Advertisement
ಯೋಜನೆ1982ರಲ್ಲಿ ಡಾ| ಹೆಗ್ಗಡೆಯವರು ಬಡವರ ಉದ್ಧಾರದ ಕಾಳಜಿಯಿಂದ ರೂಪಿಸಿದ ಗ್ರಾಮಾಭಿವೃದ್ಧಿ ಯೋಜನೆ ಇಂದು ಲಕ್ಷಾಂತರ ಜನರಿಗೆ ನೆರಳು ಕೊಡುತ್ತಿದೆ. ಸಣ್ಣಮಟ್ಟಿಗೆ ಬೆಳ್ತಂಗಡಿ ತಾಲೂಕಿನಲ್ಲಿ ಪ್ರಾರಂಭಿಸಿದ ಯೋಜನೆ ಇಂದು ರಾಜ್ಯದ 30 ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಾ ಅಂತಾರಾಷ್ಟ್ರೀಯ ಗಮನ ಸೆಳೆದು ಗ್ರೀನ್ ಆಸ್ಕರ್ ಸೇರಿ ಅನೇಕ ಪ್ರಶಸ್ತಿ ಗಳಿಸಿದೆ. ಸರಕಾರವೇ ಈ ಯೋಜನೆಯ ಕೆಲವು ಉಪಯೋಜನೆಗಳನ್ನು ಅನಂತರ ಅನುಷ್ಠಾನಿಸಿದೆ. ಯೋಜನೆ ಇಂದು 3.72 ಲಕ್ಷ ಸ್ವ ಸಹಾಯ ಸಂಘಗಳನ್ನು ಹೊಂದಿದ್ದು, 36.44 ಲಕ್ಷ ಸದಸ್ಯರಿದ್ದಾರೆ. 6,248 ಕೋ.ರೂ. ಸಾಲವನ್ನು ವಿವಿಧ ಬ್ಯಾಂಕ್‌ಗಳ ಮೂಲಕ ನೇರವಾಗಿ ಸದಸ್ಯರ ವಿವಿಧ ಅಗತ್ಯಗಳಿಗೆ ನೀಡಲಾಗಿದೆ.
ನಡೆದು ಬಂದ ಹಾದಿ
ಖ್ಯಾತ ಹಿರಿಯ ನಿರ್ದೇಶಕ ಟಿ.ಎಸ್. ನಾಗಾಭರಣ ಕಥೆ ರಚಿಸಿ, ನಿರ್ದೇಶಿಸಿದ್ದು, ಯೋಜನೆ ನಡೆದು ಬಂದ ಹಾದಿ, ಸವಾಲುಗಳನ್ನು ಎದುರಿಸಿದ ಬಗೆಯನ್ನು ಕಥೆ ಒಳಗೊಂಡಿದೆ. ಯೋಜನೆ ಆರಂಭಿಸುವಾಗ ಜನರಲ್ಲಿ ಇದ್ದ ಆತಂಕ, ಕ್ರಮೇಣ ಆತ್ಮವಿಶ್ವಾಸ ಮೂಡಿ ಸ್ವಯಂಸ್ಫೂರ್ತಿಯಿಂದ ಭಾಗವಹಿಸಿದ್ದು, ಮಹಿಳಾ ಸಶಕ್ತೀಕರಣ, ಆರ್ಥಿಕ ಚೈತನ್ಯ ನೀಡಿದ್ದು, ಇವೆಲ್ಲವನ್ನೂ ಒಳಗೊಂಡಿದೆ. ಕೆಲವರ ಒಂದಷ್ಟು ಪ್ರಶ್ನೆ, ಗೊಂದಲಗಳಿಗೆ ಸಿನೆಮಾ ಉತ್ತರ ನೀಡಲಿದೆ ಎನ್ನುತ್ತಾರೆ ಡಾ| ಎಲ್. ಎಚ್. ಮಂಜುನಾಥ್.
Related Articles
ರಾಜ್ಯದ 140ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನೆಮಾ ತೆರೆ ಕಾಣುತ್ತಿದೆ. ಯಶೋಗಾಥೆ ಸಹಿತ ಒಂದು ಸದಭಿರುಚಿಯ ಸಿನೆಮಾ ಇದಾಗಿದೆ. ಸಿನೆಮಾ ಹಣ ಮಾಡುವ ಉದ್ದೇಶದಿಂದ ಮಾಡಿದ್ದು ಅಲ್ಲ. ಎಲ್ಲರೂ ಮನೋರಂಜನೆ ದೃಷ್ಟಿಯಿಂದ ನೋಡಬೇಕು.
– ಡಾ| ಎಲ್.ಎಚ್. ಮಂಜುನಾಥ್, ಕಾ.ನಿ. ನಿರ್ದೇಶಕರು, ಧರ್ಮಸ್ಥಳ ಯೋಜನೆ
Advertisement