Advertisement
ಜ. 26ರಂದು ಭಾಯಂದರ್ ಪೂರ್ವದ ನವಘರ್ ರೋಡ್, ಗುರುದ್ವಾರ ಸಮೀಪದ ಸಚಿನ್ ತೆಂಡೂಲ್ಕರ್ ಮೈದಾನದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ದಶಮಾನೋತ್ಸವದ ಅಂಗವಾಗಿ ನಡೆದ ಸದಸ್ಯರ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಇವರು, ದಶಮಾನೋತ್ಸವದ ಹೊಸ್ತಿಲಿನಲ್ಲಿರುವ ಇಂದಿನ ಕ್ರಿಕೆಟ್ ಪಂದ್ಯಾಟ ಪತ್ರಕರ್ತ ಬಂಧುಗಳ ಸಮಾವೇಶವಾಗಿದೆ. ಮಾನಸಿಕ ನೆಮ್ಮದಿ, ದೈಹಿಕ ಸ್ಥಿರತೆಯನ್ನು ಕಾಪಾಡುವ ಕಾರ್ಯಚಟುವಟಿಕೆಗಳು ಸಂಸ್ಥೆಯಿಂದ ನಿರಂತರವಾಗಿ ನಡೆಯುತ್ತಿರಲಿ. ಅದಕ್ಕೆ ಬೇಕಾಗುವ ಎಲ್ಲ ರೀತಿಯ, ಸಹಾಯ, ಸಹಕಾರ ದೊರೆಯಲಿದೆ ಎಂದು ನುಡಿದು ಶುಭಹಾರೈಸಿದರು.
Related Articles
Advertisement
ಅತ್ಯುತ್ತಮ ಎಸೆತಗಾರ ಪ್ರಶಸ್ತಿಯನ್ನು ಅಶೋಕ್ ಆರ್. ದೇವಾಡಿಗ, ಸರಣಿ ಶ್ರೇಷ್ಠ ಹಾಗೂ ಉತ್ತಮ ವಿಕೆಟ್ ಕೀಪರ್ ಪ್ರಶಸ್ತಿಯನ್ನು ರಮೇಶ್ ಎಂ. ಬಿಲ್ಲವ, ಉತ್ತಮ ಕ್ಷೇತ್ರರಕ್ಷಕ ಪ್ರಶಸ್ತಿಯನ್ನು ಕರುಣಾಕರ ವಿ. ಶೆಟ್ಟಿ ಅವರು ಪಡೆದರು. ಅಲ್ಲದೆ ಉತ್ತಮ ದಾಂಡಿಗರಾಗಿ ಅಶೋಕ್ ಆರ್. ದೇವಾಡಿಗ ಮತ್ತು ಪುರಂದರ ಅಮೀನ್ ಅವರು ಬಹುಮಾನಕ್ಕೆ ಪಾತ್ರರಾದರು.
ವೇದಿಕೆಯಲ್ಲಿ ಉದ್ಯಮಿ ರವೀಂದ್ರ ಎಸ್. ಕರ್ಕೇರ, ಬಂಟ್ಸ್ ಸಂಘ ಮುಂಬಯಿ ಇದರ ಉನ್ನತ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಕಿಶೋರ್ ಕುಮಾರ್ ಶೆಟ್ಟಿ ಕುತ್ಯಾರು, ಸಂಘಟಕದ ದಿನೇಶ್ ಶೆಟ್ಟಿ ಕಾಪು ಅವರು ಉಪಸ್ಥಿತರಿದ್ದು ಶುಭಹಾರೈಸಿದರು. ವೀಕ್ಷಕ ವಿವರಣೆ ನೀಡಿದ ಶ್ರೀ ಅಯ್ಯಪ್ಪ ವೃಂದದ ಕೋಶಾಧಿಕಾರಿ ವಿಶ್ವನಾಥ ಎನ್. ಶೆಟ್ಟಿ, ಮೀರಾ-ಭಾಯಂದರ್ ಬಂಟ್ಸ್ ಫೋರಂನ ಸುಖ್‌ದೀಪ್ ಶೆಟ್ಟಿ, ತೀರ್ಪುಗಾರರಾಗಿ ಸಹಕರಿಸಿದ ರಮಾನಂದ ಪೂಜಾರಿ, ಶ್ರೀಕಾಂತ್ ಪೂಜಾರಿ, ಗಂಗಾಧರ ಪೂಜಾರಿ ಮತ್ತು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಜಯ ಸಿ. ಪೂಜಾರಿ, ಸದಸ್ಯ ಉಮೇಶ್ ಅಂಚನ್ ಅವರನ್ನು ಗೌರವಿಸಲಾಯಿತು.
ಗೌರವ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಸ್ವಾಗತಿಸಿದರು. ಉಪಾಧ್ಯಕ್ಷ ದಯಾಸಾಗರ್ ಚೌಟ ಸ್ವಾಗತಿಸಿದರು. ತಾರಾ ಆರ್. ಬಂಟ್ವಾಳ್, ಸವಿತಾ ಎಸ್. ಶೆಟ್ಟಿ, ವಿದ್ಯಾ ಎಂ. ಭಂಡಾರಿ ರಾಷ್ಟÅಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ತುಳು-ಕನ್ನಡೇತರರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಉದ್ಯಮಿಗಳು ಆಗಮಿಸಿ ಶುಭಹಾರೈಸಿದರು.
ಚಿತ್ರ-ವರದಿ: ರಮೇಶ್ ಅಮೀನ್