Advertisement

ಗಾಲ್ಫ್ ಕೋರ್ಸ್‌ಗೆ ಮರಳಿದ ಕಪಿಲ್‌ ದೇವ್‌: ಅಭಿಮಾನಿಗಳಿಗೆ ಸಂತಸ

10:05 AM Nov 13, 2020 | keerthan |

ಹೊಸದಿಲ್ಲಿ: ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಮಾಜಿ ಕ್ರಿಕೆಟಿಗ ಕಪಿಲ್‌ ದೇವ್‌ ಗಾಲ್ಫ್ ಕೋರ್ಸ್‌ಗೆ ಮರಳಿದ್ದಾರೆ.

Advertisement

61 ವರ್ಷದ ಕಪಿಲ್‌ ಗುರುವಾರ ಇಲ್ಲಿನ “ಡೆಲ್ಲಿ ಗಾಲ್ಫ್ ಕ್ಲಬ್‌’ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದರು.

“ದೊಡ್ಡದೊಂದು ಆಘಾತದ ಬಳಿಕ ನಮ್ಮ ನೆಚ್ಚಿನ ಕ್ರೀಡಾ ಅಂಗಳಕ್ಕೆ ಮರಳುವ ಖುಷಿಯನ್ನು ಬಣ್ಣಿಸಲು ಪದಗಳಿಲ್ಲ. ಅದು ಗಾಲ್ಫ್ ಕೋರ್ಸ್‌ ಆಗಿರಬಹುದು ಅಥವಾ ಕ್ರಿಕೆಟ್‌ ಗ್ರೌಂಡ್‌ ಆಗಿರಬಹುದು… ಇಲ್ಲಿ ಗೆಳೆಯರೊಂದಿಗೆ ಆಡುವುದೆಂದರೆ ಅದರಷ್ಟು ಸಂಭ್ರಮ ಬೇರೊಂದಿಲ್ಲ’ ಎಂಬುದಾಗಿ ಕಪಿಲ್‌ ಹೇಳಿದ್ದಾರೆ.

1983ರಲ್ಲಿ ಭಾರತಕ್ಕೆ ಪ್ರಪ್ರಥಮ ಏಕದಿನ ವಿಶ್ವಕಪ್‌ ತಂದಿತ್ತ ಕಪ್ತಾನನಾಗಿರುವ ಕಪಿಲ್‌ ದೇವ್‌, 1994ರಲ್ಲಿ ಕ್ರಿಕೆಟಿಗೆ ವಿದಾಯ ಹೇಳಿದ ಬಳಿಕ ಗಾಲ್ಫ್ ಕ್ರೀಡೆಯ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡಿದ್ದರು. ವೃತ್ತಿಪರ ಗಾಲ್ಫರ್‌ ಆಗಿ ಗುರುತಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next