Advertisement

ಬಾಲಿವುಡ್ ಹಿಂದಿಕ್ಕಿದ ‘ಕೆಜಿಎಫ್-2’: ಅಗ್ರಸ್ಥಾನದಲ್ಲಿ ಕನ್ನಡದ ಸಿನಿಮಾ

02:42 PM Jun 29, 2021 | Team Udayavani |

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ನಟಿಸಿರುವ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ಬಿಡುಗಡೆಯ ಮುನ್ನವೆ ದಾಖಲೆಗಳನ್ನು ಬರೆಯುತ್ತಿದೆ. ಈ ವರ್ಷ ತೆರೆ ಕಾಣಲಿರುವ ಬಹುಭಾಷಾ ಸಿನಿಮಾ ‘ಕೆಜಿಎಫ್ 2’ ಇದೀಗ ಮತ್ತೊಂದು ರೆಕಾರ್ಡ್ ಕ್ರಿಯೇಟ್ ಮಾಡಿದೆ.

Advertisement

ಹೌದು, ಭಾರತದ ಬಹುನಿರೀಕ್ಷೆಯ ಸಿನಿಮಾಗಳ ಪಟ್ಟಿಯಲ್ಲಿ ಕೆಜಿಎಫ್-2 ಮೊದಲ ಸ್ಥಾನದಲ್ಲಿದೆ. IMDb ಬಿಡುಗಡೆ ಮಾಡಿರುವ ಭಾರತದ ಹೆಚ್ಚು ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಬಾಲಿವುಡ್ ಸೇರಿದಂತೆ ಬೇರೆ ಭಾಷೆಯ ಸಿನಿಮಾಗಳನ್ನು ಹಿಂದಿಕ್ಕಿರುವ ಕೆಜಿಎಫ್ ಸಿನಿಮಾ ಅಗ್ರಸ್ಥಾನದಲ್ಲಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 1 ಸಿನಿಮಾ ಭಾರತೀಯ ಚಿತ್ರರಂಗ ಚಂದನವನದತ್ತ ತಿರುಗಿ ನೋಡುವಂತೆ ಮಾಡಿತು. ಪ್ಯಾನ್ ಇಂಡಿಯಾ ಚಿತ್ರವಾಗಿ ದೇಶಾದ್ಯಂತ ತೆರೆ ಕಂಡ ಕೆಜಿಎಫ್ ಹೊಸ ದಾಖಲೆಗಳನ್ನು ಬರೆಯಿತು. ಇದೀಗ ಚಾಪ್ಟರ್ 2 ಸಿನಿಮಾ ಕೂಡ ಬೆಟ್ಟದಷ್ಟು ನಿರೀಕ್ಷೆ ಮೂಡಿಸಿದೆ. ನವೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಸಿನಿಮಾ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಇನ್ನು ವಿಶೇಷ ಎಂದರೆ 2ನೇ ಸ್ಥಾನದಲ್ಲಿ ಪುಷ್ಪ ಚಿತ್ರವಿದೆ. ಮೂರನೆ ಸ್ಥಾನದಲ್ಲಿ ಮೋಹನ್ ಲಾಲ್ ನಟನೆಯ ಮರಕ್ಕರ್: ಅರೇಬಿಯನ್ ಸಿ ಲಯನ್ ಸಿನಿಮಾವಿದೆ. 4ನೇ ಸ್ಥಾನದಲ್ಲಿ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ನಟನೆಯ ರಾಧೆ ಶ್ಯಾಮ್ ಸಿನಿಮಾವಿದೆ. 5ನೇ ಸ್ಥಾನದಲ್ಲಿ ತಾಪ್ಸಿ ಪನ್ನು ನಟನೆಯ ಹಸೀನ್ ದಿಲ್ ರುಬಾ ಚಿತ್ರವಿದೆ.

Advertisement

Udayavani is now on Telegram. Click here to join our channel and stay updated with the latest news.

Next