Advertisement

ಕಪಿಲ್‌ ದೇವ್‌ ಭಾರತ ಕ್ರಿಕೆಟ್‌ ಕಂಡ ನಿಜವಾದ ʻಕ್ಯಾಪ್ಟನ್‌ ಕೂಲ್‌ʼ-ಸುನಿಲ್‌ ಗವಾಸ್ಕರ್‌

07:32 PM Jun 25, 2023 | Team Udayavani |

ನವದೆಹಲಿ: 1983ರ ವಿಶ್ವಕಪ್‌ ವಿಜೇತ ಭಾರತ ತಂಡದ ನಾಯಕ ಕಪಿಲ್‌ ದೇವ್‌ ಅವರು ಭಾರತ ಕ್ರಿಕೆಟ್‌ ತಂಡದ ನಿಜವಾದ ʻಕ್ಯಾಪ್ಟನ್‌ ಕೂಲ್‌ʼ ಎಂದು ಸುನಿಲ್‌ ಗವಾಸ್ಕರ್‌ ಹೇಳಿದ್ಧಾರೆ.

Advertisement

ಜೂನ್‌ 25 ರಂದು ಭಾರತ ಏಕದಿನ ವಿಶ್ವಕಪ್‌ ಜಯಿಸಿ 40 ವರ್ಷವಾದ ಸಂಭ್ರಾಮಾಚರಣೆಯಲ್ಲಿ ಕಪಿಲ್‌ ದೇವ್‌ ಅವರನ್ನು ಧೋನಿ ಜೊತೆ ಹೋಲಿಸಿ ಮಾತನಾಡಿದ ಗವಾಸ್ಕರ್‌, ಪಿಚ್‌ನಲ್ಲಿ ಆಟದ ವೇಳೆ ಸದಾ ತಾಳ್ಮೆಯಿಂದಲೇ ಇರುತ್ತಿದ್ದ ಕಪಿಲ್‌ ದೇವ್‌ ಅವರೇ ನಿಜವಾದ ʻಕ್ಯಾಪ್ಟನ್‌ ಕೂಲ್‌ʼ ಎಂದು ಬಣ್ಣಿಸಿದ್ದಾರೆ.

ʻಬ್ಯಾಟ್‌ ಮತ್ತು ಬಾಲ್‌ ಎರಡರಲ್ಲೂ ಕಪಿಲ್‌ ಅತ್ಯದ್ಭುತ ಪ್ರದರ್ಶನ ತೋರುತ್ತಿದ್ದರು. ಫೈನಲ್‌ ಪಂದ್ಯದಲ್ಲಿ ಕಪಿಲ್‌ ಕೈ ಹಿಡಿದ ವಿವ್‌ ರಿಚರ್ಡ್ಸ್‌ ಅವರ ಕ್ಯಾಚ್‌ ಒಂದನ್ನಂತೂ ಮರೆಯಲು ಸಾಧ್ಯವೇ ಇಲ್ಲ. ಅವರ ಅದ್ಭುತ ನಾಯಕತ್ವ ಭಾರತಕ್ಕೆ ವಿಶ್ವಕಪ್‌ ತರಿಸಿತ್ತು. ಯಾವುದಾದರೂ ಕಠಿಣ ಸಂದರ್ಭವಿದ್ದಾಗ ಫೀಲ್ಡರ್‌ ಒಬ್ಬ ಕ್ಯಾಚ್‌ ಬಿಟ್ಟಾಗಲೋ ಅಥವಾ ಮಿಸ್‌ಫೀಲ್ಡ್‌ ಆದಾಗಲೋ ಅವರು ಅದನ್ನು ಕೇವಲ ಒಂದು ನಗುವಿನಿಂದ ಮರೆಯಾಗಿಸಿ ಆಟಗಾರರಿಗೆ ಮತ್ತೆ ಸ್ಪೂರ್ತಿ ತುಂಬುತ್ತಿದ್ದ ರೀತಿಯನ್ನು ನೋಡಿದಾಗ ಅವರೇ ನಿಜವಾದ ಕ್ಯಾಪ್ಟನ್‌ ಕೂಲ್‌ ಎಂಬುವುದರಲ್ಲಿ ಯಾವುದೇ ಅನುಮಾನ ಬರಲಾರದುʼ ಎಂದು ಗವಾಸ್ಕರ್‌ ಹೇಳಿದ್ದಾರೆ.

ʻ1983 ರ ವಿಶ್ವಕಪ್‌ ಪಂದ್ಯಾಕೂಟಗಳಲ್ಲಿ ಕಪಿಲ್‌ ದೇವ್‌ ಅವರ ಅವರ ಅದ್ಭುತ ಇನ್ನಿಂಗ್ಸ್‌ಗಳನ್ನು ಕಂಡಿದ್ದೇವೆ. ಅವುಗಳ ಪೈಕಿ ಜಿಂಬಾಬ್ವೆ ವಿರುದ್ಧ 138 ಎಸೆತಗಳಲ್ಲಿ ಅವರು ಬಾರಿಸಿದ 175 ರನ್‌ ಮರೆಯಲಸಾಧ್ಯ. ಅತ್ಯಂತ ಮಹತ್ವದ ಪಂದ್ಯದಲ್ಲಿ ಕಪಿಲ್‌ ಆಡಿದ ಆಲ್‌ರೌಂಡ್‌ ಆಟದಿಂದಾಗಿ ಜಿಂಬಾಬ್ವೆ ತಂಡವನ್ನು 235 ರನ್ನಿಗೆ ಕಟ್ಟಿಹಾಕಲು ಸಾಧ್ಯವಾಗಿತ್ತುʼ.

ʻಆ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವಿತ್ತು ಫೈನಲ್‌ ಪಂದ್ಯದಲ್ಲೂ ನಾವು ಜಯಗಳಿಸಿದ ಸನ್ನಿವೇಶವನ್ನು ಪದಗಳಲ್ಲಿ ವರ್ಣಿಸಲು ನನಗೆ ಸಾಧ್ಯವಾಗುತ್ತಿಲ್ಲ. ಬಹುಶಃ ಪ್ರಶಸ್ತಿ ಗಳಿಸಿದ ಬಳಿಕದ ನಮ್ಮ ನಗು ಯಾವುದಾದರೂ ಟೂಥ್‌ಪೇಸ್ಟ್‌ ಕಂಪೆನಿಗೆ ಉತ್ತಮ ಜಾಹೀರಾತು ಆಗಬಹುದಿತ್ತುʼ ಎಂದು ಸುನಿಲ್‌ ಗವಾಸ್ಕರ್‌ ಅಂದಿನ ಐತಿಹಾಸಿಕ ದಿನವನ್ನು ಮೆಲುಕು ಹಾಕಿಕೊಂಡಿದ್ದಾರೆ.

Advertisement

ಇದನ್ನೂ ಓದಿTop 50 ಯೂಟ್ಯೂಬರ್ ಗಳ ಜೊತೆ ಸಚಿವ ಪಿಯೂಷ್ ಗೋಯಲ್ ಸಂವಾದ

Advertisement

Udayavani is now on Telegram. Click here to join our channel and stay updated with the latest news.

Next