Advertisement

Kantara-1 ಕ್ರೇಜ್: ಆ್ಯಕ್ಟಿಂಗ್ ಅವಕಾಶಕ್ಕೆ 25 ಸಾವಿರಕ್ಕೂ ಹೆಚ್ಚು ಅರ್ಜಿ!

05:12 PM Dec 23, 2023 | Team Udayavani |

ಒಂದು ಕಡೆ ರಿಷಭ್‌ ಶೆಟ್ಟಿ “ಕಾಂತಾರ-1′ ಸಿನಿಮಾದ ಪ್ರಿ ಪ್ರೊಡಕ್ಷನ್‌ ಕೆಲಸಗಳಲ್ಲಿ ಬಿಝಿಯಾದರೆ, ಇನ್ನೊಂದಷ್ಟು ಸಿನಿಮಾ ಆಸಕ್ತರು ಆ ಸಿನಿಮಾದಲ್ಲಿ ನಟಿಸುವ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. “ಕಾಂತಾರ-1’ನಲ್ಲಿ ನಟಿಸಲು 25 ಸಾವಿರಕ್ಕೂ ಹೆಚ್ಚು ಮಂದಿ ಅರ್ಜಿ ಹಾಕಿದ್ದಾರೆ.

Advertisement

ಹೌದು, ಕೆಲವು ದಿನಗಳ ಹಿಂದಷ್ಟೇ “ಕಾಂತಾರ-1′ ಚಿತ್ರದಲ್ಲಿ ನಟಿಸಲು ಕಲಾವಿದರು ಬೇಕಾಗಿ ದ್ದಾರೆ ಎಂದುಚಿತ್ರತಂಡ ಪ್ರಕಟಣೆ ನೀಡಿತ್ತು. ಅದರ ಪರಿಣಾಮ ಸುಮಾರು 25 ಸಾವಿರಕ್ಕೂ ಹೆಚ್ಚು ಮಂದಿ ಈ ಚಿತ್ರದಲ್ಲಿ ನಟಿಸಲು ಅರ್ಜಿ ಸಲ್ಲಿಸಿದ್ದಾರಂತೆ. ಇದು ಈ ಚಿತ್ರದ ಮೇಲಿನ ಕ್ರೇಜ್‌ ಅನ್ನು ತೋರಿಸುತ್ತದೆ.

ಇನ್ನು, ಕಳೆದ ತಿಂಗಳು ಬಿಡುಗಡೆಯಾಗಿರುವ ಚಿತ್ರದ ಫ‌ಸ್ಟ್‌ಲುಕ್‌ ಸಿನಿಮಾದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿರುವುದು ಸುಳ್ಳಲ್ಲ. ಫ‌ಸ್ಟ್‌ಲುಕ್‌ ನಲ್ಲಿ ನಟ ರಿಷಭ್‌ ಶೆಟ್ಟಿ ಭಯಂಕರವಾಗಿ ಕಾಣಿಸಿಕೊಂಡಿದ್ದಾರೆ. ಗುಹೆಯಂತಹ ಜಾಗದಲ್ಲಿ ಕೈಯಲ್ಲಿ ಕೊಡಲಿ ಹಾಗೂ ತ್ರಿಶೂಲ ಜೊತೆಗೆ ಮೈ ತುಂಬಾ ರಕ್ತದೊಂದಿಗೆ ನಿಂತಿರುವ ರಿಷಭ್‌ ಶೆಟ್ಟಿ ಲುಕ್‌ ಗಮನ ಸೆಳೆದಿದೆ. ಮೇಲ್ನೋಟಕ್ಕೆ ಯುದ್ಧ ಮಾಡುವಂತೆ ಕಾಣುತ್ತಿದ್ದು, ಚಿತ್ರದ ಕಥೆ ಕ್ರಿ.ಶ 345ರಿಂದ 540ರವರೆಗೆ ಆಳ್ವಿಕೆ ನಡೆಸಿದ್ದ ಕದಂಬರ ಕಾಲದ್ದು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next