Advertisement

UP ; ಎಸ್ ಪಿ ಶಾಸಕ ಇರ್ಫಾನ್ ಸೋಲಂಕಿಗೆ 7 ವರ್ಷ ಜೈಲು ಶಿಕ್ಷೆ

08:29 PM Jun 07, 2024 | Team Udayavani |

ಕಾನ್ಪುರ: ಎಸ್‌ಪಿ ಶಾಸಕ ಇರ್ಫಾನ್ ಸೋಲಂಕಿ ಅವರಿಗೆ ಕಾನ್ಪುರದ ಎಂಪಿ-ಎಂಎಲ್‌ಎ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೆ 20 ಸಾವಿರ ರೂ. ದಂಡ ವಿಧಿಸಲಾಗಿದೆ. ಮಹಾರಾಜಗಂಜ್ ಜೈಲಿನಲ್ಲಿರುವ ಇರ್ಫಾನ್ ಸೋಲಂಕಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಎದುರಿಸಿದ್ದು, ಇರ್ಫಾನ್ ಸಹೋದರ ರಿಜ್ವಾನ್‌ಗೂ 7 ವರ್ಷ ಶಿಕ್ಷೆ ವಿಧಿಸಲಾಗಿದೆ.

Advertisement

ಜೂನ್ 3 ರಂದು, ಜಾಜ್ಮೌ ಬೆಂಕಿ ಹಚ್ಚಿ ಮನೆ ಸುಟ್ಟ ಪ್ರಕರಣದಲ್ಲಿ ಎಸ್ಪಿ ಶಾಸಕ ಇರ್ಫಾನ್ ಸೋಲಂಕಿ ಸೇರಿದಂತೆ 5 ಆರೋಪಿಗಳನ್ನು ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿತ್ತು. ಶಾಸಕ ಇರ್ಫಾನ್, ಅವರ ಸಹೋದರ ರಿಜ್ವಾನ್ ಸೋಲಂಕಿ, ಶೌಕತ್ ಪೆಹಲ್ವಾನ್, ಇಸ್ರೇಲ್ ಆತೆ ವಾಲಾ ಮತ್ತು ಮೊಹಮ್ಮದ್ ಷರೀಫ್ ಅವರನ್ನು ಎಂಪಿಎಂಎಲ್ ನ್ಯಾಯಾಲಯ ದೋಷಿಗಳೆಂದು ಘೋಷಿಸಿದೆ.

‘ಎಲ್ಲ ಅಪರಾಧಿಗಳಿಗೂ ಗರಿಷ್ಠ 7 ವರ್ಷಗಳು ಶಿಕ್ಷೆ ಏಕಕಾಲದಲ್ಲಿ ನಡೆಯುತ್ತವೆ. ಪ್ರತಿ ಅಪರಾಧಿಗೆ ಒಟ್ಟು 30,500 ರೂ. ದಂಡವನ್ನು ವಿಧಿಸಲಾಗಿದೆ. ನ್ಯಾಯಾಲಯದ ಆದೇಶವು ಸಮರ್ಥನೀಯವಾಗಿದೆ ಎಂದು ನಾನು ಭಾವಿಸುತ್ತೇನೆ’ ಎಂದು ಪ್ರಾಸಿಕ್ಯೂಷನ್ ವಕೀಲ ಪ್ರಾಚಿ ಶ್ರೀವಾಸ್ತವ್ ಹೇಳಿದ್ದಾರೆ.

ನಜೀರ್ ಫಾತಿಮಾ ಪರವಾಗಿ ಜಜ್ಮೌ ಪೊಲೀಸ್ ಠಾಣೆಯಲ್ಲಿ 8 ನವೆಂಬರ್ 2022 ರಂದು ಪ್ರಕರಣ ದಾಖಲಿಸಲಾಗಿತ್ತು. ಶಾಸಕ ಸೇರಿ ಒಟ್ಟು 12 ಮಂದಿಯನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ತನ್ನ ಮನೆಯನ್ನು ಎಲ್ಲರೂ ಸುಟ್ಟು ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು.

7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿರುವುದರಿಂದ ಇರ್ಫಾನ್ ಶಾಸಕ ಸ್ಥಾನದಿಂದ ಅನರ್ಹವಾಗುವುದು ಖಚಿತವಾಗಿದೆ, ಔಪಚಾರಿಕ ಘೋಷಣೆ ಮಾತ್ರ ಮಾಡಬೇಕಾಗಿದೆ. 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಸಿಸಮಾವು ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಅಜಂ ಖಾನ್ ಹಾಗೂ ಅವರ ಪುತ್ರನ ವಿಧಾನಸಭಾ ಸದಸ್ಯತ್ವವೂ ರದ್ದಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next