Advertisement

ಗರ್ಲ್ ಫ್ರೆಂಡ್‌ ಪರಿಚಯಿಸಿದ ಕಪಿಲ್‌ ಶರ್ಮಾ

10:14 AM Mar 19, 2017 | Team Udayavani |

ಮುಂಬೈ: ಜನಪ್ರಿಯ ಹಾಸ್ಯ ಕಾರ್ಯಕ್ರಮ ನಿರೂಪಕ ಕಪಿಲ್‌ ಶರ್ಮಾ ತಮ್ಮ ಅಭಿಮಾನಿಗಳಿಗೆ ಟ್ವಿಟರ್‌ ಮೂಲಕ ಶನಿವಾರ ತಮ್ಮ ಪ್ರೇಯಸಿಯನ್ನು ಪರಿಚಯಿಸಿದ್ದಾರೆ. ತಮ್ಮ ಪ್ರೇಯಸಿ ಗಿನ್ನಿ ಜೊತೆಗಿರುವ ಫೋಟೊವನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿದ್ದು, “ಈಕೆ ನನ್ನ ಅರ್ಧಾಂಗಿ ಎಂದು ನಾನು ಹೇಳುವುದಿಲ್ಲ. ಈಕೆಯಿಂದ ನಾನು ಸಂಪೂರ್ಣನಾಗಿದ್ದೇನೆ. ನಾನು ನಿನ್ನ ಪ್ರೀತಿಸುತ್ತೇನೆ ಗಿನಿ. ದಯವಿಟ್ಟು ಈಕೆಯನ್ನು ಸ್ವಾಗತಿಸಿ, ನಾನು ಇವಳನ್ನು ತುಂಬಾ ಪ್ರೀತಿಸು ತ್ತೇನೆ’ ಎಂದು ಬರೆದುಕೊಂಡಿದ್ದಾರೆ.

Advertisement

ಇದಕ್ಕೂ ಮೊದಲು ಬೇರೊಂದು ಟ್ವೀಟ್‌ ಮಾಡಿದ್ದ ಶರ್ಮಾ, “ನಾನು ನಿಮ್ಮಲ್ಲರ ಜೊತೆ ಅತಿ ಸುಂದರವಾದ ವಿಷಯವೊಂದನ್ನು ಹಂಚಿಕೊಳ್ಳಲಿದ್ದೇನೆ. ಇನ್ನು 30 ನಿಮಿಷ ಕಾಯಿರಿ’ ಎನ್ನುವ ಮೂಲಕ ಕುತೂಹಲ ಹುಟ್ಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next