ಮುಂಬಯಿ: ಭಾರತೀಯ ನೀತಿ ಆಯೋಗ, ಭಾರತೀಯ ಸಾಮಾಜಿಕ ನ್ಯಾಯ ಸಮಿತಿ ಹಾಗೂ ಅಂತಾರಾಷ್ಟ್ರೀಯ ಯುನೈಟೆಡ್ ಸ್ಟೇಟ್ ಆರ್ಗನೈಸೇಶನ್ ಜಿನಿವಾ ಇವುಗಳ ಸಹಯೊಗತ್ವದ ಯಶ್ ಟ್ರಸ್ಟ್ ಕೊಡ ಮಾಡುವ ಕರ್ನಾಟಕ ಶಿಕ್ಷಣ ಗೌರವ ಶ್ರೇಷ್ಠ ಶಿಕ್ಷಕ ಪ್ರಶಸ್ತಿ-2020ಕ್ಕೆ ಹೊರನಾಡ ಕನ್ನಡಿಗನಾಗಿ ಬೃಹನ್ಮುಂಬಯಿ ಮಹಾನಗರ ಪಾಲಿಕೆ ಕನ್ನಡ ಶಾಲೆಯ ಶಿಕ್ಷಕ, ಯುವ ಲೇಖಕ ದುರ್ಗಪ್ಪ ಯು. ಕೋಟಿಯವರ್ ಅವರು ಆಯ್ಕೆಯಾಗಿದ್ದು ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ| ಸಚಿನ್ ಶರ್ಮ ಅವರು ಕೋಟಿಯವರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ದುರ್ಗಪ್ಪ ಅವರ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ಅವರನ್ನು ಪ್ರಾಥಮಿಕ ಶಾಲಾ ವಿಭಾಗದ ಶ್ರೇಷ್ಠ ಶಿಕ್ಷಕ 2020ರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ದಿಲ್ಲಿಯ ಜೆಎನ್‌ಯು ವಿಶ್ವವಿದ್ಯಾ ನಿಲಯದ ಉಪಕುಲಪತಿ ಡಾ| ರಾಜ್ ಸಿಂಗ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ಚಿಂತಕ, ಯುವ ವಿಜ್ಞಾನಿ, ವಿದ್ವಾಂಸ ಡಾ| ತಮ್ಮಯ್ಯ, ಡಾ| ಗುರುಕುಲಂ ಗಣಪತಿ ರೆಡ್ಡಿ, ಡಾ| ಹರಿಕೃಷ್ಣ ಮಾರನ್, ಡಾ| ಪ್ರಭಾಕರನ್, ಡಾ| ಎಂ. ಎಂ. ಮಹಾದೇವಪ್ಪ, ರಿಜಮನ್ ಅಸಾನ್, ಡಾ| ರೇವತಿ ಅಯ್ಯರ್, ಡಾ| ಸರೀತಾ ಶೆಟ್ಟಿ ಸಹಿತ ಅನೇಕ ಉಪನ್ಯಾಸಕರು, ಶಿಕ್ಷಕರು ಉಪ ಸ್ಥಿತರಿದ್ದರು. ಅಯ್ನಾಜ್ ಜಾಂಜೆರಿಯಾ ಪ್ರಸ್ತಾವಿಸಿದರು. ಪ್ರತಿಭಾ ಗೌಡ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಇದನ್ನೂ ಓದಿ:26ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ ಸಂಪನ್ನ
ದುರ್ಗಪ್ಪ ಕೋಟಿಯವರ್ ಮುಂಬ ಯಿಯ ಶಿವಿxಯಲ್ಲಿನ ಮಹಾನಗರ ಪಾಲಿಕೆ ಸಂಚಾಲಿತ ಕನ್ನಡ ಶಾಲೆ ಯಲ್ಲಿ ಅಧ್ಯಾಪಕ ರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. “ಮುಂಬಯಿಯಲ್ಲಿ ಕನ್ನಡದ ಡಿಂಡಿಮ’ ದುರ್ಗಪ್ಪ ಕೋಟಿಯವರ್ ಅವರ ಚೊಚ್ಚಲ ಕೃತಿಯಾಗಿದೆ. ಶಾಲೆಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳಿಗೆ ವಿಶೇಷ ಪ್ರೋತ್ಸಾಹ, ಬೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಹೊಸ ತಂತ್ರಜ್ಞಾನಗಳ ಬಳಕೆಯಿಂದ ವಿದ್ಯಾರ್ಥಿಪ್ರಿಯ ಶಿಕ್ಷಕರಾಗಿದ್ದಾರೆ.ಒಳ ಮತ್ತು ಹೊರನಾಡಿನ ಅನೇಕ ಪತ್ರಿಕೆಗಳಲ್ಲಿ ಬಿಡಿ ಲೇಖನ, ವರದಿ ಗಳನ್ನು ಬರೆದು ಪ್ರಕಟಿಸುತ್ತಿರುವ ಇವರು ಕರ್ನಾಟಕ ಸಂಘ ಮುಂಬಯಿ ಇದರ ಸ್ನೇಹ ಸಂಬಂಧ ಮಾಸಿಕದಲ್ಲಿ ಸೇವಾ ನಿರತರಾಗಿದ್ದು, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸದಸ್ಯರಾಗಿದ್ದಾರೆ.