Advertisement

ಆರ್‌ಸಿಬಿ ಪಂದ್ಯದಲ್ಲಿ ಕಾಂತಾರ ವೇಷ…ಹಲವರಿಂದ ಪ್ರಶಂಸೆ ಕೆಲವರಿಂದ ವಿರೋಧ

01:01 AM Apr 04, 2023 | Team Udayavani |

ಬೆಂಗಳೂರು: ರವಿವಾರ ರಾತ್ರಿ ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ-ಮುಂಬೈ ನಡುವಿನ ಐಪಿಎಲ್‌ ಪಂದ್ಯದ ವೇಳೆ ವೀಕ್ಷಕರು ವಿಭಿನ್ನ ವೇಷ ಧರಿಸಿ ಸ್ಟೇಡಿಯಂಗೆ ಆಗಮಿಸಿದ್ದರು. ಇದರಲ್ಲಿ ಸೂಪರ್‌ ಹಿಟ್‌ “ಕಾಂತಾರ’ದ ಪಂಜುರ್ಲಿ ದೈವದ ವೇಷವೂ ಒಂದು.

Advertisement

ವೀಕ್ಷಕರೊಬ್ಬರ ಈ ವೇಷ ವೈರಲ್‌ ಆಗುವುದರೊಂದಿಗೆ ಇದಕ್ಕೆ ಸಾಕಷ್ಟು ವಿರೋಧವೂ ವ್ಯಕ್ತವಾಗಿದೆ.

ಕ್ರಿಕೆಟ್‌ ಅಭಿಮಾನಿಯೊಬ್ಬರು ದೈವದ ವೇಷ ಧರಿಸಿ ಪಂದ್ಯವನ್ನು ಆಸ್ವಾದಿಸುತ್ತಿದ್ದರು. ಆರ್‌ಸಿಬಿ ತನ್ನ ಟ್ವಿಟರ್‌ ಖಾತೆಯಲ್ಲಿ ಈ ಚಿತ್ರವನ್ನು ಹಂಚಿಕೊಂಡಿದೆ. ಅನೇಕರು “ಕಾಂತಾರ’ದ ವೇಷ ಎಂದು ಪ್ರಶಂಸಿಸಿದರೆ, ಇನ್ನು ಹಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ದೈವಾರಾಧನೆಯನ್ನು ಈ ರೀತಿಯಾಗಿ ಬಳಸಿಕೊಳ್ಳುವುದು ಸರಿಯಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next