Advertisement

ನ್ಯಾಯಕ್ಕಾಗಿ “ಇನ್‌ಸಾಫ್’: ಕಪಿಲ್‌ ಸಿಬಲ್‌

01:23 AM Mar 05, 2023 | Team Udayavani |

ಹೊಸದಿಲ್ಲಿ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರವು ದೇಶದ ನಾಗರಿಕರ ವಿರುದ್ಧ ಕೆಲಸ ಮಾಡುತ್ತಿದ್ದು, ಈ ಅನ್ಯಾಯದ ವಿರುದ್ಧ ಹೋರಾಡಲು ಹೊಸ ವೇದಿಕೆಯೊಂದನ್ನು ಸೃಷ್ಟಿಸುತ್ತಿರುವುದಾಗಿ ರಾಜ್ಯಸಭಾ ಸದಸ್ಯ ಕಪಿಲ್‌ ಸಿಬಲ್‌ ಘೋಷಿಸಿದ್ದಾರೆ.

Advertisement

ಶನಿವಾರ ಹೊಸ ದಿಲ್ಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಇನ್‌ಸಾಫ್’ ಎಂಬ ಪ್ಲಾಟ್‌ಫಾರಂ, “ಇನ್‌ಸಾಫ್ ಕೆ ಸಿಪಾಯಿ’ ಎಂಬ ವೆಬ್‌ಸೈಟನ್ನು ಆರಂಭಿಸಲಿದ್ದೇವೆ. ಅನ್ಯಾಯದ ವಿರುದ್ಧ ಹೋರಾಡಲು ಇಚ್ಛಿಸುವ ವಕೀಲರೇ ಇದರ ಮುಂದಾಳತ್ವ ವಹಿಸಿಕೊಳ್ಳಲಿದ್ದಾರೆ’ ಎಂದು ಹೇಳಿದ್ದಾರೆ.

ಇದೇ 11ರಂದು ಜಂತರ್‌ಮಂತರ್‌ನಲ್ಲಿ ಸಾರ್ವಜನಿಕ ಸಭೆ ನಡೆಸಲಾಗುವುದು ಎಂದಿರುವ ಸಿಬಲ್‌, ಆ ಸಭೆಗೆ ವಿಪಕ್ಷಗಳ ನಾಯಕರು, ಜನಸಾಮಾನ್ಯರಿಗೂ ಮುಕ್ತ ಆಹ್ವಾನ ನೀಡುತ್ತಿದ್ದೇವೆ ಎಂದಿ ದ್ದಾರೆ. ಜತೆಗೆ, ಇದೊಂದು ಜನರ ಚಳವಳಿ ಯಾಗಿದ್ದು, ರಾಜಕೀಯ ಪಕ್ಷದ ರೂಪ ಪಡೆಯು ವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ಕೇಂದ್ರದ ವಿರುದ್ಧ ವಾಗ್ಧಾಳಿ: ಇದೇ ವೇಳೆ ಕೇಂದ್ರ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದ ಸಿಬಲ್‌, ಬಿಜೆಪಿ ಸರಕಾರವು ದೇಶದಲ್ಲಿ 8 ಚುನಾಯಿತ ಸರಕಾರಗಳನ್ನು ಪತನಗೊ ಳಿಸಿದೆ. 10ನೇ ಪರಿಚ್ಛೇದವು ಪಕ್ಷಾಂತರಿಗಳ ಸ್ವರ್ಗವಾಗಿ ರೂಪುಗೊಂಡಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next