Advertisement

ಕಂಠೀರವದಲ್ಲಿ ಅಥ್ಲೆಟಿಕ್ಸ್‌ ಮಾತ್ರವಿರಲಿ

12:37 AM Sep 06, 2019 | Team Udayavani |

ಬೆಂಗಳೂರು: ಅಥ್ಲೀಟ್‌ಗಳಿಗಾಗಿ ಮೀಸಲಿಟ್ಟಿರುವ ಕಂಠೀರವ ಕ್ರೀಡಾಂಗಣವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಕೆಎಎ (ಕರ್ನಾಟಕ ಅಥ್ಲೆಟಿಕ್ಸ್‌ ಸಂಸ್ಥೆ) ವತಿಯಿಂದ ಶುಕ್ರವಾರ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದೆ. ಉದ್ಯಾನನಗರಿಯ ಟೌನ್‌ಹಾಲ್ನಿಂದ ಬೆಳಿಗ್ಗೆ 11 ಗಂಟೆಗೆ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದೆ. ಅಥ್ಲೀಟ್ಸ್‌, ಮಾಜಿ ಅಥ್ಲೀಟ್ಸ್‌, ಕೋಚ್‌ಗಳು, ಕ್ರೀಡಾ ತಾರೆಯರ ಪೋಷಕರು, ಕ್ರೀಡಾಭಿಮಾನಿಗಳು ಕಂಠೀರವ ಕ್ರೀಡಾಂಗಣ ತನಕ ಕಾಲ್ನಡಿಗೆಯ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.

Advertisement

ಕ್ರೀಡಾ ಇಲಾಖೆ ವಿರುದ್ಧ ಅಸಮಾಧಾನ: ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆ ನಿಯಮ ಗಾಳಿಗೆ ತೂರಿ ವರ್ತಿಸುತ್ತಿದೆ. ಕ್ರೀಡಾಂಗಣವನ್ನು ವಾಣಿಜ್ಯ ಉದ್ದೇಶಕ್ಕೆ ನೀಡಲಾಗುತ್ತಿದೆ. ಇದನ್ನು ನಿಲ್ಲಿಸಬೇಕು. ಅಥ್ಲೆಟಿಕ್ಸ್‌ಗೆ ಮಾತ್ರ ಮೀಸಲಿಡುವಂತೆ ನೋಡಿಕೊಳ್ಳಬೇಕು. ಕೂಡಲೇ ಸಿಂಥೆಟಿಕ್‌ ಟ್ರ್ಯಾಕ್‌ ಸಿದ್ಧಪಡಿಸಬೇಕು. ಇದೆಲ್ಲ ಕಾರಣಗಳಿಂದ ಪ್ರತಿಭಟನೆ ನಡೆಸುತ್ತಿರುವುದಾಗಿ ಕೆಎಎ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲಿಸ್‌ ಜೋಸೆಫ್ ತಿಳಿಸಿದ್ದಾರೆ.

ನಮ್ಮಲ್ಲಿನ ಟ್ರ್ಯಾಕ್‌ ಹದಗೆಟ್ಟಿರುವುದರಿಂದ ಮುಕ್ತ ರಾಷ್ಟ್ರೀಯ ಅಥ್ಲೆಟಿಕ್ಸ್‌ಗೆ ಆತಿಥ್ಯವಹಿಸುವ ಅವಕಾಶ ಕೈತಪ್ಪಿತು. ಸದ್ಯ ಕ್ರೀಡಾಂಗಣದಲ್ಲಿ ನಮಗೆ ಸರಿಯಾಗಿ ತರಬೇತಿ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಎಲ್ಲವನ್ನು ಸರಿಪಡಿಸಬೇಕು. ಶುಕ್ರವಾರ ನಡೆಯಲಿರುವ ಪ್ರತಿಭಟನಾ ರ್ಯಾಲಿಯಲ್ಲಿ 1500 ರಿಂದ 2,000 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಜೋಸೆಫ್ ತಿಳಿಸಿದರು

ಕಳೆದ ಒಂದೂವರೆ ವರ್ಷಗಳಿಂದ ಬಿಎಫ್ಸಿ ಫ‌ುಟ್ಬಾಲ್ ತಂಡ ಕಂಠೀರವ ಒಳಾಂಗಣ ಪ್ರವೇಶಿಸಿತು. ಆ ಬಳಿಕ ಪ್ರತಿದಿನವೂ ಅಥ್ಲೀಟ್‌ಗಳು ಹಾಗೂ ಬಿಎಫ್ಸಿ ಸಿಬ್ಬಂದಿಗಳ ನಡುವೆ ಒಂದಲ್ಲ ಒಂದು ಕಾರಣಕ್ಕೆ ಮಾತಿನ ಚಕಮಕಿ ನಡೆದಿತ್ತು. ಸದ್ಯ ಈ ವಿಷಯದ ವಿಚಾರಣೆ ನ್ಯಾಯಾಲಯದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next