿಗಳ ಆಸುಪಾಸಿನಲ್ಲಿ ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ 24 ಗಿ 7 ಮಾದರಿಯ ಸ್ವತ್ಛತಾ ಕಾರ್ಯಕ್ರಮ ನಡೆಸಲಾಗಿತ್ತು. ಸಂಪೂರ್ಣ ಸ್ವತ್ಛತೆಯ ಚಿಂತನೆಯೊಂದಿಗೆ 20 ಮಂದಿ ಪೌರ ಕಾರ್ಮಿಕರು, 2 ವಾಹನಗಳ ಸಹಿತವಾಗಿ ನಡೆಸಿರುವ ಮಾದರಿ ಕಾರ್ಯ ನಿರ್ವಹಣೆಗೆ ಶ್ಲಾಘನೆ ವ್ಯಕ್ತವಾಗಿದೆ.
ಕಾಪು ಪೇಟೆ ಮತ್ತು ಮೂರು ಮಾರಿಗುಡಿಗಳ ವಠಾರದಲ್ಲಿ ತೆರೆಯಲಾಗಿದ್ದ ಅಂಗಡಿ ಮತ್ತು ಸ್ಟಾಲ್‌ಗಳ ಸಹಿತವಾಗಿ ವಿವಿಧೆಡೆಗಳಲ್ಲಿ ಕಸ ಮತ್ತು ತ್ಯಾಜ್ಯ ಸಂಗ್ರಹಣೆಗಾಗಿ 50 ಡ್ರಮ್‌ಗಳನ್ನು ಇಡಲಾಗಿತ್ತು. ಜನರಿಗೆ ಸ್ವತ್ಛತೆಯ ಮಾಹಿತಿ ನೀಡಿ, ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 85ಕ್ಕೂ ಅಧಿಕ ಫಲಕಗಳನ್ನು ಅಳವಡಿಸಲಾಗಿತ್ತು. ಇದರೊಂದಿಗೆ ಪುರಸಭೆ ಮುಖ್ಯಾಧಿಕಾರಿ ರಾಯಪ್ಪ ಅವರ ನೇತೃತ್ವದಲ್ಲಿ ಪರಿಸರ ಅಭಿಯಂತರ ರವಿಪ್ರಕಾಶ್, ಆರೋಗ್ಯ ನಿರೀಕ್ಷಕ ದಿನೇಶ್ ಕುಮಾರ್, ಬಿಲ್ ಕಲೆಕ್ಟರ್‌ಗಳಾದ ರಿತೇಶ್ ಮತ್ತು ಉಮೇಶ್ ಹಾಗೂ 6 ಮಂದಿ ಚಾಲಕರು, 20 ಮಂದಿ ಪೌರ ಕಾರ್ಮಿಕರು 24 ಗಿ 7 ಮಾದರಿಯಲ್ಲಿ ಸ್ವತ್ಛ ಕಾಪುವಿಗಾಗಿ ಶ್ರಮಿಸಿದ್ದಾರೆ.
Related Articles
ಮಂಗಳವಾರ ಸಂಜೆಯಿಂದ ಬುಧವಾರ ಸಂಜೆಯವರೆಗೆ ನಡೆದ ಸುಗ್ಗಿ ಮಾರಿಪೂಜೆಯ ಪ್ರಯುಕ್ತ ಹಳೇ ಮಾರಿಗುಡಿ, ಹೊಸ ಮಾರಿಗುಡಿ ಮತ್ತು ಮೂರನೇ ಮಾರಿಗುಡಿ ಮತ್ತು ಅದರ ಸುತ್ತಮುತ್ತಲಿನಲ್ಲಿ 400ಕ್ಕೂ ಹೆಚ್ಚು ವಿವಿಧ ರೀತಿಯ ವ್ಯಾಪಾರ ಮಳಿಗೆಗಳು ತೆರೆದುಕೊಂಡಿದ್ದು, ಈ ಪ್ರದೇಶಗಳಿಂದ 4 ಟನ್‌ನಷ್ಟು ಹಸಿಕಸ ಮತ್ತು 3 ಟನ್‌ನಷ್ಟು ಒಣ ಕಸವನ್ನು ಸಂಗ್ರಹಿಸಲಾಗಿದೆ. ಇದನ್ನು ಘನ ಮತ್ತು ದ್ರವ ಸಂಪನ್ಮೂಲ ಘಟಕಕ್ಕೆ ಕೊಂಡೊಯ್ದು ಶೇಖರಣೆ ಮಾಡಲಾಗಿದೆ. ಮುಂದೆ ಅದನ್ನು ಸಂಪನ್ಮೂಲವಾಗಿ ಬಳಸಿಕೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ರಾಯಪ್ಪ ತಿಳಿಸಿದ್ದಾರೆ.
Advertisement
15 ಕೆ.ಜಿ.ಯಷ್ಟು ಪ್ಲಾಸ್ಟಿಕ್ ವಶಕ್ಕೆಕಾಪು ಪುರಸಭೆಯ ಪ್ರದೇಶವನ್ನು ಈಗಾಗಲೇ ಪ್ಲಾಸ್ಟಿಕ್ ಮುಕ್ತ ವಲಯವನ್ನಾಗಿ ಘೋಷಿಸಲಾಗಿದ್ದು, ಮಾರಿಪೂಜೆಯ ಸಂದರ್ಭದಲ್ಲೂ ಪ್ಲಾಸ್ಟಿಕ್ ರಹಿತ ಮಾರಿಪೂಜೆ ನಡೆಸುವಂತೆ ಅಂಗಡಿ ಮಾಲಕರಿಗೆ, ಮಾರಿಗುಡಿಯ ಆಡಳಿತ ಮಂಡಳಿ ಮತ್ತು ಸಾರ್ವಜನಿಕರಿಗೆ ಪುರಸಭೆ ವತಿಯಿಂದ ಮನವಿ ಮಾಡಲಾಗಿತ್ತು. ಅದರಂತೆ ಶೇ. 95ರಷ್ಟು ಪ್ಲಾಸ್ಟಿಕ್ ರಹಿತವಾಗಿ ಮಾರಿಪೂಜೆ ಆಚರಿಸಲಾಗಿದೆ. ಶಿವಮೊಗ್ಗ, ದಾವಣಗೆರೆ, ಮಂಗಳೂರು ಮತ್ತು ಉಡುಪಿ ಕಡೆಗಳಿಂದ ಬಂದ ವ್ಯಾಪಾರಸ್ಥರಿಂದ 15 ಕೆ.ಜಿ. ಪ್ಲಾಸ್ಟಿಕ್‌ನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಮುಖ್ಯಾಧಿಕಾರಿ ರಾಯಪ್ಪ ತಿಳಿಸಿದ್ದಾರೆ.