ಇಬ್ಬರ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದು, ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಕೊನೆಗೂ ಚಿರತೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿರತೆಯನ್ನು ಪಿಲಿಕುಳ ನಿಸರ್ಗಧಾಮಕ್ಕೆ ಒಯ್ಯಲಾಗಿದೆ. ಗಾಯಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
ಶುಕ್ರವಾರ ಬೆಳಗ್ಗೆ ಸ್ಥಳೀಯ ನಿವಾಸಿ ಸುಂದರ ಪೂಜಾರಿ ಅವರ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದ ಚಿರತೆ ಸುಮಾರು 10 ಗಂಟೆ ಹೊತ್ತಿಗೆ ಮೀನ ಪೂಜಾರಿ¤ ಎಂಬವರ ಮೇಲೂ ದಾಳಿ ನಡೆಸಿತ್ತು. ಈ ಚಿರತೆ ಕಳೆದ ಮೂರು-ನಾಲ್ಕು ದಿನಗಳಿಂದ ಈ ಪರಸರದಲ್ಲಿ ಓಡಾಡುತ್ತಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಹಿಂದೆಯೂ ಚಿರತೆಯ ಬಂಧನಕ್ಕೆ ಬೋನು ಅಳವಡಿಸಿದ್ದರೂ ಯಶಸ್ವಿಯಾಗಿರಲಿಲ್ಲ.
ಮಣಿಪಾಲ: ಪೆರ್ಣಂಕಿಲ ಸಮೀಪದ ಅಂಗಾರಕಟ್ಟೆ ಕೇನೆಕುಂಜದಲ್ಲಿ ಶುಕ್ರವಾರ ಉರುಳಿಗೆ ಬಿದ್ದಿದ್ದ 4 ವರ್ಷ ಪ್ರಾಯದ ಹೆಣ್ಣು ಚಿರತೆಯನ್ನು ಅರಣ್ಯ ಇಲಾಖೆ ಸಿಬಂದಿ ಉರುಳಿನಿಂದ ಬಿಡಿಸಿ ಸೆರೆ ಹಿಡಿಯುವ ಪ್ರಯತ್ನದ ವೇಳೆ ಮೃತಪಟ್ಟಿದೆ. ಚಿರತೆಯ ಸೊಂಟದ ಭಾಗ ಉರುಳಿನಲ್ಲಿ ಸಿಲುಕಿಕೊಂಡಿತ್ತು. ಅರಿವಳಿಕೆ ತಜ್ಞರು ಲಭ್ಯರಾಗದ್ದರಿಂದ ಇಲಾಖೆ ಸಿಬಂದಿಗೆ ಸುಲಭವಾಗಿ ಬಿಡಿಸಲು ಸಾಧ್ಯವಾಗಲಿಲ್ಲ.