Advertisement

ಪೂಜಾ ಮಹೋತ್ಸವ: ಮೈನವಿರೇಳಿಸಿದ ಶಸ್ತ್ರಧಾರಣೆ

05:46 PM May 01, 2019 | Naveen |

ಕಂಪ್ಲಿ: ಪಟ್ಟಣದ ಕೋಟೆ ಪ್ರದೇಶದ ತುಂಗಭದ್ರಾ ನದಿ ತೀರದಲ್ಲಿ ಕಾಳಮ್ಮದೇವಿ ಪೂಜಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು. ಮಹೋತ್ಸವದಲ್ಲಿ ಮೈನವಿರೇಳಿಸುವ ಶಸ್ತ್ರಧಾರಣೆ ಸಾರ್ವಜನಿಕರನ್ನು ಆಶ್ಚರ್ಯಗೊಳಿಸಿದರೆ, ಸುಡುವ ಬಿಸಿಲಿನಲ್ಲಿ ಮೀನುಗಾರರ ಭಕ್ತಿಯ ಪರಾಕಾಷ್ಠೆ ಎಲ್ಲೆ ಮೀರಿತ್ತು. ಇದೇ ಸಂದರ್ಭದಲ್ಲಿ ಮೀನುಗಾರ ಕುಟುಂಬದ ಮಹಿಳೆಯರು ಬೆಲ್ಲದಿಂದ ತಯಾರಿಸಿದ ತ್ರಿಕೋನ ಆಕೃತಿಯನ್ನು ರಚಿಸಿಕೊಂಡು ತಟ್ಟೆಯಲ್ಲಿಟ್ಟುಕೊಂಡು ದೇವಿಗೆ ನೈವೇದ್ಯ ಸಮರ್ಪಿಸಿದರು.

Advertisement

ಸ್ಥಳೀಯ ಕೋಟೆ ಪ್ರದೇಶದ ಮೀನುಗಾರ ಕಾಲೋನಿಯಲ್ಲಿ ನಡೆದ ಕಾಳಮ್ಮದೇವಿ ಪೂಜಾ ಮಹೋತ್ಸವದಲ್ಲಿ ಹರಕೆ ಹೊತ್ತ ಭಕ್ತರು ಬೆನ್ನಿಗೆ ಕಬ್ಬಿಣದ ಕೊಕ್ಕೆ ಸಿಕ್ಕಿಸಿಕೊಂಡು, ಅದಕ್ಕೆ ನೈಲಾನ್‌ ಹಗ್ಗ ಕಟ್ಟಿ ಕಾರು, ಸಣ್ಣ ರಥ ಸೇರಿದಂತೆ ಹಲವು ವಾಹನಗಳನ್ನು ಎಳೆದು ನೆರೆದಿದ್ದವರ ಗಮನ ಸೆಳೆದರು.

ಜಾತ್ರಾ ಮಹೋತ್ಸವದಲ್ಲಿ 5 ಕಾರುಗಳ ಶಸ್ತ್ರ, ಮೂರು ಆಟೋಗಳ ಶಸ್ತ್ರ, 2 ಬೃಹತ್‌ ಕಲ್ಲಿನ ಗುಂಡುಗಳ ಶಸ್ತ್ರ ಹಾಗೂ ದೇವಿಯ ರಥದ ಶಸ್ತ್ರವನ್ನು ಹಾಕಿಕೊಂಡು ತಮ್ಮ ಭಕ್ತಿಯನ್ನು ಪ್ರದರ್ಶನ ಮಾಡಿದರು. ನಂತರ ಸಂಜೆಯವರೆಗೂ ಕೋಟೆಯಲ್ಲಿ ಭಕ್ತ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಕೋಟೆ ಪ್ರದೇಶ, ಕಂಪ್ಲಿ ಹಾಗೂ ಸುತ್ತಮುತ್ತಲ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.

ಕಂಪ್ಲಿ: ಕೋಟೆ ಮೀನುಗಾರ ಕಾಲೋನಿಯಲ್ಲಿ ಕಾಳಮ್ಮದೇವಿಗೆ ಭಕ್ತರು ಬೆನ್ನಿಗೆ, ಕಾಲಿನ ಮೀನಖಂಡಕ್ಕೆ ಕಬ್ಬಿಣದ ಕೊಕ್ಕೆ ಸಿಕ್ಕಿಸಿಕೊಂಡು ಟ್ರ್ಯಾಕ್ಟರ್‌ ಟ್ರ್ಯಾಲಿಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ಬೊಂಬಿನ ಹಂದರಕ್ಕೆ ಇಳಿ ಬಿದ್ದು ಹರಕೆ ತೀರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next