Advertisement

ಸೆನ್ಸಾರ್‌ ಪಾಸಾದ ‘ಕಪೋ ಕಲ್ಪಿತಂ’

01:37 PM Oct 08, 2021 | Team Udayavani |

ಸಂಪೂರ್ಣ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ “ಕಪೋ ಕಲ್ಪಿತಂ’ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್‌ ಯು/ಎ ಪ್ರಮಾಣ ಪತ್ರ ನೀಡಿದೆ. ನಾಯಕಿ ಮತ್ತು ನಿರ್ದೇಶಕಿ ಸುಮಿತ್ರಾ ರಮೇಶ್‌ ಗೌಡ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ.

Advertisement

ಶೀರ್ಷಿಕೆಯು ಸಂಸ್ಕೃತ ಪದವಾಗಿದೆ. ಸ್ವಯಂ ಕಲ್ಪನೆ ಎಂಬುದು ಅರ್ಥ ಕೊಡುತ್ತದೆ. ಕಿರುತೆರೆ ನಟ ಮತ್ತು ಸಣ್ಣ ಪುಟ್ಟ ಪಾತ್ರದಲ್ಲಿ ಅಭಿನಯಿಸಿದ್ದ ಪ್ರೀತಂ ಮಕ್ಕಿಹಾಲಿ ನಾಯಕ. ನಿವೃತ್ತ ಪೋಲೀಸ್‌ ಅಧಿಕಾರಿಯಾಗಿ ಸಂದೀಪ್ಮಲಾನಿ, ನಿರೂಪಕರಾಗಿ ಗೌರೀಶ್‌ಅಕ್ಕಿ. ಉಳಿದಂತೆ ರಾಜೇಶ್‌ ಕಣ್ಣೂರು ವಿನೀತ್‌, ವಿಶಾಲ್, ಅಮೋಘ, ಚೈತ್ರಾ ದೀಕ್ಷಿತ್‌ ಗೌಡ ಮುಂತಾದವರ ತಾರಾಗಣವಿದೆ.

ಇದನ್ನೂ ಓದಿ: ಡಿಜಿಟಲ್‌ ಲೋಕದ ಸುತ್ತ ‘ಗ್ರೇ ಗೇಮ್ಸ್‌’ ಶುರು

ರಚನೆ, ಚಿತ್ರಕತೆ, ಸಂಭಾಷಣೆ,ಎರಡು ಹಾಡುಗಳಿಗೆ ಸಾಹಿತ್ಯ, ಸಂಗೀತ ಮತ್ತು ನಿರ್ಮಾಣದಲ್ಲಿ ಪಾಲುದಾರಾಗಿರುವುದು ಮಂಗಳೂರಿನ ಗಣಿದೇವ್‌ ಕಾರ್ಕಳ. ಛಾಯಾಗ್ರಹಣ-ಸಂಕಲನ ಬಾತು ಕುಲಾಲ್‌ ಅವರದು.

ದಕ್ಷಿಣ ಕನ್ನಡ, ಉಡುಪಿಯಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮಗಳ ಸಾಧನೆಗೆ ರಮೇಶ್‌ ಚಿಕ್ಕೇಗೌಡ ಸವ್ಯಾಚಿ ಕ್ರಿಯೇಶನ್ಸ್‌ ಮೂಲಕ ಅಕ್ಷರ ಪ್ರೊಡಕ್ಷನ್‌ ಸಹಯೋಗದೊಂದಿಗೆ ಬಂಡವಾಳ ಹೂಡಿದ್ದಾರೆ. ಕವಿತಾ ಕನ್ನಿಕಾ ಪೂಜಾರಿ ಸೇರಿಕೊಂಡಿದ್ದಾರೆ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next