Advertisement

Kantara effect‌: ಗಣೇಶನ ವಿಗ್ರಹಕ್ಕೆ ಪಂಜುರ್ಲಿ ದೈವದ ಲುಕ್.! ಕರಾವಳಿಯಲ್ಲಿ ಆಕ್ರೋಶ

04:36 PM Sep 04, 2024 | Team Udayavani |

ಮುಂಬಯಿ: ರಿಷಬ್‌ ಶೆಟ್ಟಿ (Rishab Shetty) ಅವರ ʼಕಾಂತಾರʼ (Kantara) ಸಿನಿಮಾ ಬಂದ ಬಳಿಕ ತುಳುನಾಡಿನ ದೈವಗಳ ಮೇಲಿನ ನಂಬಿಕೆ ಎಲ್ಲೆಡೆ ಹಬ್ಬಿದೆ. ಆದರೆ ʼಕಾಂತಾರʼ ರಿಲೀಸ್ ಬಳಿಕ ದೈವಗಳ ವೇಷ -ಭೂಷಣ ತೊಟ್ಟು ದೈವಗಳ ಆರಾಧಕರ ಮನಸ್ಸಿಗೆ ಧಕ್ಕೆ ಆಗುವ ವಿಚಾರಗಳು ಕೂಡ ನಡೆದಿದೆ.

Advertisement

ಕರಾವಳಿಯಲ್ಲಿ ದೈವಗಳ ಆರಾಧನೆ ಇತ್ತೀಚೆಗಿನ ವರ್ಷಗಳಲ್ಲಿ ಆಚರಿಸಿಕೊಂಡು ಬಂದಿರುವಂಥದ್ದಲ್ಲ, ಸಾವಿರಾರು ವರ್ಷಗಳಿಂದಲೂ ದೈವ -ದೇವರುಗಳ ಚಾಕರಿಯನ್ನು ಮಾಡುತ್ತಾ ಬಂದಿರುವ ಅನೇಕ ಕುಟುಂಬಗಳು ನಮ್ಮಲಿದೆ.

ದೈವಗಳ ವಿಚಾರವನ್ನಿಟ್ಟುಕೊಂಡು ಹಾಸ್ಯಾಸ್ಪದವಾಗಿ ವರ್ತಿಸುವವರ ವಿರುದ್ಧ ತುಳುನಾಡಿಗರು ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಅನೇಕ ಬಾರಿ ಹಲವರನ್ನು ತರಾಟೆಗೆ ತೆಗೆದುಕೊಂಡದ್ದೂ ಇದೆ.

ಮುಂಬಯಿನಲ್ಲಿನ ಗಣೇಶ್‌ ಚತುರ್ಥಿ ಹಬ್ಬಕ್ಕಾಗಿ  ತಯಾರಾದ ಪಂಜುರ್ಲಿ ದೈವದ ಅವತಾರವುಳ್ಳ ಗಣೇಶನ ವಿಗ್ರಹವೊಂದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ʼಕಾಂತಾರʼ ಸಿನಿಮಾದಲ್ಲಿನ ಪಂಜುರ್ಲಿ ದೈವ ಲುಕ್‌ಗೆ ಗಣೇಶನ ಸೊಂಡಿಲು ಕೂರಿಸಿರುವ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಇದನ್ನು ಗಮನಿಸಿರುವ ಕರಾವಳಿ ಭಾಗದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ರೋಲ್‌ ಪೇಜ್‌ ಗಳಲ್ಲಿ ವಿಡಿಯೋ ಹಂಚಿಕೊಂಡು ಆಕ್ರೋಶ ಹೊರಹಾಕುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ಕೋಪರ್ಖೈರನೆನಲ್ಲಿ ಈ ಗಣೇಶ ವಿಗ್ರಹವನ್ನು ಸಿದ್ಧಪಡಿಸಲಾಗಿದ್ದು,ʼವಿನಾಯಕ ಪಗಾರೆ ಆರ್ಟ್‌ ವರ್ಕ್‌ʼ ಈ ವಿಡಿಯೋವನ್ನು ಹಂಚಿಕೊಂಡಿದ್ದು, ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next