Advertisement

ಕಪಾಲಿ ಥಿಯೇಟರ್ ಇನ್ನು ನೆನಪು ಮಾತ್ರ! ಇಂದು ಕೊನೆಯ ಪ್ರದರ್ಶನ

04:07 PM Oct 12, 2017 | Sharanya Alva |

ಬೆಂಗಳೂರು: ನಗರದ ಮೆಜೆಸ್ಟಿಕ್ ನಲ್ಲಿರುವ ಸುಪ್ರಸಿದ್ಧ ಕಪಾಲಿ ಚಿತ್ರಮಂದಿರದಲ್ಲಿ ಗುರುವಾರ ತಡರಾತ್ರಿ ಕೊನೆಯ ಪ್ರದರ್ಶನದೊಂದಿಗೆ ಇನ್ನು ನೆನಪಾಗಿಯಷ್ಟೇ ಉಳಿಯಲಿದೆ. ಹೌದು ಬರೋಬ್ಬರಿ 49 ವರ್ಷಗಳ ಬಳಿಕ ಕಪಾಲಿ ಥಿಯೇಟರ್ ಶಾಶ್ವತವಾಗಿ ಸ್ಥಗಿತಗೊಳ್ಳುವ ಮೂಲಕ ಇತಿಹಾಸದ ಪುಟ ಸೇರಲಿದೆ.

Advertisement

ಶುಕ್ರವಾರದಿಂದ ಕಪಾಲಿ ಚಿತ್ರಮಂದಿರಲ್ಲಿ ಯಾವುದೇ ಚಿತ್ರಪ್ರದರ್ಶನ ಇಲ್ಲ. ಇನ್ನು ಕೆಲವೇ ದಿನಗಳಲ್ಲಿ ಚಿತ್ರಮಂದಿರದ ನೆಲಸಮ ಕಾರ್ಯ ಆರಂಭವಾಗಲಿದ್ದು, ಈ ಸ್ಥಳದಲ್ಲಿ ಬೃಹತ್ ಮಾಲ್ ತಲೆಎತ್ತಲಿದೆ.

1,465 ಆಸನಗಳನ್ನು ಹೊಂದಿದ್ದ ಕಪಾಲಿ ಚಿತ್ರವನ್ನು 1968ರಲ್ಲಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಉದ್ಘಾಟಿಸಿದ್ದರು. ಅಂದು ಜಗತ್ತಿನ ಮೂರನೇ ಅತಿ ದೊಡ್ಡ, ಏಷ್ಯಾದಲ್ಲೇ ಮೊದಲ ಏಕಸ್ಕ್ರೀನ್ ಬಹುದೊಡ್ಡ ಸಿನಿಮಾ ಥಿಯೇಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. 
ಡಾ. ರಾಜ್ಕುಮಾರ್ ಅಭಿನಯದ ‘ಮಣ್ಣಿನ ಮಗ’ ಚಿತ್ರವು 100 ದಿನ ಯಶಸ್ವಿ ಪ್ರದರ್ಶನ ಕಂಡ ಮೊದಲ ಚಿತ್ರವಾಗಿದೆ. ಇಂಗ್ಲಿಷ್ ಹಾಗೂ ಹಿಂದಿ ಭಾಷೆಯ ಚಿತ್ರಗಳು ಸಹ ಇಲ್ಲಿ ಪ್ರದರ್ಶನಗೊಂಡಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next