ಮುಂಬಯಿ: ಘಾಟ್‌ಕೋಪರ್ ಪಂತ್ ನಗರದಲ್ಲಿರುವ ಕನ್ನಡ ವೆಲ್ಫೆàರ್ ಸೊಸೈಟಿಯ ಸುವರ್ಣ ಮಹೋತ್ಸವದ ಅಂಗವಾಗಿ ವಿಕ್ರೋಲಿ ಪೂರ್ವದ ಕನ್ನಮ್‌ವಾರ್ ನಗರದ ಜನತಾ ಶಿಕ್ಷಣ ಪ್ರಸಾರಕ ಮಂಡಳಿ ಸಂಚಾಲಿತ ಪ್ರಗತಿ ಬುದ್ಧಿಮಾಂದ್ಯ ಶಾಲೆಯ ಸುಮಾರು 20 ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸಲಾಯಿತು.
ಕನ್ನಡ ವೆಲ್ಫೆàರ್ ಸೊಸೈಟಿ ಘಾಟ್‌ಕೋಪರ್ ಇದರ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಬಾಳಿಕೆ ಇವರ ನೇತೃತ್ವದಲ್ಲಿ ಕನ್ನಡ ವೆಲ್ಫೆàರ್ ಸೊಸೈಟಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಪ್ರಗತಿ ಬುದ್ಧಿಮಾಂದ್ಯ ಮತ್ತು ಅಂಗವಿಕಲ ಶಾಲೆಗೆ ಭೇಟಿನೀಡಿ ಸುಮಾರು 25 ಸಾವಿರ ರೂ. ಗಳ ನಿಧಿಯನ್ನು ನೀಡಿದರು. ಈ ಸಂದರ್ಭದಲ್ಲಿ ವಿಕ್ರೋಲಿಯ ಯುಗಾನಂದ ಶೆಟ್ಟಿ ಮತ್ತು ಗಣೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಫೆ. 12 ರಂದು ಪ್ರಗತಿ ವಿದ್ಯಾಲಯದ ಟ್ರಸ್ಟಿಗಳೊಂದಿಗೆ ಸಮಾಲೋಚನೆ ನಡೆಸಿದ 15 ಮಂದಿಯ ಸದಸ್ಯರ ತಂಡವು ಸಂಸ್ಥೆಯ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದ ಬಗ್ಗೆ ಮಾಹಿತಿಯನ್ನು ಕಲೆಹಾಕಿತು. ಈ ಸಂದರ್ಭದಲ್ಲಿ ಕನ್ನಡ ವೆಲ್ಫೆàರ್ ಸೊಸೈಟಿಯ ಮಾಜಿ ಅಧ್ಯಕ್ಷ ನಂದಳಿಕೆ ನಾರಾಯಣ ಶೆಟ್ಟಿ, ಕೋಶಾಧಿಕಾರಿ ಹರೀಶ್ ಶೆಟ್ಟಿ, ಜತೆ ಕೋಶಾಧಿಕಾರಿ ರಾಧಾಕೃಷ್ಣ ಶೆಟ್ಟಿ, ಜತೆ ಕಾರ್ಯದರ್ಶಿ ರಮಾನಂದ ಶೆಟ್ಟಿ, ಪೀಟರ್ ರೊಡ್ರಿಗಸ್, ಹೆರಿಯಣ್ಣ ಶೆಟ್ಟಿ, ಎಸ್. ಕೆ. ಸೂರಪ್ಪ, ಸುರೇಶ್ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತಾ ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ವಿದ್ಯಾ ಶೇs… ಮೊದಲಾದವರು ಉಪಸ್ಥಿತರಿದ್ದರು.
ಪ್ರಗತಿ ಶಿಕ್ಷಣ ಸಂಸ್ಥೆಯಲ್ಲಿರುವ ಬುದ್ಧಿಮಾಂದ್ಯ, ಅಂಗವಿಕಲ ಮಕ್ಕಳನ್ನು ಭೇಟಿಗೈದ ಈ ತಂಡವು ಮಕ್ಕಳ ಯೋಗಕ್ಷೇಮವನ್ನು ವಿಚಾರಿಸಿ ಮಕ್ಕಳಿಗೆ ಬಿಸ್ಕಿಟ್, ಚಾಕಲೇಟ್ ಇನ್ನಿತರ ತಿಂಡಿ-ತಿನಸುಗಳನ್ನು ವಿತರಿಸಿ ಮಕ್ಕಳೊಂದಿಗೆ ಕಾಲ ಕಳೆದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕನ್ನಡ ವೆಲ್ಫೆàರ್ ಸೊಸೈಟಿಯ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಬಾಳಿಕೆ ಇವರು ಮಾತನಾಡಿ, ನಮ್ಮ ಸೊಸೈಟಿಯು ಕೂಡಾ ಆರ್ಥಿಕವಾಗಿ ಅಭಿವೃದ್ಧಿಯನ್ನು ಕಂಡಿಲ್ಲ. ಸಣ್ಣ ಸಂಸ್ಥೆ ನಮ್ಮದಾದರೂ ಇಲ್ಲಿಯ ಸದಸ್ಯರ ಹೃದಯವೈಶಾಲ್ಯತೆ ಬಹು ದೊಡ್ಡದಾಗಿದೆ. ಆದ್ದರಿಂದ ಭವಿಷ್ಯದಲ್ಲೂ ಈ ಸಂಸ್ಥೆಗೆ ನಮ್ಮಿಂದಾದ ಎಲ್ಲಾ ರೀತಿಯ ಸಹಾಯ, ಸಹಕಾರವನ್ನು ನೀಡಲು ಹಿಂಜರಿಯುವುದಿಲ್ಲ. ನಾವೆಲ್ಲರು ಒಂದಾಗಿ ಇಂತಹ ಕಾರ್ಯಗಳಿಗೆ ನಮ್ಮಿಂದಾದ ಸಹಾಯವನ್ನು ಹಸ್ತವನ್ನು ನೀಡುತ್ತೇವೆ ಎಂದು ನುಡಿದು ಮಕ್ಕಳಿಗೆ ಶುಭಹಾರೈಸಿದರು.
ವಿಕ್ರೋಲಿ ಪೂರ್ವದ ಕನ್ನಮ್‌ವಾರ್ ನಗರದ ಜನತಾ ಶಿಕ್ಷಣ ಪ್ರಸಾರಕ ಮಂಡಳಿ ಸಂಚಾಲಿತ ಪ್ರಗತಿ ವಿದ್ಯಾಲಯವು ಕಳೆದ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ನೂರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಸರಕಾರದಿಂದ ಯಾವುದೇ ರೀತಿಯ ಸಹಕಾರವಾಗಲಿ ಸಿಗುತ್ತಿಲ್ಲ. ಅಲ್ಲದೆ ಶಿಕ್ಷಕರಿಗೆ ಅನುದಾನವೂ ದೊರೆಯುತ್ತಿಲ್ಲ. ಇಲ್ಲಿ ಬರುವ ಮಕ್ಕಳು ಆರ್ಥಿಕವಾಗಿ ತೀರಾ ಹಿಂದುಳಿದಿದ್ದು, ನಿಮ್ಮಂತಹ ಹಲವಾರು ಸಂಸ್ಥೆಗಳು ಇಲ್ಲಿಗೆ ಭೇಟಿ ನೀಡಿ ಸಹಕರಿಸುತ್ತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಸಂಸ್ಥೆಯ ಟ್ರಸ್ಟಿಗಳಲ್ಲೊಬ್ಬರು ತಿಳಿಸಿದರು.